ಭಾನುವಾರ, ಮೇ 29, 2022
23 °C

₹ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲಾದ ಅರ್ಜುನ್ ತೆಂಡೂಲ್ಕರ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಗಮನ ಸೆಳೆದಿದ್ದ ಆಟಗಾರರಲ್ಲಿ ಒಬ್ಬರಾದ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ.

₹ 20 ಲಕ್ಷಕ್ಕೆ ಮುಂಬೈ ಫ್ರಾಂಚೈಸಿ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿದ್ದಾರೆ. ಅಪ್ಪ ಆಡಿದ್ದ ತಂಡಕ್ಕೆ ಮಗ ಸಹ ಸೇರ್ಪಡೆಗೊಳ್ಳುತ್ತಿರುವುದು ವಿಶೇಷವಾಗಿದೆ. 

ಮುಂಬೈ ತಂಡದ ಆಟಗಾರರಾಗಿ,  ನಾಯಕರಾಗಿ ತಂಡದ ಜೊತೆ ಸಚಿನ್ ತೆಂಡೂಲ್ಕರ್ ಗುರುತಿಸಿಕೊಂಡಿದ್ದರು. ಮಗನನ್ನು ಮುಂಬೈ ಫ್ರಾಂಚೈಸಿ ಖರೀದಿಸುವ ನಿರೀಕ್ಷೆ ಇತ್ತು.

ಈ ವರ್ಷ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಮುಂಬೈ ಹಿರಿಯ ತಂಡಕ್ಕೆ ಪಾದಾರ್ಪಣೆ ಮಾಡಿದ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ₹ 20 ಲಕ್ಷ ಮೂಲ ಬೆಲೆಯೊಂದಿಗೆ ಆಲ್‌ರೌಂಡರ್ ವಿಭಾಗದ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಮೂಲ ಬೆಲೆಗೆ ಬಿಕರಿ ಯಾಗಿದ್ದಾರೆ.

ಇದನ್ನೂ ಓದಿ.. ಯಾವ ಆಟಗಾರ ಎಷ್ಟು ಬೆಲೆಗೆ ಸೇಲ್? ನೋಡಿ ಲೈವ್ ಬ್ಲಾಗ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು