ಬೆಂಗಳೂರು: 'ಈ ಸಲ ಕಪ್ ನಮ್ದೇ' ಎಂದು ಹೇಳಲು ನನಗೆ ಅವಕಾಶವಿಲ್ಲ. ಆದರೆ ಖಂಡಿತವಾಗಿಯೂ ಈ ಸಲ ಆರ್ಸಿಬಿ ಅಭಿಮಾನಿಗಳ ದೀರ್ಘ ಕಾಲದ ಕಾಯುವಿಕೆಗೆ ವಿರಾಮ ಬೀಳಲಿದೆ ಎಂದು ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿರುವ ಆರ್ಸಿಬಿ ಫೈನಲ್ಗೆ ಲಗ್ಗೆ ಇಟ್ಟಿದೆ. ಆ ಮೂಲಕ 2016ರ ಬಳಿಕ ಫೈನಲ್ಗೆ ಪ್ರವೇಶಿಸಿದೆ.

ಈ ಸಂಬಂಧ 'ಇಎಸ್ಪಿಎನ್ ಕ್ರಿಕ್ಇನ್ಫೋ'ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಎಬಿ ಡಿವಿಲಿಯರ್ಸ್, ಆರ್ಸಿಬಿ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.

ಆರ್ಸಿಬಿ ಅಭಿಮಾನಗಳಿಗೆ ನೀವು ನೀಡುವ ಸಂದೇಶ ಏನು ಎಂದು ಕೇಳಿದಾಗ, 'ಸಮಯ ಆಗತವಾಗಿದೆ. ಈ ಸಲ ಆರ್ಸಿಬಿ ಗುರಿ ಮುಟ್ಟಲಿದೆ. 'ಬೆಂಗಳೂರಿನಲ್ಲಿ ಬಳಕೆ ಮಾಡುವ ಆ ವಾಕ್ಯವನ್ನು (ಈ ಸಲ ಕಪ್ ನಮ್ದೇ) ಬಳಕೆ ಮಾಡಲು ನನಗೆ ಅನುಮತಿಯಿಲ್ಲ. ಅದನ್ನು ನಾನು ಹೇಳಬಾರದೆಂದು ವಿರಾಟ್ ಕೊಹ್ಲಿ ಹೇಳಿದ್ದರು. ಆದರೆ ಈ ಸಲ ಆರ್ಸಿಬಿ ಕಪ್ ಗೆಲ್ಲುವ ನಂಬಿಕೆ ನನಗಿದೆ. ಕಾತರದಿಂದಿರಿ' ಎಂದು ಹೇಳಿದ್ದಾರೆ.

ಅದೇ ವೇಳೆ ಅತ್ಯಂತ ಒತ್ತಡದ ಸನ್ನವೇಶದಲ್ಲೂ ತಂಡದೆಲ್ಲ ಆಟಗಾರರ ಅತ್ಯುತ್ತಮ ಪ್ರದರ್ಶನವನ್ನು ವಿಲಿಯರ್ಸ್ ಕೊಂಡಾಡಿದ್ದಾರೆ.

2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಫೈನಲ್ಗೆ ಪ್ರವೇಶಿಸಿತ್ತು. ಅಂದಿನ ತಂಡದಲ್ಲಿ ಎಬಿ ಡಿವಿಲಿಯರ್ಸ್ ಇದ್ದರು.
.'ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ'; ಪತ್ನಿ ಅನುಷ್ಕಾಗೆ ಸನ್ನೆ ಮಾಡಿದ ವಿರಾಟ್ .IPL | ಫೈನಲ್ಗೆ ಆರ್ಸಿಬಿ; ವಿರಾಟ್, ಕುಂಬ್ಳೆ, ವೆಟೊರಿ ಸಾಲಿಗೆ ಪಾಟೀದಾರ್.RCB Final | 4ನೇ ಬಾರಿ ಫೈನಲ್ಗೆ ಲಗ್ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು.ಯಶ್, ಜೋಶ್, ಸುಯಶ್ ತಂದ ಯಶಸ್ಸು: RCB ಕಿರೀಟಧಾರಣೆಗೆ ಇನ್ನೊಂದೇ ಹೆಜ್ಜೆ ಬಾಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.