ದುಬೈ: ಏಷ್ಯಾಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಭಾನುವಾರ) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದಿರುವ ಪಾಕ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 2009ರ ವಿಶ್ವ ಚಾಂಪಿಯನ್ ಪಾಕ್ ತಂಡ ಇದಕ್ಕೆ ಪ್ರತಿಕ್ರಿಯೆ ನೀಡಲು ಸಮಯ ತೆಗೆದುಕೊಂಡಿತು. ನ್ಯೂಜಿಲೆಂಡ್ನ ಮೈಕ್ ಹೆಸ್ಸನ್ ಹೆಡ್ ಕೋಚ್ ಅಗಿ ಹೊಣೆ ವಹಿಸಿಕೊಂಡ ಬಳಿಕ ಚುಟುಕು ಕ್ರಿಕೆಟ್ನ ದೃಷ್ಟಿಕೋನ ಬದಲಾಯಿಸಿದ್ದು, ತಂಡದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.

ಏಪ್ರಿಲ್ 22ರ ಪಹಲ್ಗಾಮ್ ಉಗ್ರರ ದಾಳಿ ನಂತರ ಮೊದಲ ಬಾರಿ ಈ ಎರಡು ತಂಡಗಳು ಎದುರಾಗಿವೆ. ಪಾಕಿಸ್ತಾನ ವಿರುದ್ಧ ಪಂದ್ಯ ಬಹಿಷ್ಕರಿಸದ ಕಾರಣ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ವಿವಿಧ ವಲಯಗಳಿಂದ ಟೀಕಾಪ್ರಹಾರಗಳನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಬಿಸಿಸಿಐ, ಸರ್ಕಾರದ ನೀತಿಯನ್ನು ಅನುಸರಿಸಿದೆ. ಖಂಡ ಮತ್ತು ಐಸಿಸಿ ಕೂಟಗಳಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಕೇಂದ್ರ ಹಸಿರು ನಿಶಾನೆ ತೋರಿದ್ದು, ದ್ವಿಪಕ್ಷೀಯ ಸರಣಿಗಳಿಗೆ ನಿಷೇಧ ಹೇರಿದೆ.

14 ತಿಂಗಳ ಹಿಂದೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಚುಟುಕು ಮಾದರಿಗೆ ವಿದಾಯ ಹೇಳಿದಾಗಲೇ ಭಾರತ ಟಿ20 ತಂಡದಲ್ಲಿ ಪರಿವರ್ತನೆಯ ಯುಗ ಆರಂಭವಾಗಿತ್ತು. ಪಾಕಿಸ್ತಾನ ಈಗ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಮಾಜಿ ನಾಯಕರು ಹಾಗೂ ಪ್ರಮುಖ ಬ್ಯಾಟರ್ಗಳಾದ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಹೊರಗಿಟ್ಟು ಸಲ್ಮಾನ್ ಆಘಾ ಅವರಿಗೆ ಕಪ್ತಾನ ಪಟ್ಟ ವಹಿಸಿದೆ. ಭರವಸೆಯ ಯುವಮುಖಗಳಿಗೆ ಮಣೆಹಾಕಿದೆ. ಭಾರತ ವಿರುದ್ಧದ 13 ಟಿ20 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಸೋತಿದ್ದ ತಂಡದ ಆಟಗಾರರಲ್ಲಿ ಬಹುತೇಕರು ಈಗ ಹೊರಗಿದ್ದಾರೆ.

ಉಭಯ ತಂಡಗಳು ‘ಎ’ ಗುಂಪಿನ ತಮ್ಮ ಮೊದಲ ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿವೆ. ಭಾರತ 9 ವಿಕೆಟ್ಗಳಿಂದ ಯುಎಇ ತಂಡವನ್ನು ಮಣಿಸಿದರೆ, ಪಾಕಿಸ್ತಾನ ತಂಡ ಶುಕ್ರವಾರ ಒಮಾನ್ ತಂಡವನ್ನು 93 ರನ್ಗಳಿಂದ ಸೋಲಿಸಿದೆ.

ಸ್ಪಿನ್ಸ್ನೇಹಿ ಶಾರ್ಜಾದ ಪಿಚ್ನಲ್ಲಿ ಪಾಕಿಸ್ತಾನ, ಭಾರತ ವಿರುದ್ಧ ಆಡಿದ ಕೊನೆಯ ಮೂರು ಟಿ20 ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿದೆ. ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

ತಂಡಗಳು ಇಂತಿವೆ...

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್

ಪಾಕಿಸ್ತಾನ: ಸಲ್ಮಾನ್ ಆಘಾ (ನಾಯಕ), ಫಖರ್ ಜಮಾನ್, ಸಾಹಿಬ್ಝಾದಾ ಫರ್ಹಾನ್, ಸಯಿಮ್ ಅಯೂಬ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಾಹೀಮ್ ಅಶ್ರಫ್, ಶಾಹಿನ್ ಅಫ್ರೀದಿ, ಸೂಫಿಯಾನ್ ಮುಖೀಮ್, ಅಬ್ರಾರ್ ಅಹ್ಮದ್
.Asia Cup | ಬಲಿಷ್ಠ ಭಾರತದೆದುರು ಪಾಕ್ಗೆ ‘ಸತ್ವಪರೀಕ್ಷೆ’.Asia Cup: ಬಾಂಗ್ಲಾ ವಿರುದ್ಧ ಶ್ರೀಲಂಕಾಕ್ಕೆ 6 ವಿಕೆಟ್ಗಳ ಜಯ.Asia Cup: ಬಾಂಗ್ಲಾಕ್ಕೆ ಲಂಕಾ ಲಗಾಮು.Asia Cup | ಭಾರತ-ಪಾಕ್ ಪಂದ್ಯ ರದ್ದುಗೊಳಿಸಿ: ಪಹಲ್ಗಾಮ್ ಸಂತ್ರಸ್ತೆ ಮನವಿ .ಯುದ್ಧ ನಿಲ್ಲಿಸುವ ಮೋದಿಗೆ ಭಾರತ-ಪಾಕ್ ಪಂದ್ಯ ನಿಲ್ಲಿಸಲಾಗುತ್ತಿಲ್ಲ: ಸಂಜಯ್ ಲೇವಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.