ಮ್ಯಾಂಚೆಸ್ಟರ್: ಶನಿವಾರ ಸ್ಟುವರ್ಟ್ ಬ್ರಾಡ್ (62; 45ಎಸೆತ, 9ಬೌಂಡರಿ, 1ಸಿ) ಬ್ಯಾಟಿಂಗ್ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಬಳಗವು ನಿಬ್ಬೆರಗಾಯಿತು.

ಇದರಿಂದಾಗಿ ಆತಿಥೇಯ ಇಂಗ್ಲೆಂಡ್ ತಂಡವು ಇಲ್ಲಿ ನಡೆ ಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನವೇ ಪಂದ್ಯದ ಮೇಲೆ ಹಿಡಿತ ಸಾಧಿಸುವಂತಾಯಿತು. ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ 111.5 ಓವರ್ಗಳಲ್ಲಿ 369 ಗಳಿಸಿದ್ದು ಅದಕ್ಕೆ ಕಾರಣ. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಬಳಗ ಎಡವಿತು. 32 ಓವರ್ಗಳು ಮುಗಿದಾಗ 65 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿತು.

ಶುಕ್ರವಾರ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ವಿಂಡೀಸ್ ತಂಡವು ಇಂಗ್ಲೆಂಡ್ಗೆ ಆರಂಭಿಕ ಆಘಾತ ನೀಡಿತ್ತು. ಆದರೆ ತಂಡವು ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡ ಸಂದರ್ಭದಲ್ಲಿ ಜೊತೆಗೂಡಿದ್ದ ಒಲಿ ಪೋಪ್ (91 ರನ್) ಮತ್ತು ಜೋಸ್ ಬಟ್ಲರ್ (67; 142ಎ) 5ನೇ ವಿಕೆಟ್ಗೆ 140 ರನ್ ಕಲೆಹಾಕಿದರು.

ಎರಡನೇ ದಿನ ಬೆಳಿಗ್ಗೆ ಪೋಪ್ ಅವರಿಗೆ ಶತಕ ಪೂರೈಸುವ ಅವಕಾಶ ವನ್ನು ಶಾನನ್ ಗ್ಯಾಬ್ರಿಯಲ್ ನೀಡಲಿಲ್ಲ. ಬಟ್ಲರ್ಗೂ ಗ್ಯಾಬ್ರಿಯಲ್ ಅವರೇ ಪೆವಿಲಿಯನ್ ದಾರಿ ತೋರಿಸಿದರು. ಕೇಮರ್ ರೋಚ್ ಅವರು ಕ್ರಿಸ್ ವೋಕ್ಸ್ ಮತ್ತು ಜೋಫ್ರಾ ಆರ್ಚರ್ ವಿಕೆಟ್ಗಳನ್ನು ಗಳಿಸಿದರು. ವೋಕ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಗಳಿಸಿದ ಸಾಧನೆ ಮಾಡಿದರು.

ಆದರೆ ವಿಂಡೀಸ್ ಓಟಕ್ಕೆ ಬ್ರಾಡ್ ತಡೆಯೊಡ್ಡಿದರು. ಟ್ವೆಂಟಿ–20 ಶೈಲಿಯಲ್ಲಿ ಬ್ಯಾಟ್ ಬೀಸಿದ ಅವರ ಆಟಕ್ಕೆ ಸ್ಕೋರ್ಬೋರ್ಡ್ನಲ್ಲಿ ಮೊತ್ತವು ಏರುಗತಿಯಲ್ಲಿ ಸಾಗಿತು. ಅವರು 9ನೇ ವಿಕೆಟ್ ಜೊತೆಯಾಟದಲ್ಲಿ ಜೇಮ್ಸ್ ಆ್ಯಂಡರ್ಸನ್ ಜೊತೆಗೆ 76 ರನ್ ಗಳಿಸಿದರು.

ನಂತರ ಬೌಲಿಂಗ್ನಲ್ಲಿಯೂ ಮಿಂಚಿದರು. ಆ್ಯಂಡರ್ಸನ್ ಎರಡು ವಿಕೆಟ್ ಪಡೆದು ವಿಂಡೀಸ್ಗೆ ಆಘಾತ ನೀಡಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 111.5 ಓವರ್ಗಳಲ್ಲಿ 369 (ಓಲಿ ಪೋಪ್ 91, ಜೋಸ್ ಬಟ್ಲರ್ 67, ಸ್ಟುವರ್ಟ್ ಬ್ರಾಡ್ 62, ಕೆಮರ್ ರೋಚ್ 72ಕ್ಕೆ4, ಶಾನನ್ ಗ್ಯಾಬ್ರಿಯಲ್ 77ಕ್ಕೆ2, ರಾಸ್ಟನ್ ಚೇಸ್ 36ಕ್ಕೆ2) ವೆಸ್ಟ್ ಇಂಡೀಸ್: 32 ಓವರ್ಗಳಲ್ಲಿ 4ಕ್ಕೆ65 (ಜಾನ್ ಕ್ಯಾಂಪ್ಬೆಲ್ 32, ಶಾಯ್ ಹೋಪ್ 17, ಜೇಮ್ಸ್ ಆ್ಯಂಡರ್ಸನ್ 17ಕ್ಕೆ2) ವಿವರ ಅಪೂರ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.