ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ 6 ಗಂಟೆಯ ಸುಮಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಮತ್ತು ಟ್ರೋಫಿಯನ್ನು ಅಭಿಮಾನಿಗಳಿಗೆ ಸಮರ್ಪಿಸುವ ಕಾರ್ಯಕ್ರಮ ಆರಂಭವಾಯಿತು. ಪ್ರೇಕ್ಷಕರ ಗ್ಯಾಲರಿಗಳು ಸಂಪೂರ್ಣ ಭರ್ತಿಯಾಗಿದ್ದವು. ಮೈದಾನ ಮಧ್ಯೆ ಭವ್ಯ ವೇದಿಕೆಯೂ ಸಿದ್ಧವಾಗಿತ್ತು. ರಘು ದೀಕ್ಷಿತ್ ಅವರ ಗಾಯನ ಕಾರ್ಯಕ್ರಮವೂ ನಡೆಯಿತು. ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಅವರು ಮಾತನಾಡಿದರು.

ಆಟಗಾರರಾದ ಮಯಂಕ್ ಅಗರವಾಲ್, ಸುಯಶ್ ಶರ್ಮಾ ಮತ್ತಿತರರು ಮೈದಾನದಲ್ಲಿ ಸುತ್ತು ಹಾಕಿ ಅಭಿಮಾನಿಗಳಿಗೆ ಕಪ್ ತೋರಿಸಿ ಸಂಭ್ರಮಿಸಿದರು. ಟಿ.ವಿ. ಮತ್ತು ಮೊಬೈಲ್ ಆ್ಯಪ್ಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ಶುರುವಾಗುತ್ತಿದ್ದಂತೆಯೇ ಕ್ರೀಡಾಂಗಣದ ಹೊರಗೆ ಜನರು ಹೆಚ್ಚಿನ ಪ್ರಮಾಣದಲ್ಲಿ ಸೇರತೊಡಗಿದ್ದರು. ಮೈದಾನದೊಳಕ್ಕೆ ಪ್ರವೇಶಿಸಲು ಶತಪ್ರಯತ್ನ ಆರಂಭಿಸಿದರು. ಆದರೆ ಸಂಜೆಯ 5 ಗಂಟೆಯ ಸುಮಾರಿಗೇ ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ ಕಾಲ್ತುಳಿತಕ್ಕೆ ಕೆಲವು ಅಭಿಮಾನಿಗಳು ಮೃತಪಟ್ಟಿದ್ದರು. ಮತ್ತಷ್ಟು ಜನರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಅದರಲ್ಲಿ ಮಕ್ಕಳು, ಯುವಕ, ಯುವತಿಯರು ಇದ್ದರು. ಆದರೂ ಅಪಾರ ಸಂಖ್ಯೆಯ ಜನರ ಆಸಕ್ತಿ ಮಾತ್ರ ಕುಂದಿರಲಿಲ್ಲ. ಮೈದಾನದೊಳ್ಳಕ್ಕೆ ಪ್ರವೇಶಿಸಲು ಶತಪ್ರಯತ್ನ ಮಾಡಿದರು.

ಆದರೆ ಕ್ರೀಡಾಂಗಣದೊಳಗಿನ ಪ್ರೇಕ್ಷಕರ ಗ್ಯಾಲರಿಯು ತುಂಬಿದ್ದರಿಂದ ಮತ್ತಷ್ಟು ಜನರನ್ನು ಒಳಬಿಡಲು ಸಾಧ್ಯವಿಲ್ಲ ಎಂದು ಮೈದಾನದ ಸಿಬ್ಬಂದಿ ಎಲ್ಲ ಗೇಟ್ಗಳನ್ನೂ ಬಂದ್ ಮಾಡಿತ್ತು. 32 ಸಾವಿರ ಜನರ ಪ್ರೇಕ್ಷಕರ ಗ್ಯಾಲರಿ ತುಂಬಿದೆ ಎಂದು ಭದ್ರತಾ ಸಿಬ್ಬಂದಿ ಹೇಳುತ್ತಲೇ ಇದ್ದರು. ಕ್ರೀಡಾಂಗಣದ ಒಳಗಡೆ ಇದ್ದಷ್ಟೇ ಜನರು ಹೊರಗಡೆಯೂ ಇದ್ದರು. ಅಷ್ಟೇ ಅಲ್ಲ. ಬೇರೆ ಬೇರೆ ದಿಕ್ಕುಗಳಿಂದ ಜನರು ಬಂದು ಸೇರುತ್ತಲೇ ಇದ್ದರು. ಮೈದಾನದ ಪ್ರವೇಶದ್ವಾರಗಳ ಬಳಿ ಗುಂಪುಗೂಡಿ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದರು.

‘ಸಂಸ್ಥೆಯ ಸದಸ್ಯರಿಗಾಗಿಯೇ ಇರುವ 10ನೇ ನಂಬರ್ ದ್ವಾರದಲ್ಲಿಯೂ ಜನಜಂಗುಳಿ ಇದೆ. ಎರಡು ತಾಸಿನಿಂದ ಬಂದು ಕಾಯುತ್ತಿದ್ದೇವೆ. ಬೇರೆ ಕಡೆ ಗೇಟ್ಗಳು ಬಂದ್ ಆಗಿರುವುದರಿಂದ ಇಲ್ಲಿಗೆ ಜನರು ಬಂದು ಸೇರುತ್ತಿದ್ದಾರೆ. ನಮ್ಮ ಐಡಿ ಕಾರ್ಡ್ಗಳಿವೆ. ನಮ್ಮನ್ನು ಒಳಬಿಡಲು ಸಿಬ್ಬಂದಿ ಸಿದ್ಧರಾಗಿದ್ದಾರೆ. ಆದರೆ ಜನಜಂಗುಳಿ ದಾಟಿ ಒಳಹೋಗುವುದು ಹೇಗೆ? ಪೊಲೀಸರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಷ್ಟೊಂದು ಅವ್ಯವಸ್ಥೆ ಆದರೆ ಹೇಗೆ’ ಎಂದು ಗೇಟ್ ಮುಂದೆ ಇದ್ದ ಕೆಎಸ್ಸಿಎಯ ಕೆಲವು ಸದಸ್ಯರು ದೂರಿದರು.

ಆರ್ಸಿಬಿ ಜೆರ್ಸಿ ತೊಟ್ಟ ಅಭಿಮಾನಿಗಳ ಗುಂಪುಗಳಲ್ಲಿದ್ದ ಕೆಲವು ಯುವಕ,ಯುವತಿಯರು ಒಂದು ಗೇಟ್ ನಿಂದ ಇನ್ನೊಂದು ಗೇಟ್ನತ್ತ ಓಡುತ್ತಿದ್ದರು. ಮುಂದಿದ್ದವರನ್ನು ತಳ್ಳಾಡುತ್ತ ಸಾಗುತ್ತಿದ್ದರು. ಇದರಿಂದಾಗಿ ವಯಸ್ಸಾದವರು, ಮಹಿಳೆಯರು ಮತ್ತು ಮಕ್ಕಳು ಘಾಸಿಗೊಂಡು ಹಿಡಿಶಾಪ ಹಾಕಿದರು. ಈ ನಡುವೆ ಕೆಲವರು 1–2 ವರ್ಷದ ಮಕ್ಕಳನ್ನು ಬಗಲಲ್ಲಿ ಎತ್ತಿಕೊಂಡು ಬಂದಿದ್ದರು. ತಮ್ಮ ಕಂದಮ್ಮಗಳನ್ನು ಗಟ್ಟಿಯಾಗಿ ಅವುಚಿಕೊಂಡು ಗುಂಪಿನಿಂದ ಹೊರಬರಲು ಹರಸಾಹಸಪಟ್ಟರು.

ಮಹಾತ್ಮಾ ಗಾಂಧಿ ರಸ್ತೆ, ಕ್ವಿನ್ಸ್ ರಸ್ತೆ, ಕಬ್ಬನ್ ರಸ್ತೆ ಮತ್ತು ಮ್ಯೂಸಿಯಮ್ ರಸ್ತೆಗಳಲ್ಲಿ ಜನಜಂಗುಳಿಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಚಪ್ಪಲಿಗಳ ರಾಶಿ..

ಮೈದಾನದ ಸುತ್ತ ಕೆಲವು ಪ್ರದೇಶಗಳಲ್ಲಿ ಚಪ್ಪಲಿ, ಬಟ್ಟೆಗಳ ರಾಶಿಗಳು ಬಿದ್ದಿದ್ದವು. ಬೇರೆ ಬೇರೆ ಗೇಟುಗಳ ಮೂಲಕ ಪ್ರವೇಶಿಸಲು ಯತ್ನಿಸಿದ ಜನರನ್ನು ಚದುರಿಸಲು ಲಘು ಲಾಠಿ ಪ್ರಯೋಗಿಸಿದಾಗ ಹಲವು ತಮ್ಮ ಕಾಲುಗಳಿದ್ದ ಚಪ್ಪಲಿಗಳನ್ನು ಬಿಟ್ಟು ಓಡಿ ಹೋದರು.

ಜನಜಂಗುಳಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕೆಲವರ ಜೆರ್ಸಿಗಳು ಹರಿದುಬಿದ್ದವು. ಈ ಸಂದರ್ಭದಲ್ಲಿ ಕೆಲವರು ತಮ್ಮ ಬ್ಯಾಗು, ಪರ್ಸು ಮತ್ತು ಮೊಬೈಲ್ಗಳನ್ನೂ ಕಳೆದುಕೊಂಡು ಕಣ್ಣೀರು ಹಾಕಿದ ದೃಶ್ಯಗಳೂ ಕಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.