ಕಟಕ್: ನಾಯಕ ರೋಹಿತ್ ಶರ್ಮಾ ಎದುರಿಸುತ್ತಿರುವ ರನ್ ಬರ, ಕೊಹ್ಲಿ ಮರಳಿದರೆ ತಂಡಕದಿಂದ ಯಾರನ್ನು ಕೈಬಿಡಬೇಕೆಂಬ ದ್ವಂದ್ವ– ಇವೆರಡು ವಿಷಯ ಭಾರತ ತಂಡವನ್ನು ಕಾಡುತ್ತಿದೆ. ಇದರ ಗೋಜಲಿನ ನಡುವೆಯೇ ಭಾನುವಾರ ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯ ಗೆದ್ದು ಸರಣಿ ಗೆಲುವನ್ನು ಸಾಧಿಸಲು ಆತಿಥೇಯರು ತುದಿಗಾಲಲ್ಲಿದ್ದಾರೆ.

ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಗೆದ್ದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆದಿದೆ. ಇಂಗ್ಲೆಂಡ್ಗೆ ಈ ಪಂದ್ಯ ಗೆದ್ದರೆ ಮಾತ್ರ ಸರಣಿ ಜೀವಂತವಾಗಿಡುವ ಅವಕಾಶ ಸಿಗಲಿದೆ.

ಬಲಮೊಣಕಾಲಿನಲ್ಲಿ ಊತ ಕಂಡಿದ್ದ ಕಾರಣ ಕೊಹ್ಲಿ ಆ ಪಂದ್ಯ ಆಡಿರಲಿಲ್ಲ. ಇದು ಚಾಂಪಿಯನ್ಸ್ ಟ್ರೋಫಿ ಸನಿಹವಿರುವಾಗ ತಂಡದಲ್ಲಿ ಆತಂಕವನ್ನೂ ಮೂಡಿಸಿತ್ತು. ಆದರೆ ಉಪನಾಯಕ ಶುಭಮನ್ ಗಿಲ್ ಅವರು ಎರಡನೇ ಪಂದ್ಯದ ವೇಳೆ ಕೊಹ್ಲಿ ಆಯ್ಕೆಗೆ ಲಭ್ಯರಿರುತ್ತಾರೆ ಎಂದು ಹೇಳಿದ್ದಾರೆ.

ಇದೇ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2019ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಚೇಸ್ ಮಾಡುವಾಗ ಕೊಹ್ಲಿ 85 ರನ್ ಗಳಿಸಿ ಪಂದ್ಯದ ಆಟಗಾರನಾಗಿದ್ದರು. ಕೊಹ್ಲಿ ತಂಡದೊಂದಿಗೆ ಕಟಕ್ಗೆ ಪ್ರಯಾಣ ಬೆಳೆಸಿದ್ದು, ಆರಾಮವಾಗಿದ್ದಂತೆ ಕಂಡರು.

ದ್ವಂದ್ವ:

ಕೊಹ್ಲಿ ಲಭ್ಯತೆ ಭಾರತ ತಂಡಕ್ಕೆ ನೆಮ್ಮದಿ ಮೂಡಿಸಿದರೂ ಯಾರನ್ನು ಕೈಬಿಡಬೇಕೆಂಬ ದ್ವಂದ್ವ ಎದುರಾಗಿದೆ. ಕೊಹ್ಲಿ ಬದಲು ಕೊನೆಯ ಗಳಿಗೆಯಲ್ಲಿ ಆಡುವ ಅವಕಾಶ ಪಡೆದ ಶ್ರೇಯಸ್ ಅಯ್ಯತ್ 36 ಎಸೆತಗಳಲ್ಲಿ 59 ರನ್ ಬಾರಿಸಿದ್ದರಿಂದ ಅವರನ್ನು ಕೈಬಿಡುವ ನಿರ್ಧಾರ ಈಗ ದೂರವೆಂದು ಕಾಣುತ್ತಿದೆ. ಅವರ ಬದಲು ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಡುವ ಸಾಧ್ಯತೆ ಅಧಿಕ. ಇದರಿಂದ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಗಿಲ್ ಮುಂದಿನ ಪಂದ್ಯದಲ್ಲಿ ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಬೇಕಾಗುತ್ತದೆ. ಜೈಸ್ವಾಲ್ ಮೊದಲ ಪಂದ್ಯದಲ್ಲಿ ಅಂಥ ಆರಂಭ ಪಡೆದಿರಲಿಲ್ಲ.

ಸ್ವತಃ ಕೊಹ್ಲಿ ಅವರೂ ಇತ್ತೀಚಿನ ಕೆಲ ತಿಂಗಳಿಂದ ಉತ್ತಮ ಲಯದಲ್ಲಿಲ್ಲ. ಆಸ್ಟ್ರೇಲಿಯಾದಲ್ಲಂತೂ ಅವರು ಪದೇ ಪದೇ ಆಫ್ ಸ್ಟಂಪ್ ಆಚೆಗಿನ ಎಸೆತಗಳನ್ನು ಕೆಣಕಲು ಹೋಗಿ ವಿಕೆಟ್ ಚೆಲ್ಲುತ್ತಿದ್ದರು. ರಣಜಿ ಟ್ರೋಫಿಯ ಒಂದು ಇನಿಂಗ್ಸ್ನಲ್ಲೂ 36 ವರ್ಷದ ಬ್ಯಾಟರ್ ವಿಫಲರಾಗಿದ್ದರು.

ಆದರೆ ಏಕದಿನ ಮಾದರಿ ಕೊಹ್ಲಿ ಅವರಿ ಅಚ್ಚುಮೆಚ್ಚಿನದು. ಅವರು ಈ ಮಾದರಿಯಲ್ಲಿ 14000 ರನ್ ಮೈಲಿಗಲ್ಲು ತಲುಪಲು 94 ರನ್ ಅಷ್ಟೇ ದೂರದಲ್ಲಿದ್ದಾರೆ. ಸಚಿನ್ ರಮೇಶ್ ತೆಂಡೂಲ್ಕರ್ (18426) ಮತ್ತು ಕುಮಾರ ಚೊಕ್ಶನಾದ ಸಂಗಕ್ಕರ (14,234) ಮಾತ್ರ ಅವರಿಗಿಂತ ಮುಂದೆಯಿದ್ದಾರೆ. ತೆಂಡೂಲ್ಕರ್ (350 ಇನಿಂಗ್ಸ್) ಮತ್ತು ಸಂಗಕ್ಕರ (378 ಇನಿಂಗ್ಸ್) ಅವರು ಕೊಹ್ಲಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

ರೋಹಿತ್ ರನ್ಕ್ಷಾಮ:

ರೋಹಿತ್ ಅವರ ವೈಫಲ್ಯ ಈ ಸರಣಿಯ ಮೊದಲ ಪಂದ್ಯದಲ್ಲೂ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಅವರ ಗಳಿಕೆ ಬರೇ 2. ಚೆಂಡನ್ನು ಬೌಂಡರಿಗೆತ್ತುವ ಪ್ರಯತ್ನದಲ್ಲಿ ಮಿಡ್ವಿಕೆಟ್ನಲ್ಲಿ ಕ್ಯಾಚ್ಕೊಟ್ಟಿದ್ದರು.

ಸರಣಿ ಮೂರು ಪಂದ್ಯಗಳದ್ದಾಗಿರುವುದರಿಂದ ಬಟ್ಲರ್ ಬಳಗಕ್ಕೆ ಈ ಪಂದ್ಯ ಮಾಡು–ಮಡಿ ಎಂಬಂತಾಗಿದೆ. ಪ್ರವಾಸಿ ತಂಡ ಆಕ್ರಮಣಕಾರಿ ಆಟದ ತಂತ್ರ ಬದಲಾಯಿಸಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ತಂಡಗಳು:

ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ.

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೋ ರೂಟ್, ಫಿಲ್ ಸಾಲ್ಟ್, ಜೇಮಿ ಸ್ಮಿತ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸ್, ಲಿಯಾಮ್ ಲಿವಿಂಗ್ಸ್ಟೋನ್, ಜೇಮಿ ಓವರ್ಟನ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸಖಿಬ್ ಮಹಮೂದ್, ಅದಿಲ್ ರಶೀದ್ ಮತ್ತು ಮಾರ್ಕ ವುಡ್.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.