ಮಂಗಳವಾರ, ಅಕ್ಟೋಬರ್ 19, 2021
23 °C

IPL 2021: ಗೇಲ್‌ನಿಂದ ಗಾಯಕವಾಡ್ ವರೆಗೆ: ಇಲ್ಲಿದೆ ಐಪಿಎಲ್ ಶತಕ ವೀರರ ಪಟ್ಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ ಚೊಚ್ಚಲ ಶತಕ ಸಾಧನೆ ಮಾಡಿದ್ದಾರೆ.

ಈ ಮೂಲಕ ಐಪಿಎಲ್‌ನಲ್ಲಿ ಶತಕ ಸಾಧನೆ ಮಾಡಿದ 39ನೇ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಅಂದ ಹಾಗೆ ಈ ಪಟ್ಟಿಯನ್ನು ವೆಸ್ಟ್‌ಇಂಡೀಸ್ ದೈತ್ಯ ಕ್ರಿಸ್ ಗೇಲ್ ಮುನ್ನಡೆಸುತ್ತಿದ್ದು, ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಆರು ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ: 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಐದು ಮತ್ತು ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್ ತಲಾ ನಾಲ್ಕು ಶತಕ ಗಳಿಸಿದ್ದಾರೆ.

 

 

 

ಐಪಿಎಲ್‌ನಲ್ಲಿ ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಂತಿದೆ:

 

1. ಕ್ರಿಸ್ ಗೇಲ್ (6)
2. ವಿರಾಟ್ ಕೊಹ್ಲಿ (5)
3. ಡೇವಿಡ್ ವಾರ್ನರ್ (4)
4. ಶೇನ್ ವಾಟ್ಸನ್ (4)
5. ಎಬಿ ಡಿ ವಿಲಿಯರ್ಸ್ (3)
6. ಸಂಜು ಸ್ಯಾಮ್ಸನ್ (3)
7. ಶಿಖರ್ ಧವನ್ (2)
8. ಅಜಿಂಕ್ಯ ರಹಾನೆ (2)
9. ಕೆ.ಎಲ್. ರಾಹುಲ್ (2)
10. ಬ್ರೆಂಡನ್ ಮೆಕಲಮ್ (2)
11. ವೀರೇಂದ್ರ ಸೆಹ್ವಾಗ್ (2)
12. ಮುರಳಿ ವಿಜಯ್ (2)
13. ಆ್ಯಡಂ ಗಿಲ್‌ಕ್ರಿಸ್ಟ್ (2)
14. ಬೆನ್ ಸ್ಟೋಕ್ಸ್ (2)
15. ಹಾಶೀಮ್ ಆಮ್ಲಾ (2)
16. ರೋಹಿತ್ ಶರ್ಮಾ (1)
17. ಸುರೇಶ್ ರೈನಾ (1)
18. ಅಂಬಟಿ ರಾಯುಡು (1)
19. ಮನೀಶ್ ಪಾಂಡೆ (1)
20. ಯೂಸುಫ್ ಪಠಾಣ್ (1)
21. ಸ್ಟೀವ್ ಸ್ಮಿತ್ (1)
22. ಶಾನ್ ಮಾರ್ಶ್ (1)
23. ರಿಷಭ್ ಪಂತ್ (1)
24. ಸಚಿನ್ ತೆಂಡೂಲ್ಕರ್ (1)
25. ಕ್ವಿಂಟನ್ ಡಿ ಕಾಕ್ (1)
26. ವೃದ್ದಿಮಾನ್ ಸಹಾ (1)
27. ಮಯಂಕ್ ಅಗರವಾಲ್ (1)
28. ಮೈಕಲ್ ಹಸ್ಸಿ (1)
29. ಜೋಸ್ ಬಟ್ಲರ್ (1)
30. ಡೇವಿಡ್ ಮಿಲ್ಲರ್ (1)
31. ಮಹೇಲಾ ಜಯವರ್ಧನೆ (1)
32. ಲಿಂಡಲ್ ಸಿಮನ್ಸ್ (1)
33. ಜಾನ್ ಬೆಸ್ಟೊ (1)
34. ಕೆವಿನ್ ಪೀಟರ್‌ಸನ್ (1)
35. ಆಂಡ್ರ್ಯೂ ಸೈಮಂಡ್ಸ್ (1)
36. ದೇವದತ್ತ ಪಡಿಕ್ಕಲ್ (1)
37. ಸನತ್ ಜಯಸೂರ್ಯ (1)
38. ಪಾಲ್ ವಾಲ್ತಾಟಿ (1)
39. ಋತುರಾಜ್ ಗಾಯಕವಾಡ್ (1)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು