ಕಳೆದ ವಾರ ಕರೆ ಮಾಡಿದ ಸ್ನೇಹಿತರೊಬ್ಬರು, ದೊಡ್ಡ ಸಮಸ್ಯೆಯೊಂದರಲ್ಲಿ ತಾವು ಸಿಲುಕಿದ್ದಾಗಿ ಹೇಳಿ, ಸಹಾಯ ಕೇಳಿದರು. ಅವರು ಕೋಲ್ಕತ್ತದಲ್ಲಿದ್ದರು. ಮರುದಿನ ಬೆಂಗಳೂರಿಗೆ ಹಾರಬೇಕಿದ್ದ ಇಂಡಿಗೊ ವಿಮಾನ ಸಂಚಾರವು ರದ್ದಾಗಿತ್ತು. ಪತ್ನಿ, ಪುತ್ರಿ ಹಾಗೂ ಮಗ ಕೂಡ ಅವರೊಟ್ಟಿಗೆ ಪಯಣಿಸುವವರಿದ್ದರು. ಮಗಳ ಮದುವೆಯು ಬೆಂಗಳೂರಿನ ವರನೊಟ್ಟಿಗೆ ನಿಶ್ಚಯ ವಾಗಿತ್ತು. ಮರುದಿನವೇ ಮದುವೆ. ವಿಮಾನಯಾನ ಸಂಸ್ಥೆಯ ಯಾರೊಬ್ಬರನ್ನೂ ಸಂಪರ್ಕಿಸುವುದು ಅವರಿಗೆ ಕಷ್ಟವಾಗಿತ್ತು. ಹೀಗಾಗಿ ನನಗೆ ಕರೆ ಮಾಡಿದರು.

ವಿಮಾನ ಸಂಚಾರ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನನ್ನ ಪರಿಚಯಸ್ಥರೊಬ್ಬರಿಗೆ ಕರೆ ಮಾಡಿದೆ. ಆತಂಕದಲ್ಲಿದ್ದ ವಧು ಹಾಗೂ ಅವರ ಮನೆಯವರ ಪ್ರಯಾಣಕ್ಕೆ ಬೇರೆ ವಿಮಾನದಲ್ಲಿ ಹೇಗಾದರೂ ವ್ಯವಸ್ಥೆ ಮಾಡುವಂತೆ ವಿನಂತಿಸಿದೆ. ಅದೃಷ್ಟವಶಾತ್ ನಾನು ಸಂಪರ್ಕಿಸಿದ ವ್ಯಕ್ತಿಯು ಈ ಹಿಂದೆ ಏರ್ಡೆಕ್ಕನ್ನಲ್ಲಿ ಇದ್ದವರು. ವಿಮಾನ ಸಿಬ್ಬಂದಿಯ ಕರ್ತವ್ಯದ ಅವಧಿ ವಿಷಯದಲ್ಲಿ ಹೊಸ ನಿಯಮ ಜಾರಿಗೆ ಬಂದಮೇಲೆ ಪೈಲಟ್ಗಳನ್ನು ಪಾಳಿಗಳಿಗೆ ತಕ್ಕಂತೆ ನಿಯೋಜಿಸುವುದೇ ಜಟಿಲ ಸಮಸ್ಯೆಯಾಗಿದ್ದು, ಅದು ಊಹಾತೀತ ಪ್ರಮಾಣದಲ್ಲಿದೆ ಎಂದು ಇಂಡಿಗೊ ಅಧಿಕಾರಿಗಳು ಒಪ್ಪಿಕೊಂಡರು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಫ್ಲೈಟ್ಡ್ಯೂಟಿ ಟೈಮ್ ಲಿಮಿಟೇಷನ್ (ವಿಮಾನ ಸಂಚಾರ ಕರ್ತವ್ಯಾವಧಿಯ ಮಿತಿ–ಎಫ್ಡಿಟಿಎಲ್) ಹೇರಿದ್ದೇ ಇದಕ್ಕೆ ಕಾರಣವಾಗಿತ್ತು. ಯಾವ ವಿಮಾನದ ಹಾರಾಟ ಸಾಧ್ಯವಾಗಲಿದೆ, ಯಾವುದು ರದ್ದಾಗಲಿದೆ ಎಂದು ಆ ಕ್ಷಣದಲ್ಲಿ ಸ್ಪಷ್ಟವಾಗಿ ಹೇಳಲು ಆಗುತ್ತಲೇ ಇಲ್ಲ ಎನ್ನುವುದನ್ನು ನನ್ನ ಸ್ನೇಹಿತರು ತಿಳಿಸಿದರು. ಸಹಾಯ ಮಾಡುವ ಭರವಸೆಯನ್ನೂ ಕೊಟ್ಟರು.

ವಧು ಅದೃಷ್ಟವಂತಳು. ಹಲವು ವಿಮಾನಗಳು ರದ್ದಾದ ನಂತರವೂ ಮುಹೂರ್ತಕ್ಕೆ ಕೆಲವು ಗಂಟೆಗಳಿರುವಾಗಲೇ ಬೆಂಗಳೂರು ತಲಪಿದಳು. ಕೆಲವು ದಶಕಗಳ ಹಿಂದೆ ನಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾಗಿನ ಘಟನೆಯೊಂದು ಆಗ ನೆನಪಾಯಿತು.

ಚೀನಾ ಗಡಿಯ ಎತ್ತರದ ಪ್ರದೇಶದಲ್ಲಿ ನಮ್ಮ ರೆಜಿಮೆಂಟ್ ಕಾರ್ಯತತ್ಪರವಾಗಿದ್ದ ಸಂದರ್ಭ ಅದು. ದಟ್ಟ ಹಿಮವೃಷ್ಟಿಯಿಂದಾಗಿ, ಅಲ್ಲಲ್ಲಿ ಭೂಕುಸಿತ ಉಂಟಾಗಿತ್ತು. ನಮ್ಮ ರೆಜಿಮೆಂಟ್ನ ಒಬ್ಬ ಯೋಧ ಉತ್ತರ ಪ್ರದೇಶದ ತನ್ನೂರಿಗೆ ಹೋಗಲು ರೈಲು ಹತ್ತುವುದಕ್ಕಾಗಿ ಸಿಲಿಗುರಿ ತಲಪಲು ಸಾಧ್ಯವಾಗಿರಲಿಲ್ಲ. ಅವನೂ ಆಗ ಮದುವೆಯ ವರ. ಮುಹೂರ್ತ ಮುಂದೂಡಲು ಸಾಧ್ಯವೇ ಇಲ್ಲ ಎಂದು ಪುರೋಹಿತರು ಹೇಳಿಬಿಟ್ಟಿದ್ದರು. ವಧುವಿನೊಟ್ಟಿಗೆ ವರನ ಫೋಟೊ ಇರಿಸಿ, ಆಗ ಅವರಿಬ್ಬರ ಮದುವೆ ಶಾಸ್ತ್ರಗಳನ್ನು ಮುಗಿಸಿದ್ದರು.

ಹಿಮಕುಸಿತವು ಪ್ರಕೃತಿಸಹಜವಾದ ವಿದ್ಯಮಾನ. ಇಂಡಿಗೊ ವಿಮಾನಗಳಿಗೆ ಸಂಬಂಧಿಸಿದ ವಿದ್ಯಮಾನವು ಸ್ವಯಂಕೃತ. ಪೈಲಟ್ಗಳಿಗೆ ವಿಧಿಸಲಾಗಿದ್ದ ಎಫ್ಡಿಟಿಎಲ್ ನಿಯಮಗಳನ್ನು ಸರ್ಕಾರವು ಡಿ. 5ರಂದು ತಡೆಹಿಡಿಯಿತು. ಆ ದಿನವೊಂದರಲ್ಲೇ ಇಂಡಿಗೊದ 1,000ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾದ ನಂತರ ನಡೆದ ಬೆಳವಣಿಗೆ ಇದು. ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಸಿಲುಕಿಕೊಂಡರು. ‘ಮಾರ್ಕೆಟ್ ಲೀಡರ್’ ಎನಿಸಿಕೊಂಡಿರುವ ವಿಮಾನ ಸಂಸ್ಥೆಯ ಎದುರು ದೇಶವೇ ಒತ್ತೆಯಾಳಿನಂತಾದ ಸ್ಥಿತಿ ಇದು.

ಪೈಲಟ್ಗಳು ಹಾಗೂ ವಿಮಾನಯಾನದ ಸಿಬ್ಬಂದಿ ಗರಿಷ್ಠ ಎಷ್ಟು ಅವಧಿ ಕೆಲಸ ನಿರ್ವಹಿಸಬೇಕು ಎನ್ನುವುದನ್ನು ನಿಯಂತ್ರಿಸುವ ನಿಯಮಗಳ ಗುಚ್ಛವೇ ಎಫ್ಡಿಟಿಎಲ್. ವಿಮಾನ ಸಿಬ್ಬಂದಿ ಸುದೀರ್ಘಾವಧಿ ಕೆಲಸ ಮಾಡುವುದರಿಂದ ದಣಿವು ಉಂಟಾಗುವ ಸಾಧ್ಯತೆ ಇರುತ್ತದೆ. ಅದನ್ನು ತಪ್ಪಿಸಿ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವುದು ಇದರ ಜಾರಿಯ ಉದ್ದೇಶ. ವರ್ಷವೊಂದರಲ್ಲಿ ಪೈಲಟ್ 900 ತಾಸು ವಿಮಾನ ಹಾರಿಸಬಹುದು. ಆದರೆ, 28 ದಿನಗಳಲ್ಲಿ 100 ತಾಸಿನ ಹಾರಾಟದ ಅವಧಿಯನ್ನು ಮೀರಬಾರದು. ಇಬ್ಬರು ಪೈಲಟ್ಗಳು ಒಂದೇ ಬಾರಿಗೆ ಎಂಟು ತಾಸಿಗಿಂತ ಹೆಚ್ಚು ಅವಧಿ ಅಥವಾ ಮೂರ್ನಾಲ್ಕು ಪೈಲಟ್ಗಳು ಒಂದು ದಿನದಲ್ಲಿ 13–16 ತಾಸು ವಿಮಾನಯಾನ ಮಾತ್ರ ನಡೆಸಬೇಕು. ಐದಾರು ಕಡೆಯಷ್ಟೇ ನಿಲುಗಡೆ ಇರಬೇಕು ಹಾಗೂ ರಾತ್ರಿ ವೇಳೆಯಲ್ಲಿ ಲ್ಯಾಂಡಿಂಗ್ ಕಡಿಮೆ ಇರಬೇಕು. ಸಾಮಾನ್ಯವಾಗಿ ವಿಮಾನಯಾನಕ್ಕೆ ಒಂದು ತಾಸು ಮೊದಲು ಪೈಲಟ್ನ ಕರ್ತವ್ಯದ ಅವಧಿ ಶುರುವಾಗುತ್ತದೆ. ಗಮ್ಯವನ್ನು ತಲುಪಿದ ನಂತರ ಪೂರ್ಣಗೊಳ್ಳುತ್ತದೆ.

ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯು (ಐಸಿಎಒ) ಜಾಗತಿಕವಾಗಿ ಒಂದಿಷ್ಟು ಮಾನದಂಡಗಳನ್ನು ನಿಗದಿಪಡಿಸುತ್ತದೆ. ಅವನ್ನು ದೇಶಗಳು ಅಳವಡಿಸಿಕೊಳ್ಳಬೇಕು. ಎರಡು ಪ್ರಮುಖ ನಿಯಂತ್ರಣ ಸಂಸ್ಥೆಗಳೆಂದರೆ, ಯುಎಸ್ ಫೆಡರಲ್ ವಿಮಾನಯಾನ ಆಡಳಿತ (ಎಫ್ಎಎ) ಹಾಗೂ ಐರೋಪ್ಯ ಒಕ್ಕೂಟ ನಾಗರಿಕ ವಿಮಾನಯಾನ ಸುರಕ್ಷತಾ ಸಂಸ್ಥೆ (ಇಎಎಸ್ಎ). ಇವು ಜಗತ್ತಿನಲ್ಲೇ ಅತಿ ಹೆಚ್ಚು ವಿಮಾನ ಸಂಚಾರವನ್ನು ನಿರ್ವಹಿಸುತ್ತಿವೆ. ಎಲ್ಲವೂ ಐಸಿಎಒ ನಿಯಮಗಳನ್ನೇ ಅನುಸರಿಸುತ್ತಿವೆ.

ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಅನುಸರಿಸುವ ಎಫ್ಡಿಟಿಎಲ್ ಮಾರ್ಗದರ್ಶಿ ಸೂತ್ರವು ಐಸಿಎಒ ಮಾದರಿಯದ್ದಲ್ಲ; ಎಫ್ಎಎ ಅಥವಾ ಇಎಎಸ್ಎ ಸ್ವರೂಪದ್ದೂ ಅಲ್ಲ. ಭಾರತೀಯ ಪೈಲಟ್ಗಳ ಒಕ್ಕೂಟ ಹಾಗೂ ಇತರ ಸಂಸ್ಥೆಗಳು ಒತ್ತಡ ಹಾಕುತ್ತಲೇ ಬಂದಿದ್ದರಿಂದ ಐಸಿಎಒ ನಿಯಮಗಳಿಗೆ ಹೊಂದಿಕೆಯಾಗುವಂಥ ಎಫ್ಡಿಟಿಎಲ್ ಜಾರಿಗೆ ತರಲಾಯಿತು. ವಿಮಾನಯಾನ ವ್ಯವಸ್ಥಾಪನಾ ಸಂಸ್ಥೆಗಳು ಶೋಷಣೆ ಮಾಡುತ್ತಿದ್ದು, ಪೈಲಟ್ಗಳಿಗೆ ದೀರ್ಘಾವಧಿ ಸಂಚಾರ ನಡೆಸುವಂತೆ ಒತ್ತಡ ಹೇರುತ್ತಿವೆ. ಇದು ಅಸುರಕ್ಷಿತ ಹಾಗೂ ಒತ್ತಡ ಹೇರುವ ವಿದ್ಯಮಾನ ಎಂದು ಪೈಲಟ್ಗಳ ಒಕ್ಕೂಟ ಬೇಸರ ಹೊರಹಾಕಿದೆ.

ವಿಮಾನಯಾನ ಸಂಸ್ಥೆಗಳು, ಪೈಲಟ್ಗಳ ಒಕ್ಕೂಟ ಹಾಗೂ ಸಂಬಂಧಪಟ್ಟ ಸಂಸ್ಥೆಗಳೊಟ್ಟಿಗೆ ಡಿಜಿಸಿಎ ವಿಸ್ತೃತವಾದ ಸಂವಾದ ನಡೆಸಿತ್ತು. ಅದರಲ್ಲಿ ಸುರಕ್ಷತೆಗೇ ಆದ್ಯತೆ ಇತ್ತು. 2024ರ ಮೇ ತಿಂಗಳಲ್ಲಿ ಹೊಸ ಎಫ್ಡಿಟಿಎಲ್ ನಿಯಮಗಳನ್ನು ಪ್ರಕಟಿಸಿತು. 2025ರ ಜುಲೈ 1ರಂದು ನಿಯಮಗಳ ಮೊದಲ ಹಂತವನ್ನು ಜಾರಿಗೆ ತರಬೇಕು ಹಾಗೂ ನವೆಂಬರ್ 1ರ ಹೊತ್ತಿಗೆ ಎರಡನೇ ಹಂತದ ಅಷ್ಟೂ ಪ್ರಕ್ರಿಯೆ ಮುಗಿದಿರಬೇಕು ಎಂದು ಡಿಜಿಸಿಎ ತಿಳಿಸಿತು. ಹೊಸ ನಿಯಮಗಳ ಪಾಲನೆ ಶುರುವಾದ 20 ತಿಂಗಳಲ್ಲಿ ವಿಮಾನಯಾನ ಸಂಸ್ಥೆಗಳು ಹಾಗೂ ಪೈಲಟ್ಗಳು ಅವಕ್ಕೆ ಪೂರ್ಣಪ್ರಮಾಣದಲ್ಲಿ ಬದ್ಧರಾಗಿ ಇರಬೇಕು ಎಂದೂ ತಾಕೀತು ಮಾಡಿತು. ಆದರೆ, ಈ ನಿಯಮಗಳಿಗೆ ಇಂಡಿಗೊ ಬದ್ಧವಾಗಲಿಲ್ಲ.

ಇಂಡಿಗೊ ಬೃಹತ್ತಾಗಿ ಬೆಳೆದಿದೆ. ಕಾರ್ಯಾಚರಣೆ ಪ್ರಾರಂಭಿಸಿ 20 ವರ್ಷ ಕಳೆದ ನಂತರ 420 ವಿಮಾನಗಳು ಹಾರಾಟ ನಡೆಸುವಷ್ಟು ಅದು ವಿಸ್ತಾರಗೊಂಡಿದೆ. ಕಟ್ಟುನಿಟ್ಟು ಸಮಯಪಾಲನೆ, ಹೆಚ್ಚೇನೂ ಹಳತಾಗದ ಮಜಬೂತಾಗಿ ಇರುವ ವಿಮಾನಗಳು, ಪ್ರಯಾಣಿಕರ ಅಗತ್ಯಕ್ಕೆ ಸ್ಪಂದಿಸುವ ಸಿಬ್ಬಂದಿ, ಜೀವಹಾನಿ ಉಂಟುಮಾಡುವಂತಹ ಅಪಘಾತಗಳೇ ಆಗಿಲ್ಲವೆಂಬ ಹೆಗ್ಗಳಿಕೆ, ಬಂಡವಾಳ ಮಾರುಕಟ್ಟೆಯಲ್ಲಿ ಸುಮಾರು 22 ಶತಕೋಟಿ ಡಾಲರ್ನಷ್ಟು ಏರಿಕೆ... ಇವೆಲ್ಲವೂ ಇಂಡಿಗೊಗೆ ಸಂದ ಗರಿಗಳು.

2012ರಲ್ಲಿ ಕಿಂಗ್ಫಿಷರ್ ಪತನವಾಯಿತು. 2019 ಹಾಗೂ 2023ರಲ್ಲಿ ಕ್ರಮವಾಗಿ ಜೆಟ್ ಏರ್ವೇಸ್ ಹಾಗೂ ಗೋಏರ್ ದಿವಾಳಿಯಾದವು. ಈ ಬೆಳವಣಿಗೆಯಿಂದ ಸುಮಾರು 300 ವಿಮಾನಗಳು ರನ್ವೇಗಳಿಂದ ಹೊರಗುಳಿಯುವಂತಾಯಿತು. ಸ್ಪೈಸ್ಜೆಟ್ ಸಂಸ್ಥೆಯ ವಿಮಾನಗಳ ಸಂಖ್ಯೆ 100 ಇದ್ದುದು 20ರ ಆಸುಪಾಸಿಗೆ ಇಳಿಯಿತು. ಟಾಟಾ ಕಂಪನಿ ಖರೀದಿಸಿದ ನಂತರವೂ ಇಂಡಿಯನ್ ಏರ್ಲೈನ್ಸ್ ತಡಬಡಾಯಿಸುವುದು ನಿಲ್ಲಲಿಲ್ಲ. ಏರ್ಏಷ್ಯಾ ಹಾಗೂ ವಿಸ್ತಾರ ಕೂಡ ಇಂಡಿಯನ್ ಏರ್ಲೈನ್ಸ್ ಜೊತೆಗೇ ಬೆಸೆದುಕೊಂಡವು. ಹೀಗಾಗಿ ಇಂಡಿಗೊ ಬೃಹತ್ತಾಗಿ ಬೆಳೆದುಬಿಟ್ಟಿತು. ಎಲ್ಲ ರೀತಿಯಲ್ಲಿ ಪ್ರಯೋಗಾತ್ಮಕವಾಗಿ ನೋಡಿದರೆ ಅದರ ಏಕಸ್ವಾಮ್ಯ ಇರುವುದು ಗೊತ್ತಾಗುತ್ತದೆ. ಏಕಸ್ವಾಮ್ಯ ಇದ್ದಲ್ಲಿ ಅಲಕ್ಷ್ಯ ಇದ್ದಿದ್ದೇ ಎಂಬ ಮಾತಿದೆ.

ಬೇರೆ ವಿಮಾನಯಾನ ಸಂಸ್ಥೆಗಳಂತೆಯೇ ಇಂಡಿಗೊ ಸಂಸ್ಥೆಗೂ ಹೊಸ ನಿಯಮಗಳ ಜಾರಿಗೆ 20 ತಿಂಗಳ ಕಾಲಾವಕಾಶವಿತ್ತು. ಇದಕ್ಕೆ ಹೆಚ್ಚು ಸಹ–ಪೈಲಟ್ಗಳು, ಕ್ಯಾಪ್ಟನ್ಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾದುದು ಅಗತ್ಯವಾಗಿತ್ತು. ಈ ವಿಷಯದಲ್ಲಿ ಇಂಡಿಗೊ ಹಿಂದುಳಿಯಿತು.

ಏರ್ಇಂಡಿಯಾ ಹಾಗೂ ಬ್ರಿಟಿಷ್ ಏರ್ವೇಸ್ನ ಪೂರ್ಣಪ್ರಮಾಣದ ಕ್ಯಾರಿಯರ್ ವಿಮಾನವೊಂದಕ್ಕೆ 11 ಪೈಲಟ್ಗಳು ಬೇಕಾಗುತ್ತದೆ. ಯಾಕೆಂದರೆ, ಅವುಗಳ ಹಾರಾಟದ ಅವಧಿ ಕಡಿಮೆ. ಕಡಿಮೆ ಟಿಕೆಟ್ ದರದ ವಿಮಾನಗಳ ಹಾರಾಟದ ಅವಧಿ ಹೆಚ್ಚು. ಹೀಗಾಗಿ ಒಂದು ವಿಮಾನಕ್ಕೆ 13–14 ಪೈಲಟ್ಗಳ ಅಗತ್ಯವಿದೆ. ಇದು ಹೊಸ ನಿಯಮದ ಅನ್ವಯ ಕಾಣುತ್ತಿರುವ ವಸ್ತುಸ್ಥಿತಿ. ಇಂಡಿಗೊದ ಹಿರಿಯ ವ್ಯವಸ್ಥಾಪಕರ ಸಮಿತಿಯು ಹೇಗಾದರೂ ಮಾಡಿ ಎಫ್ಡಿಟಿಎಲ್ನಿಂದ ತಪ್ಪಿಸಿಕೊಳ್ಳಬಹುದು ಎಂದು ಅಲಕ್ಷ್ಯ ತೋರಿತು. ಪೈಲಟ್ಗಳ ನೇಮಕಾತಿ–ತರಬೇತಿಯ ಕುರಿತು ತಲೆಕೆಡಿಸಿಕೊಳ್ಳಲೇ ಇಲ್ಲ. ಚಳಿಗಾಲದಲ್ಲಿ ವಿಮಾನಗಳ ಹಾರಾಟ ಜಾಸ್ತಿ. ಹೀಗಾಗಿ ‘ಹಿಂದೆಂದೂ ಕಂಡಿರದಂಥ, ಹಲವು ಕಾರ್ಯಾಚರಣೆ ಸವಾಲುಗಳಿಂದ ಸಮಸ್ಯೆ ಜಟಿಲವಾಗಿದೆ’ ಎಂದು ಇಂಡಿಗೊ ಪ್ರಕಟಣೆ ತಿಳಿಸಿತು. ವಿಮಾನ ಸಂಚಾರ ವ್ಯವಸ್ಥೆ ಕುಸಿಯಿತು.

ಇಂಡಿಗೊ ಹುಟ್ಟುಹಾಕಿರುವ ಈ ಸಮಸ್ಯೆಯು ಸರ್ಕಾರಕ್ಕೂ ಒಂದು ಪಾಠ. ಏಕಸ್ವಾಮ್ಯ ಅಥವಾ ದ್ವಿಸ್ವಾಮ್ಯದಿಂದ ಯಾವ ಕ್ಷೇತ್ರದಲ್ಲೂ ದೇಶ ಪ್ರಗತಿ ಕಾಣಲಾಗದು. ಕಡಿಮೆ ದರದ ವಿಮಾನಗಳನ್ನು ಪೂರೈಸಬಲ್ಲ ಡಜನ್ನು ಸಂಸ್ಥೆಗಳಿದ್ದಲ್ಲಿ ಈ ಪರಿಸ್ಥಿತಿ ಉದ್ಭವಿಸುತ್ತಲೇ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.