ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cricket | ಐಪಿಎಲ್ ಬದಲು ರಾಷ್ಟ್ರೀಯ ತಂಡ ಆಯ್ಕೆ ಮಾಡಿಕೊಂಡ ಮೂವರಿಗೆ ಬಾಂಗ್ಲಾ ‘ಪರಿಹಾರ’

Published 3 ಜುಲೈ 2023, 23:25 IST
Last Updated 3 ಜುಲೈ 2023, 23:25 IST
ಅಕ್ಷರ ಗಾತ್ರ

ಢಾಕಾ: ಈ ಋತುವಿನಲ್ಲಿ ಶ್ರೀಮಂತ ಲೀಗ್‌ ಐಪಿಎಲ್‌ ಬದಲು ರಾಷ್ಟ್ರೀಯ ತಂಡಕ್ಕೆ ಆಡಲು ಆದ್ಯತೆ ನೀಡಿದ ಕಾರಣ ಮೂವರು ಹಿರಿಯ ಆಟಗಾರರಿಗೆ ಒಟ್ಟು ₹ 53.30 ಲಕ್ಷ ಮೊತ್ತವನ್ನು  ‘ಪರಿಹಾರ’ವಾಗಿ ನೀಡಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

‘ಇದು ನಮ್ಮ ಕಡೆಯಿಂದ ಸಣ್ಣ ಕೊಡುಗೆ’ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಕ್ರಿಕೆಟ್‌ ಆಪರೇಷನ್ಸ್‌ ಮುಖ್ಯಸ್ಥ ಜಲಾಲ್‌ ಯೂನುಸ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಹಣವನ್ನು ಶಕೀಬ್‌ ಅಲ್ ಹಸನ್‌, ತಸ್ಕಿನ್‌ ಅಹ್ಮದ್ ಮತ್ತು ಲಿಟನ್ ದಾಸ್‌ ಅವರಿಗೆ ಹಂಚಲಾಗಿದೆ.

ಅವರು ನಮ್ಮಿಂದೇನೂ ಹಣವನ್ನು ಕೇಳಲಿಲ್ಲ. ಆದರೆ ಐಪಿಎಲ್‌ ತ್ಯಜಿಸಿದ್ದರಿಂದ ಆಗುವ ನಷ್ಟಕ್ಕೆ ಭಾಗಶಃ ಆದರೂ ತುಂಬಿಕೊಡಬೇಕು ಎಂದು ನಮಗೆ ಅನಿಸಿತು ಎಂದು ಸ್ವಲ್ಪವಾದರೂ  ಆದರೂ ಹಣವನ್ನು ಸರಿದೂಗಿಸಬೇಕಿತ್ತು ಜಲಾಲ್‌ ಹೇಳಿದರು. ಇದನ್ನು ಇನ್ನು ಕಡ್ಡಾಯವಾಗೇನೂ ಪಾಲಿಸುವುದಿಲ್ಲ ಎಂಬ ಮಾತನ್ನೂ ಸೇರಿಸಿದರು.

ಐಪಿಎಲ್‌ನಲ್ಲಿ ಶಕೀಬ್‌ ಅವರನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ಖರೀದಿಸಿತ್ತು. ಆದರೆ ಅವರು ಹಿಂದೆ ಸರಿದು, ಐರ್ಲೆಂಡ್‌ ವಿರುದ್ಧ ಸ್ವದೇಶದಲ್ಲಿ ಮತ್ತು ಹೊರಗೆ ನಡೆದ ಸರಣಿಯಲ್ಲಿ ಆಡಿದರು. ಈ ಸರಣಿ ಐಪಿಎಲ್‌ ವೇಳೆಯಲ್ಲೇ ಇತ್ತು. ಕೋಲ್ಕತ್ತ ತಂಡಕ್ಕೆ ಆಯ್ಕೆಯಾಗುವ ಮೂಲಕ ಮೊದಲ ಬಾರಿ ಐಪಿಎಲ್‌ ಅವಕಾಶ ಪಡೆದ ಲಿಟ್ಟನ್‌ ಒಂದು ಮಾತ್ರ ಆಡಿ ಸ್ವದೇಶಕ್ಕೆ ಮರಳಿದ್ದರು. ಢಾಕಾದಲ್ಲಿ ಏ. 4 ರಿಂದ 8ರವರೆಗೆ ಟೆಸ್ಟ್‌ ಆಡುವವರೆಗೆ) ಐಪಿಎಲ್‌ಗೆ ಆಡಲು ಅನುಮತಿ ನೀಡಿರಲಿಲ್ಲ. ಶಕೀಬ್‌ ನಾಯಕ ಮತ್ತು ದಾಸ್‌ ಉಪನಾಯಕ ಆಗಿದ್ದರು. ತಸ್ಕಿನ್‌ ಐಪಿಎಲ್‌ನಲ್ಲಿ ಖರೀದಿ ಆಗಿರಲಿಲ್ಲ. ಆದರೆ ಅವರು ರಾಷ್ಟ್ರೀಯ ತಂಡದ ಮೀಸಲು ಆಟಗಾರರಲ್ಲಿ ಒಬ್ಬರಾಗಿದ್ದರು.

ಮುಸ್ತಫಿಜುರ್ ರಹಮಾನ್ ಐಪಿಎಲ್‌ ಋತುವಿನಲ್ಲಿ ಆಡಿದ ಏಕಮಾತ್ರ ಬಾಂಗ್ಲಾ ಆಟಗಾರರಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್‌ ಪ್ರತಿನಿಧಿಸಿದ್ದರು. ಆದರೆ ಅವಕಾಶ ಸಿಕ್ಕಿದ್ದು ಎರಡು ಪಂದ್ಯಗಳಲ್ಲಿ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT