ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಸ್‌ಕೆ ಯಶಸ್ಸಿಗೆ ಧೋನಿ ಸ್ವಭಾವ ಕಾರಣ: ದ್ರಾವಿಡ್

Last Updated 2 ಆಗಸ್ಟ್ 2020, 13:23 IST
ಅಕ್ಷರ ಗಾತ್ರ

ನವದೆಹಲಿ: ಕ್ರೀಡಾಂಗಣದಾಚೆ ಮಹೇಂದ್ರಸಿಂಗ್ ಧೋನಿಯ ಪೂರ್ವಾಭ್ಯಾಸ, ನಡವಳಿಕೆ ಮತ್ತು ಆಟದ ಕುರಿತ ಯೋಜನೆ ರೂಪಿಸುವ ಪರಿಯಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್‌ ಯಶಸ್ಸಿನ ಹಾದಿಯಲ್ಲಿದೆ ಎಂದು ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ.

’ಸಿಎಸ್‌ಕೆ ಬಳಗದ ತೆರೆಮರೆಯಲ್ಲಿರುವ ನೆರವು ಸಿಬ್ಬಂದಿಯು ಚಾಣಾಕ್ಷವಾಗಿದೆ. ಅವರು ಸಂಗ್ರಹಿಸುವ ದತ್ತಾಂಶ ಮತ್ತು ಜನಸಂಪರ್ಕವು ಉತ್ತಮವಾಗಿದೆ. ಆಟಗಾರರೊಂದಿಗೆ ಈ ಸಿಬ್ಬಂದಿಯು ನಿರಂತರ ಸಂಪರ್ಕದಲ್ಲಿರುತ್ತದೆ. ಜೂನಿಯರ್ ಹಂತದ ತಂಡಗಳನ್ನು ನಿರ್ವಹಿಸುವ ಅನುಭವ ಈ ತಂಡಗಳಿಗೆ ಇದೆ‘ ಎಂದು ರಾಹುಲ್ ಹೇಳಿದ್ದಾರೆ.

’ಧೋನಿ ಅವರ ವೃತ್ತಿಪರತೆ ಎಂದಿಗೂ ಬದಲಾಗಿಲ್ಲ. ಅವರು ಮಾಹಿತಿಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿ ಅನುಷ್ಠಾನ ಮಾಡುವಲ್ಲಿ ಅವರು ಮತ್ತು ನೆರವು ತಂಡದ ಪಾತ್ರ ಪ್ರಮುಖವಾಗಿದೆ‘ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವೆಬಿನಾರ್‌ನಲ್ಲಿ ಹೇಳಿದ್ದಾರೆ.

ದ್ರಾವಿಡ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಸಿಎಸ್‌ಕೆ ಸಹಮಾಲೀಕ ಎನ್. ಶ್ರೀನಿವಾಸನ್, ’ಮಾಹಿತಿಗಳ ರಾಶಿಯೇ ನಮ್ಮಲಿದೆ. ಉದಾಹರಣೆಗೆ ಟಿ20 ಪಂದ್ಯದಲ್ಲಿ ಆಡುವ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ ವಿಡಿಯೊಗಳು ಇರುತ್ತವೆ. ಆ ಬ್ಯಾಟ್ಸ್‌ಮನ್‌ಗಳ ಲೋಪದೋಷಗಳನ್ನು ಗುರುತಿಸುತ್ತಾರೆ. ನಿರಂತರವಾಗಿ ನೋಡಿ ಅಧ್ಯಯನ ಮಾಡಿ ಬೌಲರ್‌ಗಳಿಗೂ ತೋರಿಸಿ ಮಾಹಿತಿ ನೀಡುವ ಕಾರ್ಯವನ್ನು ಕೋಚ್‌ಗಳು ಮಾಡುತ್ತಾರೆ‘ ಎಂದರು.

’ಇಂತಹ ಕಾರ್ಯದಲ್ಲಿ ಧೋನಿ ನೇರವಾಗಿ ಭಾಗಿಯಾಗುವುದಿಲ್ಲ. ಇದರಲ್ಲಿ ಬೌಲಿಂಗ್ ಕೋಚ್, ಮುಖ್ಯ ಕೋಚ್ (ಫ್ಲೆಮಿಂಗ್) ಇರುತ್ತಾರೆ. ಉಳಿದವರು ಇರುತ್ತಾರೆ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ನೀಡುತ್ತಾರೆ. ಆದರೆ ಧೋನಿ ಏನೂ ಮಾತನಾಡುವುದಿಲ್ಲ‘ ಎಂದು ವಿವರಿಸಿದರು.

’ಅವರ ಸ್ವಭಾವವೇ ಹಾಗೆ. ಪಂದ್ಯ ನಡೆಯುವ ಕಣದಲ್ಲಿಯೇ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನೋಡಿ ತಂತ್ರಗಳ ಕುರಿತು ನಿರ್ಣಯಿಸುವ ಆತ್ಮವಿಶ್ವಾಸ ಧೋನಿಗೆ ಇದೆ. ಲಭ್ಯವಿರುವಾ ಅಪಾರ ಪ್ರಮಾಣದ ಮಾಹಿತಿ, ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಕೂಡ ಕಷ್ಟಸಾಧ್ಯ‘ ಎಂದರು.

’ಹಿಂದೊಮ್ಮೆ ನಾನು ಒಬ್ಬ ಶ್ರೇಷ್ಠ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೇಳಿದ್ದೆ. ಆದರೆ, ಧೋನಿ ಖಡಾಖಂಡಿತವಾಗಿ ನಿರಾಕರಿಸಿದ್ದರು. ಆ ವ್ಯಕ್ತಿಯು ತಂಡದ ಒಗ್ಗಟ್ಟು ಮತ್ತು ವಾತಾವರಣವನ್ನು ಕೆಡಿಸುತ್ತಾನೆ. ಆದ್ದರಿಂದ ಬೇಡ ಅಂದಿದ್ದರು. ಅಲ್ಲದೇ ಅಮೆರಿಕದಲ್ಲಿ ನೋಡಿ ಫ್ರ್ಯಾಂಚೈಸ್‌ ಲೀಗ್‌ಗಳು ಎಷ್ಟ ಕಾಲದಿಂದ ನಡೆಯುತ್ತಿವೆ. ಅದಕ್ಕೆ ಕಾರಣ ತಂಡದೊಳಗಿರುವ ಸಾಮರಸ್ಯವೆಂದು ಹೇಳಿದ್ದರು‘ ಎಂದು ಶ್ರಿನಿವಾಸನ್ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT