ಐಪಿಎಲ್ 2022 ಟೂರ್ನಿಯಲ್ಲಿ ಆರ್‌ಸಿಬಿ, ಭಾನುವಾರ ವಾಂಖೆಡೆ ಮೈದಾನದಲ್ಲಿ ಎಸ್‌ಆರ್‌ಎಚ್ ವಿರುದ್ಧ ನಡೆದ ಪಂದ್ಯದಲ್ಲಿ 67 ರನ್ ಅಂತರದ ಗೆಲುವು ದಾಖಲಿಸಿದೆ. ನಾಯಕ ಫಫ್ ಡುಪ್ಲೆಸಿ ಆಕರ್ಷಕ ಅರ್ಧಶತಕ (73*) ಗಳಿಸಿದರೆ ವನಿಂದು ಹಸರಂಗ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು. 'ಗೋ ಗ್ರೀನ್' ಅಭಿಯಾನದ ಅಂಗವಾಗಿ ಆರ್‌ಸಿಬಿ ಹಸಿರು ಪೋಷಾಕು ಧರಿಸಿ ಕಣಕ್ಕಿಳಿದಿತ್ತು.