ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ಇದೇ ಮೊದಲ ಬಾರಿ ಅಮೆರಿಕದಲ್ಲಿ ವಿಶ್ವಕಪ್; ಭಾರತದ ವೇಳಾಪಟ್ಟಿ ಇಲ್ಲಿದೆ

Published 29 ಮೇ 2024, 11:20 IST
Last Updated 29 ಮೇ 2024, 11:20 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ 2024ರ ಟೂರ್ನಿಗೆ ವೆಸ್ಟ್ಇಂಡೀಸ್ ಹಾಗೂ ಅಮೆರಿಕ ಅತಿಥ್ಯ ವಹಿಸುತ್ತಿದೆ. ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿದೆ. ಜೂನ್ 1ರಂದು ಡಲ್ಲಾಸ್‌‌ನಲ್ಲಿ ಉದ್ಘಾಟನಾ ಪಂದ್ಯ ಮತ್ತು ಜೂನ್ 29ರಂದು ಬಾರ್ಬಡೋಸ್‌ನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.

ಅಮೆರಿಕ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಗೆ ಅತಿಥ್ಯ ವಹಿಸುತ್ತಿದೆ. ಮತ್ತೊಂದೆಡೆ ವೆಸ್ಟ್‌ಇಂಡೀಸ್, 2007ರಲ್ಲಿ ಏಕದಿನ ಹಾಗೂ 2010ರಲ್ಲಿ ಟ್ವೆಂಟಿ-20 ವಿಶ್ವಕಪ್‌ಗೆ ಅತಿಥ್ಯ ವಹಿಸಿತ್ತು.

ವೆಸ್ಟ್‌ಇಂಡೀಸ್‌ನಲ್ಲಿ ಆರು ಹಾಗೂ ಅಮೆರಿಕದ ಮೂರು ಸೇರಿದಂತೆ ಒಟ್ಟು ಒಂಬತ್ತು ತಾಣಗಳಲ್ಲಿ ವಿಶ್ವಕಪ್ ಆಯೋಜನೆಯಾಗಲಿದೆ.

ವೆಸ್ಟ್‌ಇಂಡೀಸ್:

ನೌರ್ತ್ ಸೌಂಡ್ (ಆ್ಯಂಟಿಗುವಾ ಮತ್ತು ಬಾರ್ಬುಡಾ),

ಬ್ರಿಡ್ಜ್‌ಟೌನ್ (ಬಾರ್ಬಡೋಸ್),

ಜಾರ್ಜ್‌ಟೌನ್ (ಗಯಾನ),

ಗ್ರಾಸ್‌ ಐಲ್ (ಸೇಂಟ್ ಲೂಸಿಯಾ),

ಕಿಂಗ್ಸ್‌ಟೌನ್ (ಸೇಂಟ್ ವಿನ್ಸೆಂಟ್),

ತರೌಬಾ (ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ).

ಅಮೆರಿಕ:

ಫ್ಲೋರಿಡಾ (ಲೌಂಡರ್‌ಹಿಲ್ ),

ನ್ಯೂಯಾರ್ಕ್,

ಟೆಕ್ಸಾಸ್ (ಡಲ್ಲಾಸ್).

ಭಾಗವಹಿಸುವ ತಂಡಗಳು:

ವೆಸ್ಟ್‌ಇಂಡೀಸ್, ಅಮೆರಿಕ, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನೆದರ್ಲೆಂಡ್ಸ್, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಕೆನಡಾ, ನೇಪಾಳ, ಒಮಾನ್, ನಮೀಬಿಯಾ, ಉಗಾಂಡ ಮತ್ತು ಪಪುವಾ ನ್ಯೂಗಿನಿ.

ಟೀಮ್ ಇಂಡಿಯಾ

ಟೀಮ್ ಇಂಡಿಯಾ

(ಪಿಟಿಐ ಚಿತ್ರ)

ಸ್ವರೂಪ:

ಒಟ್ಟು 20 ತಂಡಗಳನ್ನು ತಲಾ ಐದು ತಂಡಗಳಂತೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪು ವಿಭಾಗದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ತೇರ್ಗಡೆ ಪಡೆಯಲಿವೆ. ಅಲ್ಲೂ ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ. ಸೂಪರ್ ಎಂಟು ಹಂತದ ಪಂದ್ಯಗಳು ಜೂನ್ 19ರಂದು ಆರಂಭವಾಗಲಿದೆ.

  • 'ಎ' ಗುಂಪು: ಭಾರತ, ಪಾಕಿಸ್ತಾನ, ಅಮೆರಿಕ, ಕೆನಡಾ, ಐರ್ಲೆಂಡ್

  • 'ಬಿ' ಗುಂಪು: ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಒಮಾನ್, ಇಂಗ್ಲೆಂಡ್

  • 'ಸಿ' ಗುಂಪು: ವೆಸ್ಟ್‌ಇಂಡೀಸ್, ಅಫ್ಗಾನಿಸ್ತಾನ, ಉಗಾಂಡ, ಪಪುವಾ ನ್ಯೂಗಿನಿ, ನ್ಯೂಜಿಲೆಂಡ್.

  • 'ಡಿ' ಗುಂಪು: ನೆದರ್ಲೆಂಡ್ಸ್, ನೇಪಾಳ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ.

ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಗೂ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನೇರ ಪ್ರಸಾರದ ಹಕ್ಕನ್ನು ಹೊಂದಿದೆ.

ಭಾರತದ ಪಂದ್ಯಗಳ ವೇಳಾಪಟ್ಟಿ:

  • ಜೂನ್ 5: ಐರ್ಲೆಂಡ್ ವಿರುದ್ಧ, ನ್ಯೂಯಾರ್ಕ್

  • ಜೂನ್ 9: ಪಾಕಿಸ್ತಾನ ವಿರುದ್ಧ, ನ್ಯೂಯಾರ್ಕ್

  • ಜೂನ್ 12: ಅಮೆರಿಕ ವಿರುದ್ಧ, ನ್ಯೂೂಯಾರ್ಕ್

  • ಜೂನ್ 15: ಕೆನಡಾ ವಿರುದ್ಧ, ಫ್ಲೋರಿಡಾ

ಐಸಿಸಿ ಟ್ವೆಂಟಿ-20 ವಿಶ್ವಕಪ್ ವಿಜೇತ ತಂಡಗಳು:

2007: ಭಾರತ

2009: ಪಾಕಿಸ್ತಾನ

2010: ಇಂಗ್ಲೆಂಡ್

2012: ವೆಸ್ಟ್‌ಇಂಡೀಸ್

2014: ಶ್ರೀಲಂಕಾ

2016: ವೆಸ್ಟ್‌ಇಂಡೀಸ್

2021: ಆಸ್ಟ್ರೇಲಿಯಾ

2022: ಇಂಗ್ಲೆಂಡ್

ಐಸಿಸಿ ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT