‘ಹೊರರಾಜ್ಯದವರಿಗೆ ತನ್ನ ರಾಜ್ಯದ ಮಾತೃಭಾಷೆಯನ್ನು ಕಲಿಸುವುದಕ್ಕೆ ಯಾವ ರಾಜ್ಯ ಸರ್ಕಾರವೂ ಪ್ರಯತ್ನಿಸಿದ ಉದಾಹರಣೆ ಇಲ್ಲ. ಆದರೆ ಕರ್ನಾಟಕ ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅಂತಹ ಪ್ರಯತ್ನ ಮಾಡುತ್ತಿದೆ. ಕೇರಳ, ತಮಿಳುನಾಡು ಸೇರಿದಂತೆ ದೇಶದ ಇತರ ರಾಜ್ಯಗಳಿಂದ ಬಂದು ಇಲ್ಲಿ ನೆಲಸಿರುವವರಿಗೆ ಕನ್ನಡ ಕಲಿಕಾ ಕೇಂದ್ರಗಳ ಮೂಲಕ ಒಂದೂವರೆ ವರ್ಷದಿಂದ ಕನ್ನಡ ಕಲಿಸಲಾಗುತ್ತಿದೆ. ಸಾವಿರಾರು ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದೊಂದು ಅತ್ಯಂತ ಶ್ಲಾಘನೀಯ ಪ್ರಯತ್ನ’

–ಬೆಂಗಳೂರಿನ ವೈಟ್ಫೀಲ್ಡ್ ವ್ಯಾಪ್ತಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕಾಯಕದಲ್ಲಿ ತೊಡಗಿರುವ ಸುಷ್ಮಾ ಅವರ ಮಾತಿದು.

ಸುಷ್ಮಾ ಅವರು ಮೂಲತಃ ಕೇರಳದವರು. ಆದರೆ, ಕನ್ನಡ ಕಲಿತು, ಕನ್ನಡದಲ್ಲೇ ಪಿಎಚ್ಡಿ ಮಾಡಿ, ವೈಟ್ಫೀಲ್ಡ್ನಲ್ಲಿ ಶ್ರೀಸರಸ್ವತಿ ಎಜುಕೇಷನ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಈವರೆಗೆ 4,000 ಕ್ಕೂ ಹೆಚ್ಚು ಜನರಿಗೆ ಕನ್ನಡ ಓದಲು, ಬರೆಯಲು ಕಲಿಸಿದ್ದಾರೆ. ಈಗ ಪ್ರಾಧಿಕಾರದ ಕನ್ನಡ ಕಲಿಕಾ ಕೇಂದ್ರದ ಮೂಲಕ ಹೊರಭಾಷಿಕರಿಗೆ ಕನ್ನಡ ಕಲಿಸುತ್ತಿದ್ದಾರೆ. ವೈಟ್ಫೀಲ್ಡ್ನ ದೊಡ್ಡ ಅಪಾರ್ಟ್ಮೆಂಟ್ ಒಂದರಲ್ಲಿ ಆಸಕ್ತರಿಗೆ ಕನ್ನಡ ಕಲಿಸಿ ಈಗ ವರ್ತೂರು ರಸ್ತೆಯ ಇನ್ನೊಂದು ದೊಡ್ಡ ಅಪಾರ್ಟ್ಮೆಂಟ್ನಲ್ಲಿ 100 ಜನರಿಗೆ ಕನ್ನಡದಲ್ಲಿ ಅ, ಆ, ಇ, ಈ... ಹೇಳಿಕೊಡುತ್ತಿದ್ದಾರೆ.

ಕನ್ನಡ ಪ್ರಾಧಿಕಾರದ ಆಶ್ರಯದಲ್ಲಿ ಮೈಸೂರಿನಲ್ಲಿ ಒಂದು ಮತ್ತು ಬೆಂಗಳೂರಿನಲ್ಲಿ 34 ಕನ್ನಡ ಕಲಿಕಾ ಕೇಂದ್ರಗಳು ನಡೆಯುತ್ತಿವೆ. ಸುಷ್ಮಾ ಅವರು ಶಿಕ್ಷಕಿಯಾಗಿರುವ ಕೇಂದ್ರವು ಅವುಗಳಲ್ಲೊಂದು.

‘ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆ’ ಎಂಬುದು ಪ್ರಾಧಿಕಾರವು ರೂಪಿಸಿರುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ರಾಜ್ಯದಲ್ಲಿ ವಿವಿಧ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ವೈದ್ಯಕೀಯ ಕಾಲೇಜುಗಳು, ವಸತಿ ಸಮುಚ್ಚಯಗಳು ಹೀಗೆ ಬೇರೆ ಬೇರೆ ಕಡೆಗಳಲ್ಲಿರುವ ಅನ್ಯಭಾಷಿಕರಿಗೆ ರಾಜ್ಯದ ಜನರೊಂದಿಗೆ ಮಾತನಾಡಲು ಬೇಕಾದಷ್ಟು ಕನ್ನಡ ಕಲಿಸಲು ರೂಪಿಸಲಾಗಿರುವ ಕಾರ್ಯಕ್ರಮ ಇದು. ಮೂರು ತಿಂಗಳಲ್ಲಿ 36 ತರಗತಿಗಳನ್ನು (ವಾರಕ್ಕೆ ಮೂರು, ತಿಂಗಳಿಗೆ 12) ಮಾಡಲಾಗುತ್ತದೆ. ಕನ್ನಡ ಕಲಿಯಲು ಆಸಕ್ತಿ ಇರುವವವರು ಯಾವುದಾದರೂ ಸಂಸ್ಥೆಯ ಮೂಲಕ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರೆ ಸಾಕು. ಪ್ರಾಧಿಕಾರವು ಅಂತಹ ಸಂಘಕ್ಕೆ ತರಬೇತುದಾರರನ್ನು ಕಳುಹಿಸಿ ಆಸಕ್ತರಿಗೆ ಕನಿಷ್ಠ ಮಾತನಾಡಲು ಸಾಧ್ಯವಾಗುವಷ್ಟು ಕನ್ನಡ ಕಲಿಸುತ್ತಾರೆ. ಪಾಠ ಮಾಡಿದವರಿಗೆ ಪ್ರಾಧಿಕಾರ ಗೌರವಧನವನ್ನು ನೀಡುತ್ತದೆ. ಇದೇ ಉದ್ದೇಶಕ್ಕಾಗಿ ಪ್ರಾಧಿಕಾರವು ಪಠ್ಯಕ್ರಮವನ್ನೂ ರೂಪಿಸಿದೆ. ತರಬೇತುದಾರರನ್ನು ನಿಯೋಜಿಸಲು ಸಾಧ್ಯವಾಗದ ಕಡೆಗಳಲ್ಲಿ ಪ್ರಾಧಿಕಾರವು ಈ ಪಠ್ಯಕ್ರಮ ನೀಡಿ, ಕನ್ನಡ ಕಲಿಸುವುದಕ್ಕೆ ಪ್ರೇರೇಪಿಸುತ್ತದೆ.

ಬೆಂಗಳೂರಿನ ಎಚ್ಎಎಲ್ನಲ್ಲಿ ಮೂರು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದೇ ರೀತಿ ನಿಮ್ಹಾನ್ಸ್, ಆರ್ಬಿಐ ಸೇರಿದಂತೆ ವಿವಿಧ ಕಡೆಗಳಲ್ಲಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಮೈಸೂರಿನ ರೈಲ್ವೆ ಇಲಾಖೆಯಲ್ಲಿ ಒಂದು ಕೇಂದ್ರವಿದ್ದು, 130 ಮಂದಿ ಕನ್ನಡ ಕಲಿಯುತ್ತಿದ್ದಾರೆ. ಅಲ್ಲಿ ಎರಡು ಬ್ಯಾಚ್ಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.

ಉತ್ತಮ ಸ್ಪಂದನೆ: ‘ನಮ್ಮ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಹೊರರಾಜ್ಯದ 3,000ದಷ್ಟು ಜನರು ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲಿ ಕೇರಳದವರು 1,500 ಜನರಿಷ್ಟಿದ್ದಾರೆ. ಹಿಂದಿ ಭಾಷಿಕರು ನಂತರದ ಸ್ಥಾನದಲ್ಲಿದ್ದಾರೆ. ತಮಿಳರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಸದ್ಯಕ್ಕೆ ನಮ್ಮ ಕಾರ್ಯಕ್ರಮ ಬೆಂಗಳೂರಿಗಷ್ಟೇ ಸೀಮಿತವಾಗಿದೆ. ನಮಗೆ ಇರುವ ಬಜೆಟ್ನಲ್ಲಿ ಯೋಜನೆಯನ್ನು ನಿರ್ವಹಿಸುತ್ತಿದ್ದೇವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರ್ಜಿ ಸಲ್ಲಿಸಿದರಷ್ಟೇ ನಾವು ಆ ಸಂಘಗಳ ಆಶ್ರಯದಲ್ಲಿ ತರಬೇತಿ ನೀಡಲು ಕ್ರಮ ಕೈಗೊಳ್ಳುತ್ತೇವೆ. ಅರ್ಜಿ ಸಲ್ಲಿಸಿದ ಎಲ್ಲ ಸಂಸ್ಥೆಗಳಿಗೂ ತರಬೇತುದಾರರನ್ನು ನಿಯೋಜಿಸಲು ನಮಗೆ ಸಾಧ್ಯವಾಗದು. ನಮ್ಮ ಬಜೆಟ್ನ ಇತಿಮಿತಿಯಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ, ಅರ್ಜಿ ಸಲ್ಲಿಸಿದ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುತ್ತೇವೆ. ಪಠ್ಯಕ್ರಮ ಒದಗಿಸುತ್ತೇವೆ ತರಬೇತುದಾರರಿಗೆ ಗೌರವಧನದ ವ್ಯವಸ್ಥೆ ಆಯಾ ಸಂಘಗಳು ಮಾಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ಮದ್ರಸಾಗಳಲ್ಲೂ ಕನ್ನಡ

ಕನ್ನಡ ಕಲಿಕಾ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿರುವ ಪ್ರಾಧಿಕಾರ ಮದ್ರಸಾಗಳಲ್ಲೂ ಕನ್ನಡ ಕಲಿಸಲು ಮುಂದಾಗಿದೆ. ಈ ಉದ್ದೇಶಕ್ಕಾಗಿ ಉರ್ದುವಿನಲ್ಲಿ ಸೂಚನೆಗಳನ್ನು ನೀಡುವ ಪಠ್ಯವನ್ನು ಸಿದ್ಧಪಡಿಸಿದೆ. ‘ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಕನ್ನಡ ಕಲಿಸುವ ಮದ್ರಸಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ನವೆಂಬರ್ ಮಧ್ಯಭಾಗದಲ್ಲಿ 180 ಮದ್ರಸಾಗಳಲ್ಲಿ ಕನ್ನಡ ಕಲಿಕೆ ಆರಂಭವಾಗಲಿದೆ. ವರ್ಷಾಂತ್ಯದಲ್ಲಿ ಇದನ್ನು 1500 ಮದ್ರಸಾಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ’ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.