ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಶಂಕರನಾಯಕ ತಾಂಡಾದ ಸರ್ಕಾರಿ ಶಾಲೆಯ ಶಿಕ್ಷಕ ಶಂಕರಲಿಂಗ ಬ. ಹಿಪ್ಪರಗಿ ಅವರು ಶಾಲಾ ಮಕ್ಕಳಿಗಾಗಿ ಮಾಡುತ್ತಿರುವ ಕೈಂಕರ್ಯದ ಬಗ್ಗೆ (ಪ್ರ.ವಾ., ಸೆ. 3) ತಿಳಿದು ಶಿಕ್ಷಕ ಸಮು ದಾಯದ ಬಗ್ಗೆ ಹೆಮ್ಮೆ ಹಾಗೂ ಅಭಿಮಾನಗಳೆರಡೂ ಏಕಕಾಲಕ್ಕೆ ಮೂಡಿದಂತಾಯಿತು. 45 ಮಕ್ಕಳಿರುವ, 5 ತರಗತಿಗಳನ್ನು ಹೊಂದಿದ ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದರೂ ತಮ್ಮ ಅಭೂತಪೂರ್ವ ಶ್ರದ್ಧೆಯಿಂದ ಅಲ್ಲಿನ ಗ್ರಾಮಸ್ಥರು ಹಾಗೂ ಎಸ್ಡಿಎಂಸಿಯವರ ಸಹಕಾರದೊಂದಿಗೆ ಶಾಲೆಯನ್ನು ಅಭಿವೃದ್ಧಿಪಥದತ್ತ ಮುನ್ನಡೆಸಲು ಅವರು ಪಡುತ್ತಿ ರುವ ಪರಿಶ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದು.

ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಂಥ ಶಿಕ್ಷಕರ ಲಭ್ಯತೆ ಅಪರೂಪದಲ್ಲಿ ಅಪರೂಪವೆಂದರೂ ಅತಿಶಯೋಕ್ತಿಯಲ್ಲ. ಹಾಗೆಯೇ, ಸ್ವಂತ ಬಂಡವಾಳದಲ್ಲಿ ಶಿಕ್ಷಕರಿಗೆ ದ್ವಿಚಕ್ರ ವಾಹನವನ್ನು ಕಾಣಿಕೆಯಾಗಿ ನೀಡಿದ ಪಾಲಕ ಅರುಣಕುಮಾರ ರಾಠೋಡ ಅವರ ಶೈಕ್ಷಣಿಕ ಕಳಕಳಿಯೂ ತಿಳಿಯುತ್ತದೆ. ಇಲ್ಲಿ ಶಿಕ್ಷಕರೊಂದಿಗೆ ಅವರು ಕೂಡ ಪ್ರಶಂಸನಾರ್ಹರು.

–ಸಂಗಮೇಶ್ ಯಡ್ರಾಮಿ, ಅರಕೇರಾ, ದೇವದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.