ಬೆಂಗಳೂರು: ರಜತ್ ಪಾಟೀದಾರ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿದೆ.

ಆ ಮೂಲಕ ಚೊಚ್ಚಲ ಪ್ರಯತ್ನದಲ್ಲೇ ಆರ್ಸಿಬಿ ತಂಡವನ್ನು ಫೈನಲ್ಗೆ ತಲುಪಿಸಿದ ಹಿರಿಮೆಗೆ ಪಾಟೀದಾರ್ ಭಾಜನರಾಗಿದ್ದಾರೆ.

ಇನ್ನು ಆರ್ಸಿಬಿ ತಂಡವನ್ನು ಐಪಿಎಲ್ ಫೈನಲ್ಗೆ ತಲುಪಿಸಿದ ನಾಲ್ಕನೇ ಕಪ್ತಾನ ಎನಿಸಿದ್ದಾರೆ. ಆ ಮೂಲಕ ದಿಗ್ಜಜರಾದ ಅನಿಲ್ ಕುಂಬ್ಳೆ, ಡೇನಿಯಲ್ ವೆಟೊರಿ ಹಾಗೂ ವಿರಾಟ್ ಕೊಹ್ಲಿ ಸಾಲಿಗೆ ಸೇರಿದ್ದಾರೆ.

2009ರಲ್ಲಿ ಅನಿಲ್ ಕುಂಬ್ಳೆ, 2011ರಲ್ಲಿ ಡೇನಿಯಲ್ ವೆಟೊರಿ ಹಾಗೂ 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಫೈನಲ್ಗೆ ಪ್ರವೇಶಿಸಿತ್ತು. ಆದರೆ ಮೂರು ಬಾರಿಯೂ ರನ್ನರ್-ಅಪ್ ಆಗಿತ್ತು.

ಈಗ ಆರ್ಸಿಬಿಗೆ ಚೊಚ್ಚಲ ಕಪ್ ಗೆಲ್ಲಿಸಿಕೊಡುವ ಅವಕಾಶ ಪಾಟೀದಾರ್ ಮುಂದಿದೆ.

ಮೊದಲ ಪ್ರಯತ್ನದಲ್ಲೇ ಫೈನಲ್ ಸಾಧನೆ:

ನಾಯಕತ್ವ ವಹಿಸಿದ ಮೊದಲ ಆವೃತ್ತಿಯಲ್ಲೇ ತಂಡವನ್ನು ಫೈನಲ್ಗೆ ತಲುಪಿಸಿದ ಕೆಲವೇ ಕೆಲವೇ ನಾಯಕರುಗಳ ಸಾಲಿಗೆ ಪಾಟೀದಾರ್ ಸಹ ಸೇರ್ಪಡೆಯಾಗಿದ್ದಾರೆ.

2008ರಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, 2009ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2013ರಲ್ಲಿ ರೋಹಿತ್ ಶರ್ಮಾ ಕಪ್ತಾನಗಿರಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು 2022ರಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಗುಜರಾತ್ ಟೈಟನ್ಸ್ ಫೈನಲ್ಗೆ ಪ್ರವೇಶಿಸಿತ್ತು.
.'ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ'; ಪತ್ನಿ ಅನುಷ್ಕಾಗೆ ಸನ್ನೆ ಮಾಡಿದ ವಿರಾಟ್ .RCB Final | 4ನೇ ಬಾರಿ ಫೈನಲ್ಗೆ ಲಗ್ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.