ಸಂಪನ್ಮೂಲ ಸದ್ಬಳಕೆಗೆ ಜಾಣ್ಮೆ ಬೇಕು

ಕುದುರೆಮುಖ ಗಣಿಗಾರಿಕೆ ಸ್ಥಗಿತಗೊಂಡು ಎರಡು ದಶಕವಾಗಿದೆ. ಅಲ್ಲಿನ ಸುಸಜ್ಜಿತ ಟೌನ್ಶಿಪ್ ಅನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ. ನಮ್ಮಲ್ಲಿ ಸಂಪನ್ಮೂಲಗಳ ಕೊರತೆಗಿಂತಲೂ ಇರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಲು ಬೇಕಾದ ಜಾಣ್ಮೆ ಮತ್ತು ಇಚ್ಛಾಶಕ್ತಿ ಕೊರತೆಗೆ ಇದು ನಿದರ್ಶನವಷ್ಟೆ. ಈಗ ಟೌನ್ಶಿಪ್ ನಿರ್ಜೀವ ನಗರದಂತಿದೆ. ಈ ಹಿಂದೆಯೇ ಆ ಪ್ರದೇಶವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದು ಒಂದು ವಿಶ್ವವಿದ್ಯಾಲಯವನ್ನೇ ಸ್ಥಾಪಿಸಬಹುದಿತ್ತು. ವಿ.ವಿ.ಗೆ ಬೇಕಾದ ಅಗತ್ಯ ಸೌಲಭ್ಯಗಳು ಅಲ್ಲಿದ್ದವು. ಈಗಲೂ ಇವೆ. ಅಲ್ಲಿನ ಕಟ್ಟಡಗಳು, ಕ್ರೀಡಾಂಗಣ, ಚಿತ್ರಮಂದಿರ ಇತ್ಯಾದಿಯನ್ನು ನವೀಕರಿಸಿ, ಪರಿಸರದ ಅಧ್ಯಯನಕ್ಕೆ ಮೀಸಲಾದ ಮತ್ತು ಪರಿಸರ ಸಂಬಂಧಿತ ಉನ್ನತಮಟ್ಟದ ಸಂಶೋಧನೆ ನಡೆಸುವ ಜಾಗತಿಕಮಟ್ಟದ ಶೈಕ್ಷಣಿಕ ಸಂಸ್ಥೆಯೊಂದನ್ನು ಅಲ್ಲಿ ಬೆಳೆಸಲು ಸರ್ಕಾರ ಚಿಂತನೆ ನಡೆಸಲಿ.

-ವಿ.ಎಸ್. ಶ್ರೀಧರ, ಬೆಂಗಳೂರು

ವೇತನ ನೀಡದಿರುವುದು ಶೋಷಣೆ

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ದುಡಿಯುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಕಳೆದ 15 ತಿಂಗಳಿಂದ ವೇತನ ನೀಡಿಲ್ಲ ಎಂಬ ಸುದ್ದಿ ಓದಿ ದಿಗ್ಭ್ರಮೆಯಾಯಿತು. ಕನ್ನಡದ ಅಸ್ಮಿತೆಯ ಪ್ರತೀಕವಾಗಿರುವ ಈ ವಿಶ್ವವಿದ್ಯಾಲಯದಲ್ಲಿಯೇ ಇಂಥ ಪರಿಸ್ಥಿತಿ ಉಂಟಾಗಿರುವುದು ಶೋಚನೀಯ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ವೇತನ ನೀಡಲಾಗುವುದು ಎಂಬ ಕುಲಪತಿಯವರ ಉತ್ತರ ಸ್ವೀಕಾರಾರ್ಹವಲ್ಲ. ವೇತನ ಸಮಸ್ಯೆ ಬಗೆಹರಿಸುವುದು ವಿ.ವಿ. ಆಡಳಿತದ ಹೊಣೆಯಲ್ಲವೇ? ರಾಜ್ಯದ ಬಹುತೇಕ ವಿಶ್ವವಿದ್ಯಾಲಯ ಗಳಲ್ಲಿ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ಪಾವತಿಗೂ ಹಣ ಇಲ್ಲದಿರುವುದು ವರದಿಯಾಗಿದೆ. ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕಿದೆ.

-ಹರೀಶ್ ಕುಮಾರ್ ಕುಡ್ತಡ್ಕ, ಮಂಗಳೂರು

ಸಾಲದ ಹೊರೆಗೆ ಯಾರು ಹೊಣೆ?

ದೇಶದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂಬುದು ಕೇಂದ್ರ ಸರ್ಕಾರದ ಹೇಳಿಕೆ. ಇಡೀ ದೇಶದಲ್ಲಿಯೇ ತಲಾ ಆದಾಯದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಎನ್ನುವುದು ರಾಜ್ಯ ಸರ್ಕಾರದ ಸಮರ್ಥನೆ. ಆದರೆ, ಪ್ರತಿವರ್ಷವೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಲದ ಪ್ರಮಾಣವೂ ರಾಕೆಟ್ ವೇಗದಲ್ಲಿ ಏರಿಕೆ ಆಗುತ್ತಿದೆ. ಆದರೆ, ಜನರ ಮುಂದೆ ಈ ಸತ್ಯ ಮುಂದಿಡುವ ಧೈರ್ಯವನ್ನು ಎರಡೂ ಸರ್ಕಾರಗಳು ತೋರುತ್ತಿಲ್ಲ. ಜನರಿಗೆ ದುಡಿದು ಹಣ ಸಂಪಾದಿಸುವ ಬಗ್ಗೆ ಶಾಶ್ವತ ಯೋಜನೆಗಳನ್ನು ರೂಪಿಸಲು ಮುಂದಾಗುತ್ತಿಲ್ಲ. ಇದರಿಂದ ಜನರು ಬಡತನ ರೇಖೆಯಿಂದ ಹೊರಬರುತ್ತಿಲ್ಲ. ಆದರೆ, ರಾಜಕಾರಣಿಗಳ ಸಂಪತ್ತು ಮಾತ್ರ ಪ್ರತಿವರ್ಷ ಏರಿಕೆಯ ಪಥದಲ್ಲಿಯೇ ಸಾಗುತ್ತಿದೆ.

-ಎಸ್.ಎನ್. ರಮೇಶ್, ಸಾತನೂರು

ಮಹಿಳಾ ಭವನ ನಿರ್ಮಿಸಿ

ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಂಘಗಳು ಕೌಟುಂಬಿಕ ಆರ್ಥಿಕ ಸದೃಢತೆಗೆ ಆಧಾರವಾಗಿವೆ. ಬ್ಯಾಂಕ್ನಿಂದ ಸಾಲ ಪಡೆದ ಸಂಘದ ಮಹಿಳೆಯರು ಜೀವನೋಪಾಯಕ್ಕೆ ಪೂರಕವಾದ ಕಸುಬು ಆರಂಭಿಸಿ ಸಬಲರಾಗುತ್ತಿದ್ದಾರೆ. ಮಕ್ಕಳ ಶಿಕ್ಷಣದ ಜತೆಗೆ ಕುಟುಂಬದ ಗೌರವ ಹೆಚ್ಚಿಸಿ, ಉತ್ತಮ ಬದುಕನ್ನು
ಕಟ್ಟಿಕೊಳ್ಳುವಲ್ಲಿ ಈ ಸಂಘಗಳು ಮಹಿಳೆಯರಿಗೆ ನೆರವಾಗುತ್ತಿವೆ.

ಪ್ರತಿ ಮನೆಯ ಮಹಿಳೆ ಒಂದಲ್ಲ ಒಂದು ಸಂಘದ ಸದಸ್ಯೆಯಾಗಿದ್ದಾಳೆ. ಅದರಿಂದ ಸಿಗುವ ಸಾಲದ ನೆರವನ್ನು ಇಡೀ ಕುಟುಂಬ ಪಡೆಯುತ್ತಿದೆ. ಆದರೆ, ಸಂಘಗಳ ಸದಸ್ಯೆಯರು ಪ್ರತಿ ವಾರ ಅಥವಾ ಮಾಸಿಕ ಸಭೆ ನಡೆಸಲು ಯಾವುದೇ ನಿಗದಿತ ಸ್ಥಳಗಳಿಲ್ಲ. ಮರದ ಕೆಳಗೆ ಅಥವಾ ಮನೆಯ ಹಜಾರದಲ್ಲಿ ಸಭೆ ನಡೆಸುವಂತಾಗಿದೆ. ಸರ್ಕಾರವು ಸಮುದಾಯ ಭವನ, ಮಂದಿರ, ಚಾವಡಿ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ. ಮಹಿಳಾ ಸಂಘಗಳ ಭವನ ನಿರ್ಮಾಣಕ್ಕೂ ಅನುದಾನ ನೀಡಬೇಕಿದೆ.

-ಅನುಪಮ ಸುರೇಶ್, ಪರಸಯ್ಯನಹುಂಡಿ

ರೈತರ ಅಸಹಾಯಕತೆ ದುರ್ಬಳಕೆ ಬೇಡ

ಹಳ್ಳಿ ಎಂದರೆ ಮೂಗು ಮುರಿಯುತ್ತಿದ್ದ ಕಾಲ ಬದಲಾಗಿದೆ. ನಗರ ಜೀವನ ಸಾಕು ಎಂದು ವಿದ್ಯಾವಂತರು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ನಗರ ವಿಸ್ತಾರವಾಗುವುದು ಅನಿವಾರ್ಯವಾದರೂ, ನಾಗರಿಕರಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸೋಲುತ್ತಿದ್ದೇವೆ. ಅಭಿವೃದ್ಧಿ ಹೆಸರಿನಲ್ಲಿ ನಿಸರ್ಗವನ್ನು ನಾಶಪಡಿಸಿ ಆರೋಗ್ಯವನ್ನು ಹಾಳು ಮಾಡಿಕೊಂಡು ಸುಸಜ್ಜಿತ ಆಸ್ಪತ್ರೆಗಳ ಮೊರೆ ಹೋಗುವುದು ಪ್ರಗತಿಯ ಸಂಕೇತವಲ್ಲ. ನಗರೀಕರಣ ಹಾಗೂ ಕೈಗಾರಿಕೀಕರಣದ ಭರದಲ್ಲಿ ಸರ್ಕಾರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಸಣ್ಣ ರೈತರು ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಲು ಅಸಹಾಯಕರಾಗಿದ್ದಾರೆ. ಇದನ್ನು ಆಳುವ ವರ್ಗವು ಬಂಡವಾಳ ಮಾಡಿಕೊಳ್ಳುವುದು ಸರಿಯಲ್ಲ.

-ಜಿ. ಬೈರೇಗೌಡ, ನೆಲಮಂಗಲ

ಕನ್ನಡಮ್ಮ ಧನ್ಯೆ! ಕನ್ನಡಮ್ಮ ಮಾನ್ಯೆ!

‘ಮಹಾನಗರ ಪಾಲಿಕೆ’ ಎನ್ನುವುದನ್ನು ಇಂಗ್ಲಿಷ್ಗೆ ತರ್ಜುಮೆ ಮಾಡಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಎಂದು ಹೊಸ ಫಲಕ ಹಾಕಲಾಗಿದೆ. ಆ ಫಲಕದ ಕೆಳಗೆ ‘ಕನ್ನಡವೇ ಉಸಿರು ಕನ್ನಡವೇ ಹಸಿರು’ ಎಂಬ ಫಲಕವಿದೆ. ಇದು ಎಷ್ಟು ಹಾಸ್ಯಾಸ್ಪದ ಅಲ್ಲವೇ? ಕನ್ನಡದಲ್ಲಿ ಪದಗಳ ಕೊರತೆಯೇ? ಇಂಥವರನ್ನು ಹೆತ್ತ ಕನ್ನಡಮ್ಮ ಧನ್ಯೆ.

-ಅ.ನಾ. ರಾವ್ ಜಾದವ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.