ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs BAN Pink Test | ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಇನಿಂಗ್ಸ್‌ ಗೆಲುವು

Last Updated 24 ನವೆಂಬರ್ 2019, 9:08 IST
ಅಕ್ಷರ ಗಾತ್ರ

ಕೋಲ್ಕತ್ತಾ: ಈಡನ್‌ ಗಾರ್ಡನ್‌ನಲ್ಲಿ ಭಾರತ ಮತ್ತು ಬಾಂಗ್ಲಾ ನಡುವೆ ನಡೆದ ಪಿಂಕ್‌ ಬಾಲ್‌– ಹಗಲು ರಾತ್ರಿ ಪಂದ್ಯದಲ್ಲಿ ಉಮೇಶ್‌ ಜಾದವ್‌ ಮತ್ತು ಇಶಾಂತ್‌ ಶರ್ಮಾ ಅವರ ಮಾರಕ ದಾಳಿಗೆ ಬಾಂಗ್ಲಾ ತಂಡ ನಲುಗಿದೆ. ಟೀಂ ಇಂಡಿಯಾಕ್ಕೆ ಇನ್ನಿಂಗ್ಸ್‌ ಮತ್ತು 46 ರನ್‌ಗಳ ಜಯ ದಾಖಲಾಗಿದೆ.

ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು ಭಾರತ 2–0 ಅಂತರದಲ್ಲಿ ಗೆದ್ದು ಬೀಗಿತು. ಈ ಜಯದ ಮೂಲಕ ಸತತ ನಾಲ್ಕು ಇನಿಂಗ್ಸ್‌ ಗೆಲುವು ದಾಖಲಿಸಿದ ತಂಡ ಎಂಬ ಕೀರ್ತಿಗೂ ಪಾತ್ರವಾಯಿತು.

ಬಾಂಗ್ಲಾದೇಶ ತನ್ನ ಮೊದಲ ಇನಿಂಗ್ಸ್‌ನಲ್ಲಿ 106 ರನ್‌ಗಳಿಗೆ ಆಲೌಟ್‌ ಆಗಿತ್ತು. ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 347ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಇದನ್ನು ಬೆನ್ನುಹತ್ತಿದ ಬಾಂಗ್ಲಾ 195ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ ಶರಣಾಗಿದೆ.

ಆ ಮೂಲಕ ಐದು ದಿನಗಳ ಟೆಸ್ಟ್‌ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ.

ಈ ಪಂದ್ಯದಲ್ಲಿ ಗಮನ ಸೆಳೆದಿದ್ದು ಭಾರತದ ಬೌಲರ್‌ಗಳು. ಎರಡನೇ ಇನಿಂಗ್ಸ್‌ನಲ್ಲಿ ಉಮೇಶ್‌ ಯಾದವ್‌ 5 ವಿಕೆಟ್‌ ಪಡೆದರೆ, ಇಶಾಂತ್‌ ಶರ್ಮಾ 4 ವಿಕೆಟ್‌ ಕಿತ್ತರು.

ಈ ಪಂದ್ಯದ ಮತ್ತೊಂದು ವಿಶೇಷವೆಂದರೆ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅವರು ಶತಕ ದಾಖಲಿಸುವ ಮೂಲಕ ಈ ಹಿಂದಿನ ಹಲವು ದಾಖಲೆಗಳನ್ನು ಮುರಿದಿದ್ದರು.

ಆಟಗಾರರಿಗೆ ಅಭಿನಂದನೆ

ಇದೇ ವೇಳೆ ಈಡನ್‌ ಗಾರ್ಡನ್ಸ್‌ಗೆ ಆಗಮಿಸಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತ ಹಾಗೂ ಬಾಂಗ್ಲಾ ದೇಶದ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT