ಸೋಮವಾರ, ಮೇ 23, 2022
22 °C

ICC T20I Rankings: 5ನೇ ಸ್ಥಾನ ಕಾಯ್ದುಕೊಂಡ ರಾಹುಲ್; ಕೊಹ್ಲಿ ಕುಸಿತ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಬಿಡುಗಡೆ ಮಾಡಿರುವ ಟ್ವೆಂಟಿ-20 ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಬಲಗೈ ಬ್ಯಾಟರ್ ಕೆ.ಎಲ್. ರಾಹುಲ್ ಐದನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಈ ನಡುವೆ ವಿರಾಟ್ ಕೊಹ್ಲಿ, ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ.

ಈ ವಿಭಾಗವನ್ನು ಪಾಕಿಸ್ತಾನದ ಬಾಬರ್ ಆಜಂ ಮುನ್ನಡೆಸುತ್ತಿದ್ದು, ಇಂಗ್ಲೆಂಡ್‌ನ ಡೇವಿಡ್ ಮಲಾನ್ ಹಾಗೂ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕರಮ್ ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

ಆಸ್ಟ್ರೇಲಿಯಾದ ನಾಯಕ ಆ್ಯರನ್ ಫಿಂಚ್ ನಾಲ್ಕನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್-12 ಹಂತದ ಕೊನೆಯ ಮೂರು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವುದು ರಾಹುಲ್‌ಗೆ ನೆರವಾಗಿದೆ. ಇನ್ನೊಂದೆಡೆ ವಿರಾಟ್ ಕೊಹ್ಲಿ ಪರಿಣಾಮಕಾರಿ ಎನಿಸಿಕೊಳ್ಳುವಲ್ಲಿ ವಿಫಲರಾಗಿದ್ದರು.

ಐಸಿಸಿ ಟ್ವೆಂಟಿ-20 ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿ ಇಂತಿದೆ:

1. ಬಾಬರ್ ಆಜಂ, ಪಾಕಿಸ್ತಾನ (839)
2. ಡೇವಿಡ್ ಮಲಾನ್, ಇಂಗ್ಲೆಂಡ್ (800)
3. ಏಡೆನ್ ಮಾರ್ಕರಮ್, ದ.ಆಫ್ರಿಕಾ (796)
4. ಆ್ಯರನ್ ಫಿಂಚ್, ಆಸ್ಟ್ರೇಲಿಯಾ (732)
5. ಕೆ.ಎಲ್. ರಾಹುಲ್, ಭಾರತ (727)
6. ಮೊಹಮ್ಮದ್ ರಿಜ್ವಾನ್, ಪಾಕಿಸ್ತಾನ (718)
7. ಡೆವೊನ್ ಕಾನ್ವೆ, ನ್ಯೂಜಿಲೆಂಡ್ (700)
8. ವಿರಾಟ್ ಕೊಹ್ಲಿ, ಭಾರತ (698)
9. ಜೋಸ್ ಬಟ್ಲರ್, ಇಂಗ್ಲೆಂಡ್ (674)
10. ರಸ್ಸಿ ವ್ಯಾನ್ ಡೆರ್‌ ಡುಸೆನ್‌, ದ.ಆಫ್ರಿಕಾ (669)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು