ಪರ್ತ್: ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಲು ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಈ ಕುರಿತು ಮಾತನಾಡಿರುವ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್, ಉಪಖಂಡದಲ್ಲಿ ಆಡುವಾಗ ಎದುರಾಳಿಗಳಿಗಳಿಗೆ ತಮ್ಮ ಸಾಮರ್ಥ್ಯದ ಮೇಲೆಯೇ ಅನುಮಾನ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನಾವು ಉಪಖಂಡದಲ್ಲಿ ಆಡುತ್ತಿರುವಾಗ ನಮ್ಮ ಸಾಮರ್ಥ್ಯದ ಮೇಲೆಯೇ ಅನುಮಾನಗಳು ಮೂಡಲಾರಂಭಿಸುತ್ತದೆ. ಯಾಕೆಂದರೆ, ಅವರು ಅಲ್ಲಿ ಪ್ರಭುತ್ವ ಸಾಧಿಸುತ್ತಾರೆ. ಅದು ಭಾರತ ಅಥವಾ ಪಾಕಿಸ್ತಾನ ಇಲ್ಲವೇ ಶ್ರೀಲಂಕಾ ತಂಡವೇ ಅಗಿರಲಿ. ಅವರು ನಿಮ್ಮಲ್ಲಿ ಅನುಮಾನಗಳನ್ನು ಸೃಷ್ಟಿಸುವಂತೆ ಆಡಬಲ್ಲರು’ ಎಂದು ಕ್ರೀಡಾ ವೆಬ್ಸೈಟ್ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಅದನ್ನು ಮನಗಂಡು ಭಾರತವನ್ನು ಮಣಿಸಲು ಸಾಧ್ಯವಾಗುವಂತಹಉತ್ತಮ ಯೋಜನೆಯನ್ನು ರೂಪಿಸುತ್ತೇವೆ. ಅದು ನಮಗೆ ಆತ್ಮ ವಿಶ್ವಾಸ ಮೂಡಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಯುವ ಆಟಗಾರ ಮಾರ್ನಸ್ ಲಾಬುಶೇನ್ಗೆ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿದೆ. ‘ಮಾರ್ನಸ್ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲರು. ಅದು ಭಾರತ ಸರಣಿಯಲ್ಲಿ ನೆರವಾಗಲಿದೆ. ಹೀಗಾಗಿ ಅವರು ಏಕದಿನ ಸರಣಿಯಲ್ಲೂ ಮಿಂಚಲಿದ್ದಾರೆ’ ಎಂದು ಫಿಂಚ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರವಾಸ ಕೈಗೊಳ್ಳುತ್ತಿರುವ ಏಕದಿನ ತಂಡದಲ್ಲಿ ಆಸಿಸ್ ಸಾಕಷ್ಟು ಬದಲಾವಣೆ ಮಾಡಿದೆ. ಅನುಭವಿಗಳಾದ ಗ್ಲೇನ್ ಮ್ಯಾಕ್ಸ್ವೆಲ್, ಶಾನ್ ಮಾರ್ಷ್, ನಾಥನ್ ಲಯನ್, ಉಸ್ಮಾನ್ ಖ್ವಾಜಾ ಅವರನ್ನು ಕೈಬಿಟ್ಟು ಯುವ ಪಡೆಯನ್ನು ಆಯ್ಕೆ ಮಾಡಿದೆ.

ಮುಖ್ಯ ಕೋಚ್ ಜಸ್ಟೀನ್ ಲ್ಯಾಂಗರ್ ಸರಣಿಯಿಂದ ಹಿಂದೆ ಸರಿದಿದ್ದು, ಸಹಾಯಕ ಕೋಚ್ ಆ್ಯಂಡ್ರೋ ಮೆಕ್ ಡೊನಾಲ್ಡ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಸರಣಿಯ ಮೊದಲ ಪಂದ್ಯ ಇದೇ 14ರಂದು ಮುಂಬೈನಲ್ಲಿ ಆರಂಭವಾಗಲಿದೆ. ಎರಡನೇ ಪಂದ್ಯ ಜ.17ರಂದು ರಾಜ್ಕೋಟ್ನಲ್ಲಿ ಮತ್ತು ಮೂರನೇ ಪಂದ್ಯ ಜ.19 ರಂದು ಬೆಂಗಳೂರಿನಲ್ಲಿ ನಡೆಯಲಿದೆ.ಕಳೆದ ವರ್ಷ ಭಾರತದಲ್ಲಿಯೇ ನಡೆದಿದ್ದ ಐದು ಪಂದ್ಯಗಳ ಸರಣಿಯನ್ನು ಆಸಿಸ್ 3–2ರಿಂದ ಗೆದ್ದುಕೊಂಡಿತ್ತು.

ತಂಡ ಹೀಗಿದೆ
ಆ್ಯರನ್ ಫಿಂಚ್ (ನಾಯಕ),ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್,ಮಾರ್ನಸ್ ಲಾಬುಶೇನ್, ಪ್ಯಾಟ್ ಕಮಿನ್ಸ್ (ಉಪನಾಯಕ), ಆಷ್ಟನ್ ಟರ್ನರ್, ಅಲೆಕ್ಸ್ ಕಾರಿ (ವಿಕೆಟ್ಕೀಪರ್), ಪೀಟರ್ ಹ್ಯಾಂಡ್ಸ್ಕಂಬ್, ಜೋಸ್ ಹ್ಯಾಜಲ್ವುಡ್, ಕೇನ್ ರಿಚರ್ಡ್ಸನ್, ಮಿಚೇಲ್ ಸ್ಟಾರ್ಕ್, ಆ್ಯಡಂ ಜಂಪಾ,ಸೀನ್ ಅಬೋಟ್, ಆಸ್ಟನ್ ಅಗರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.