ಶುಕ್ರವಾರ, ಜನವರಿ 24, 2020
27 °C

ಲಟ-ಪಟ ಶಬ್ದಪ್ರಿಯರಿಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲು ಚಲಿಸುವಾಗ ಕೇಳಿಬರುತ್ತಿದ್ದ ‘ಲಟ-ಪಟ’ ಸದ್ದನ್ನು ಇನ್ನು ಮುಂದೆ ಕೇಳಲಾಗದು, ಈಗ ಬರೀ ಸುಂಯ್ ಎನ್ನುವ ಶಬ್ದವಷ್ಟೇ ಹೊಮ್ಮುವುದು ಎಂದು ವರದಿಯಾಗಿದೆ (ಪ್ರ.ವಾ., ಜ.2). ನಿಶ್ಶಬ್ದ ಪಯಣವನ್ನು ಬಯಸುವವರಿಗೆ ಈ ಸುದ್ದಿ ಸಂತಸ ತಂದರೂ ಆ ಶಬ್ದ ಕೇಳುತ್ತಾ ಪಯಣಿಸುತ್ತಿದ್ದ ನನ್ನಂತಹ ಅನೇಕರಿಗೆ ನಿರಾಸೆ ಆಗುವುದಂತೂ ಸತ್ಯ. ಆ ‘ಲಟ-ಪಟ’ ಎಂಬ ಸದ್ದನ್ನು ಕೇಳುವುದೂ ಒಂದು ಆನಂದವೇ ಸರಿ. ಆದರೆ ಈ ಸದ್ದು ಎ.ಸಿ. ಇರುವ ಕೋಚುಗಳಲ್ಲಿ ಬಹುತೇಕ ಕೇಳದು.

ಹಾಸ್ಯ ಚುಟುಕು ಕವಿ ಡುಂಡಿರಾಜ್ ಅವರು ಬ್ಯಾಂಕ್ ಕೆಲಸಕ್ಕೆ ರಜೆ ಹಾಕಿ ರೈಲಿನಲ್ಲಿ ಪ್ರವಾಸಕ್ಕೆ ಹೋದಾಗ, ಆ ಶಬ್ದ ಕೇಳಿ ‘ಬ್ಯಾಂಕ್ ಬಿಟ್ಟು ಪ್ರವಾಸಕ್ಕೆ ಬಂದರೂ ಇಲ್ಲೂ ಚೆಕ್-ಬುಕ್, ಚೆಕ್- ಬುಕ್ ಎಂಬ ಶಬ್ದ ಕೇಳಬೇಕೇ!’ ಎಂದು ಹಾಸ್ಯ ಮಾಡಿದ್ದು ನೆನಪಾಯಿತು. ಏನೇ ಆದರೂ ಬದಲಾವಣೆ ಜಗದ ನಿಯಮ, ಒಪ್ಪಿಕೊಳ್ಳಬೇಕಷ್ಟೆ. ಆ ಲಟ-ಪಟ ಶಬ್ದಪ್ರಿಯರು ಈಗಲೇ ಒಮ್ಮೆ ಪಯಣಿಸಿ ಆನಂದಪಟ್ಟುಬಿಡಲಿ.

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು