ಕೆಲವು ವಿಚಾರಗಳನ್ನು ಪ್ರಧಾನಿ ದೃಢವಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ, ಅವರು ಹೇಳದೇ ಬಿಟ್ಟಿರುವ ವಿಚಾರಗಳು ಹಲವು ಇವೆ ಎಂಬುದು ಗಮನಾರ್ಹ

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಸೋಮವಾರ ಮಾತನಾಡಿ ಭಯೋತ್ಪಾದನೆಗೆ ಸಂಬಂಧಿಸಿ ದೇಶದ ನಿಲುವು ಏನು ಎಂಬುದನ್ನು ಪುನರುಚ್ಚರಿಸಿದ್ದಾರೆ. ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ದಾಳಿ, ಅದರ ಬಳಿಕ ಪಾಕಿಸ್ತಾನದ ಜೊತೆಗೆ ನಡೆದ ಘರ್ಷಣೆ ಮತ್ತು ಮುಂದಿನ ದಿನಗಳಲ್ಲಿ ಇಂತಹುದೇ ಪರಿಸ್ಥಿತಿ ಮರುಕಳಿಸಬಹುದಾದ ಸಾಧ್ಯತೆಯ ಕಾರಣದಿಂದ ಈ ನಿಲುವು ನಮಗೆ ಮುಖ್ಯ ಎನಿಸುತ್ತದೆ. ‘ಭಯೋತ್ಪಾದನೆ ಮತ್ತು ಮಾತುಕತೆ, ಭಯೋತ್ಪಾದನೆ ಮತ್ತು ವ್ಯಾಪಾರ ಜೊತೆಯಾಗಿ ಸಾಗಲು ಸಾಧ್ಯವಿಲ್ಲ.

ಅಂತೆಯೇ, ನೀರು ಮತ್ತು ರಕ್ತ ಜೊತೆಯಾಗಿ ಹರಿಯಲು ಸಾಧ್ಯವಿಲ್ಲ’ ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಭಾರತದ ನಿಲುವು ಏನು ಎಂಬುದರ ಘೋಷಣೆಯು ಪಾಕಿಸ್ತಾನವನ್ನು ಉದ್ದೇಶಿಸಿದ್ದು ಮಾತ್ರವಲ್ಲ, ಅಂತರರಾಷ್ಟ್ರೀಯ ಸಮುದಾಯಕ್ಕೂ ಇದೊಂದು ಸಂದೇಶವಾಗಿದೆ. ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ಮತ್ತು ಪ್ರಾಯೋಜಕತ್ವ ನೀಡುವುದನ್ನು ನಿಲ್ಲಿಸುವವರೆಗೆ ಆ ದೇಶದ ಜೊತೆಗೆ ಯಾವುದೇ ರೀತಿಯ ಮಾತುಕತೆಗೆ ಅವಕಾಶವೇ ಇಲ್ಲ ಎಂಬುದನ್ನು ಭಾರತವು ಸ್ಪಷ್ಟಪಡಿಸಿದೆ. ಈ ಹಿಂದೆ ಹಲವು ಬಾರಿ ಹೇಳಿದ್ದ ನಿಲುವನ್ನು ಪುನರುಚ್ಚರಿಸಲಾಗಿದೆ.

ಭಯೋತ್ಪಾದನೆ ಇದ್ದರೂ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಹಳೆಯ ನಿಯಮವನ್ನು ಭಾರತ ಇನ್ನು ಮುಂದೆ ಅನುಸರಿಸುವುದಿಲ್ಲ ಎಂಬುದನ್ನು ಪ್ರಧಾನಿ ದೃಢಪಡಿಸಿದ್ದಾರೆ. ಭದ್ರತೆಗೆ ಸಂಬಂಧಿಸಿ ಭಾರತದ ನಿಲುವಿನಲ್ಲಿ ಆಗಿರುವ ಪಲ್ಲಟವನ್ನು ‘ಆಪರೇಷನ್ ಸಿಂಧೂರ’ ಎತ್ತಿಹಿಡಿದಿದೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ಭಾರತವು ಹೊಸ ನಿಲುವನ್ನು ತಳೆದಿದೆ. ಭಯೋತ್ಪಾದಕರು ಮತ್ತು ಅವರ ನಿರ್ವಾಹಕರ ನಡುವೆ ಭಾರತವು ಯಾವ ವ್ಯತ್ಯಾಸವನ್ನೂ ಕಾಣುವುದಿಲ್ಲ ಎಂದು ಮೋದಿ ದೃಢವಾಗಿ ಹೇಳಿದ್ದಾರೆ. ಸದ್ಯದ ಸಂಘರ್ಷ ಶಮನವು ಶಾಶ್ವತವೇನೂ ಅಲ್ಲ. ಪಾಕಿಸ್ತಾನದ ಮುಂದಿನ ದಿನಗಳ ನಡವಳಿಕೆಯನ್ನು ನೋಡಿಕೊಂಡು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸ ಲಾಗುವುದು ಎಂಬುದನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥರು ಹೇಳಿದ್ದರು.

ಪ್ರಧಾನಿಯವರು ಅದನ್ನು ಅನುಮೋದಿಸಿದ್ದಾರೆ. ‘ಅಣ್ವಸ್ತ್ರದ ಬೆದರಿಕೆಯನ್ನು ಭಾರತವು ಸಹಿಸುವುದಿಲ್ಲ; ಭಯೋತ್ಪಾದನೆಯ ವಿರುದ್ಧ ಕೈಗೊಂಡ ಕ್ರಮಗಳು ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವು ಏನು ಎಂಬುದನ್ನು ದೃಢಪಡಿಸು ತ್ತವೆ; ಪಾಕಿಸ್ತಾನದ ದುಸ್ಸಾಹಸವನ್ನು ಯಾವ ಬೆಲೆ ತೆತ್ತಾದರೂ ತಡೆಯಲಾಗುವುದು ಎಂಬುದನ್ನೂ ಈಗಿನ ಕಾರ್ಯಾಚರಣೆಯು ದೃಢಪಡಿಸಿದೆ. ಆದರೆ, ವಾಸ್ತವದಲ್ಲಿ ಈ ನಿಲುವು ಬಹುದೊಡ್ಡ ಸವಾಲನ್ನೂ ಹೊಂದಿದೆ. ಅಣ್ವಸ್ತ್ರವನ್ನು ತೋರಿಸಿ ಬೆದರಿಸುವುದು ಮತ್ತು ಅಣ್ವಸ್ತ್ರವನ್ನು ಬಳಸುವುದರ ನಡುವಣ ವ್ಯತ್ಯಾಸವನ್ನು ಗ್ರಹಿಸುವುದು ಸುಲಭವಲ್ಲ. ಈಗ ಇರುವ ವಿಷಮ ಪರಿಸ್ಥಿತಿಯಲ್ಲಿ ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುವುದು ಸಾಧ್ಯವಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಹೇಳಿಲ್ಲ. ಕದನ ವಿರಾಮಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಲಿಲ್ಲ. ತಮ್ಮ ಮಧ್ಯಸ್ಥಿಕೆಯಿಂದಾಗಿ ಕದನ ವಿರಾಮ ಸಾಧ್ಯವಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಬಗ್ಗೆಯೂ ಮೋದಿ ಅವರು ಏನನ್ನೂ ಹೇಳಿಲ್ಲ. ಪಾಕಿಸ್ತಾನದ ಕೋರಿಕೆಯಂತೆ ಕದನ ವಿರಾಮದ ನಿರ್ಧಾರ ಕೈಗೊಳ್ಳಲಾಗಿದೆಯೇ ಹೊರತು ಅಂತರರಾಷ್ಟ್ರೀಯ ಒತ್ತಡದಿಂದಾಗಿ ಅಲ್ಲ ಎಂದು ಮೋದಿ ಹೇಳಿದ್ದಾರೆ. ಆದರೆ, ಕದನ ವಿರಾಮ ಆಗಲಿದೆ ಎಂದು ಟ್ರಂಪ್ ಅವರು ಮೊದಲಿಗೆ ಘೋಷಿಸಲು ಕಾರಣವೇನು ಎಂಬುದನ್ನು ಪ್ರಧಾನಿ ವಿವರಿಸಿಲ್ಲ.

ಅಮೆರಿಕದ ನಾಯಕತ್ವವು ಕಾಶ್ಮೀರದ ವಿಚಾರವನ್ನೂ ಉಲ್ಲೇಖಿಸಿದೆ. ಕಾಶ್ಮೀರದ ಕುರಿತು ಭಾರತದ ನಿಲುವು ಏನು ಎಂಬುದನ್ನು ಪ್ರಧಾನಿಯವರು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ಜೊತೆಗೆ ಭಯೋತ್ಪಾದನೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಿಂದಿರುಗಿಸುವಿಕೆಯನ್ನು ಬಿಟ್ಟು ಬೇರೆ ಯಾವುದರ ಬಗ್ಗೆಯೂ ಮಾತುಕತೆ ಇಲ್ಲ ಎಂದು ಮೋದಿಯವರು ಹೇಳಿದ್ದಾರೆ. ಪಾಕಿಸ್ತಾನದ ಜೊತೆಗಿನ ಸಂಬಂಧದ ನಿಯಮಗಳನ್ನು ‘ಆಪರೇಷನ್ ಸಿಂಧೂರ’ ಹೊಸದಾಗಿ ರೂಪಿಸಿದೆ. ಭಾರತದ ನಿಲುವು ಹೆಚ್ಚು ದೃಢವಾಗಿದೆ. ಪ್ರಧಾನಿಯವರು ಕೆಲವು ವಿಚಾರಗಳನ್ನು ದೃಢವಾಗಿ ಹೇಳಿದ್ದಾರೆ ಎಂಬುದು ಸ್ವಾಗತಾರ್ಹ. ಆದರೆ, ಅವರು ಹೇಳದೇ ಬಿಟ್ಟಿರುವ ವಿಚಾರಗಳು ಹಲವು ಇವೆ ಎಂಬುದನ್ನು ಗಮನಿಸದೇ ಇರಲು ಆಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.