ಪಂಚರಾಜ್ಯಗಳಲ್ಲಿ ಬಿರುಸಿನ ಚುನಾವಣೆ: ಚಿತ್ರಗಳಲ್ಲಿ ನೋಡಿ
ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಗತಿಯಲ್ಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಸ್ಸಾಂ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ, ನಟ ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ಮತದಾನ ಮಾಡಿದರು.
West Bengal election | Assam Election | kerala election | tamil nadu election | election 2021 |ಕೇರಳದ ಕಣ್ಣೂರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್
ತಮಿಳುನಾಡಿನಲ್ಲಿ ವೃದ್ಧೆಯೊಬ್ಬರು ಮತ ಚಲಾಯಿಸಿದರು
ತಮಿಳುನಾಡಿನ ಮಗತಟ್ಟೆಯೊಂದರಲ್ಲಿ ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿರುವ ಜನರು
ಎಂಎನ್ಎಂ ಪಕ್ಷದ ಸ್ಥಾಪಕ ಕಮಲ ಹಾಸನ್ ಅವರು ಮತ ಚಲಾಯಿಸಿದರು
ಪಶ್ಚಿಮ ಬಂಗಾಳದಲ್ಲಿ ಮತಗಟ್ಟೆಗೆ ಜನರನ್ನು ಬಿಡುವ ಮುನ್ನ ಕೋವಿಡ್ ಮಾರ್ಗಸೂಚಿ ಪಾಲನೆ
ಅಸ್ಸಾಂನಲ್ಲಿ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ ಪತ್ನಿ ಹಾಗೂ ಮಗನೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು
ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಕುಟುಂಬ ಸಮೇತರಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು
ಅಸ್ಸಾಂನಲ್ಲಿ ವೃದ್ಧೆಯೊಬ್ಬರನ್ನು ಸೈಕಲ್ನಲ್ಲಿ ಮತಗಟ್ಟೆಗೆ ಕರೆತರಲಾಯಿತು.
ಅಸ್ಸಾಂನಲ್ಲಿ ಬೋಡೊ ಬುಡಕಟ್ಟು ಮಹಿಳೆಯೊಬ್ಬರು ಮತ ಚಲಾಯಿಸಿದ ಬಳಿಕ ಫೊಟೊಗೆ ಪೋಸ್ ನೀಡಿದರು.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಪಶ್ಚಿಮ ಬಂಗಾಳ ಚುನಾವಣೆ, ಚಿತ್ರಗಳಲ್ಲಿ ನೋಡಿ
ಪಶ್ಚಿಮ ಬಂಗಾಳದ ವಿಧಾನಸಭೆಗೆ ಇಂದು 4ನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಉತ್ತರ ಬಂಗಾಳದ ಕೂಚ್ ಬೆಹಾರ್ ಮತ್ತು ಅಲಿಪುರ್ದುರ್, ದಕ್ಷಿಣದ 24 ಪರಗಣ, ಹೌರಾ ಮತ್ತು ಹೂಗ್ಲಿ ಜಿಲ್ಲೆಗಳ 1 ಕೋಟಿಗೂ ಹೆಚ್ಚು ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸುತ್ತಿದ್ದಾರೆ. 44 ಕ್ಷೇತ್ರಗಳಲ್ಲಿ ಕಣದಲ್ಲಿರುವ 370 ಅಭ್ಯರ್ಥಿಗಳ ಪೈಕಿ ಚಿತ್ರತಾರೆಯರು, ಸಂಸದರು, ಕ್ರಿಕೆಟರ್ ಸೇರಿದಂತೆ ಘಟಾನುಘಟಿಗಳಿದ್ದಾರೆ.
West Bengal election | election 2021 |ದಕ್ಷಿಣ 24 ಪರಗಣ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿರುವ ಮತದಾರರು
ದಕ್ಷಿಣ 24 ಪರಗಣ ಜಿಲ್ಲೆಯ ಬಂಗ್ರಚಕ್ರ ಮತಗಟ್ಟೆಯಲ್ಲಿ ವೃದ್ಧರೊಬ್ಬರಿಗೆ ನೆರವಾದ ಭದ್ರತಾ ಸಿಬ್ಬಂದಿ
ಕೋಲ್ಕತ್ತದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿರುವ ಮತದಾರರು
ದಕ್ಷಿಣ 24 ಪರಗಣ ಜಿಲ್ಲೆಯ ಬಂಗ್ರಚಕ್ರ ಮತಗಟ್ಟೆ ಬಳಿ ಬಿಗಿ ಬಂದೋಬಸ್ತ್
ಕೋಲ್ಕತ್ತದಲ್ಲಿ ಮತ ಚಲಾಯಿಸಿದ ಬಳಿಕ ವ್ಯಕ್ತಿಯೊಬ್ಬರು ಸಂಭ್ರಮ ವ್ಯಕ್ತಪಡಿಸಿದರು
ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | Election 2021: ಪ.ಬಂಗಾಳ, ಅಸ್ಸಾಂನಲ್ಲಿ ಬಿರುಸಿನ ಮತದಾನ
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆಗಾಗಿ ಎರಡನೇ ಹಂತದ ಮತದಾನವು ಗುರುವಾರದಂದು ಬಿರುಸಿನಿಂದ ಸಾಗುತ್ತಿದೆ. ಅಸ್ಸಾಂನ 39 ಮತ್ತು ಪ. ಬಂಗಾಳದ 30 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಕೆಲವು ಕಡೆ ಸಣ್ಣ ಪುಟ್ಟ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಬಂಗಾಳದ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. (ಚಿತ್ರ ಕೃಪೆ: ಪಿಟಿಐ, ಎಎಫ್ಪಿ)
election 2021 | West Bengal election | Assam Election | mamata banerjee | TMC | BJP |ಅಸ್ಸಾಂನ ಮತಗಟ್ಟೆಯೊಂದರಲ್ಲಿ ಬಿಗು ಬಂದೋಬಸ್ತ್
ಅಸ್ಸಾಂನ ಮೊರಿಗಾಂವ್ನಲ್ಲಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿರುವ ಬುಡಕಟ್ಟು ಜನಾಂಗದ ಮಹಿಳೆಯರು
ಮತದಾನದ ಹಕ್ಕು ಚಲಾಯಿಸಲು ಬೈಕ್ನಲ್ಲಿ ತೆರಳುತ್ತಿರುವ ಬಿಜೆಪಿಯ ಸುವೇಂದು ಅಧಿಕಾರಿ
ಅಸ್ಸಾಂನ ಸಿಪಾಜಾರ್ನಲ್ಲಿ ಮತ ಚಲಾಯಿಸಿದ ಮಹಿಳೆಯರು
ನಂದಿಗ್ರಾಮದಲ್ಲಿ ಬಿರುಸಿನಿಂದ ಸಾಗುತ್ತಿರುವ ಮತದಾನ
ಪಶ್ಚಿಮ ಬಂಗಾಳದ ಕೆಲವು ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಜನಸಂದಣಿ ಕಂಡುಬಂದಿತ್ತು.
ಹಿರಿಯ ಮತದಾರರು ಚುನಾವಣಾ ಅಧಿಕಾರಿಗಳ ನೆರವಿನೊಂದಿಗೆ ಮತದಾನ ಮಾಡಿದರು.
ಹಿರಿಯರು ಹುಮ್ಮಸ್ಸಿನಿಂದ ಮತ ಚಲಾಯಿಸಿದರು.
ಪ.ಬಂಗಾಳದಲ್ಲಿ ಮತದಾನ ಕೇಂದ್ರದ ಹೊರಗಡೆ ಕಾಯುತ್ತಿರುವ ಮತದಾರರು
ಸೈಕಲ್ ರಿಕ್ಷಾ ಮೂಲಕ ಮತದಾನ ಕೇಂದ್ರಕ್ಕೆ ಆಗಮನ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS: ಸಂಭ್ರಮದ ಹೋಳಿ, ಎಲ್ಲೆಲ್ಲೂ ಬಣ್ಣದೋಕುಳಿ
ರಸ್ತೆಗಳಲ್ಲಿ ಚೆಲ್ಲಾಡಿದ್ದ ಬಣ್ಣ, ಜನರ ಮುಖ ಹಾಗೂ ಮೈಯೆಲ್ಲವೂ ಬಣ್ಣದಲ್ಲಿ ಮಿಂದಿದ್ದ ಚಿತ್ರಣವು ಈ ವರ್ಷ ದೇಶದಾದ್ಯಂತ ಹೋಳಿ ಹಬ್ಬದ ಸಂಭ್ರಮ, ಸಡಗರಕ್ಕೆ ಸಾಕ್ಷಿಯಾಗಿದೆ. ಹುಣ್ಣಿಮೆಯ ದಿನವಾದ ಭಾನುವಾರ ಯುವಕ ಹಾಗೂ ಯುವತಿಯರು ರಂಗಿನಾಟ ಆರಂಭಿಸಿದ್ದರು. ಪಂಜಾಬ್ನ ಅಮೃತಸರ, ಉತ್ತರ ಪ್ರದೇಶದ ಆಗ್ರಾ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಎಲ್ಲಿ ನೋಡಿದರೂ ಬಣ್ಣದೋಕುಳಿಯ ಚಿತ್ತಾರ ಎದ್ದು ಕಾಣುತ್ತಿತ್ತು.
holi festival | Holi celebrations | India | Amritsar | Agra |ವಿಶ್ವವಿಖ್ಯಾತ ಪ್ರವಾಸಿ ತಾಣ ಆಗ್ರಾದ ತಾಜ್ ಮಹಲ್ ಎದುರು ಯುವತಿಯರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಿದರು.
ಮಂಡ್ಯ ನಗರದ ಕಾವೇರಿ ಉದ್ಯಾನವನದಲ್ಲಿ ಭಾನುವಾರ ಯುವತಿಯರು, ಚಿಣ್ಣರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಿದರು.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಯುವತಿಯರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಿದರು.
ಕೋಲ್ಕತ್ತದಲ್ಲಿ ಯುವತಿಯರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಿದರು.
ಪಂಜಾಬ್ನ ಅಮೃತಸರದಲ್ಲಿ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಲಾಯಿತು.
ಪಂಜಾಬ್ನ ಅಮೃತಸರದಲ್ಲಿ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಲಾಯಿತು.
ಪಂಜಾಬ್ನ ಅಮೃತಸರದಲ್ಲಿ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಲಾಯಿತು.
ಪಂಜಾಬ್ನ ಅಮೃತಸರದಲ್ಲಿ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಲಾಯಿತು.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ವಿಶ್ವದ ಎತ್ತರದ ರೈಲ್ವೆ ಸೇತುವೆಯ ತಳಭಾಗದ ಕಾಮಗಾರಿ ಪೂರ್ಣ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಚೆನಾಬ್ ನದಿ ಮೇಲೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ತಳ ಭಾಗದ ಕಾಮಗಾರಿ ಪೂರ್ಣಗೊಂಡಿದೆ. ಇದನ್ನೂ ಓದಿ... ಕಾಶ್ಮೀರ: ವಿಶ್ವದ ಎತ್ತರದ ರೈಲ್ವೆ ಸೇತುವೆಯ ತಳಭಾಗದ ಕಾಮಗಾರಿ ಪೂರ್ಣ -ಸಚಿವ ಗೋಯಲ್
Railway Ministry | Railway bridge | Jammu and Kashmir |ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಚೆನಾಬ್ ನದಿ ಮೇಲೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ತಳ ಭಾಗದ ಕಾಮಗಾರಿ ಪೂರ್ಣಗೊಂಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಚೆನಾಬ್ ನದಿ ಮೇಲೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ತಳ ಭಾಗದ ಕಾಮಗಾರಿ ಪೂರ್ಣಗೊಂಡಿದೆ.
ರೈಲ್ವೆ ಸೇತುವೆ ಕಾಮಗಾರಿಯ ದೃಶ್ಯ
ಚೆನಾಬ್ ನದಿ ಮೇಲೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ತಳ ಭಾಗದ ಕಾಮಗಾರಿ ಪೂರ್ಣಗೊಂಡಿದೆ.
ರೈಲ್ವೆ ಸೇತುವೆ ಕಾಮಗಾರಿಯ ದೃಶ್ಯ