ಬುಧವಾರ, ಅಕ್ಟೋಬರ್ 21, 2020
25 °C

ರೈನಾ ದಾಖಲೆ ಹಿಂದಿಕ್ಕಿದ ಧೋನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರನೆಂಬ ದಾಖಲೆ ಬರೆದರು.

ಶುಕ್ರವಾರ 194ನೇ ಪಂದ್ಯ ಆಡಿದ ಅವರು ತಮ್ಮ ‘ಗೆಳೆಯ’ ಸುರೇಶ್ ರೈನಾ ಅವರ ದಾಖಲೆಯನ್ನು ಮೀರಿ ನಿಂತರು.

ಸಿಎಸ್‌ಕೆ ತಂಡವನ್ನು ಧೋನಿಯವರು ಇದುವರೆಗೆ 11 ಋತುಗಳಲ್ಲಿ ಪ್ರತಿನಿಧಿಸಿದ್ದಾರೆ.   2013ರ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಎಸ್‌ಕೆ ತಂಡವು 2016 ಮತ್ತು 2017ರಲ್ಲಿ ಅಮಾನತು ಶಿಕ್ಷೆಗೆ ಒಳಗಾಗಿತ್ತು. ಆಗ ಮಹಿ ಎರಡು ವರ್ಷ ಪುಣೆ ಸೂಪರ್‌ಜೈಂಟ್ಸ್‌ ತಂಡದಲ್ಲಿ ಆಡಿದ್ದರು. ಅಲ್ಲಿ ಅವರು 30 ಪಂದ್ಯಗಳಲ್ಲಿ ಆಡಿದ್ದರು. ಸಿಎಸ್‌ಕೆಗೆ 164 ಪಂದ್ಯಗಳನ್ನು ಆಡಿದ್ದಾರೆ.

2010, 2011 ಮತ್ತು 2018ರಲ್ಲಿ ಅವರ ನಾಯಕತ್ವದಲ್ಲಿ ಸಿಎಸ್‌ಕೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು. ಒಟ್ಟು ಒಂಬತ್ತು ಫೈನಲ್‌ಗಳಲ್ಲಿ ಅವರು ಆಡಿದ್ದಾರೆ. ಒಂದೇ ತಂಡದ ಪರವಾಗಿ ಹೆಚ್ಚು ಪಂದ್ಯಗಳನ್ನು ಆಡಿರುವ ನಾಯಕರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರಾಟ್ ಕೊಹ್ಲಿ (180 ಪಂದ್ಯ) ಅಗ್ರಸ್ಥಾನದಲ್ಲಿದ್ದಾರೆ. 13 ಆವೃತ್ತಿಗಳಲ್ಲಿಯೂ ಅವರು ಆರ್‌ಸಿಬಿಯನ್ನೇ ಪ್ರತಿನಿಧಿಸಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು