IND vs NZ T20: ಅರ್ಶದೀಪ್, ಸಿರಾಜ್ ಉತ್ತಮ ಬೌಲಿಂಗ್; 160 ರನ್ಗೆ ಕಿವೀಸ್ ಆಲೌಟ್

ನೇಪಿಯರ್: ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 19.4 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 160 ರನ್ ಕಲೆಹಾಕಿದೆ.
ಇಲ್ಲಿನ ಮೆಕ್ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಟಿಮ್ ಸೌಥಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಡೆವೋನ್ ಕಾನ್ವೆ ಜೊತೆ ಬ್ಯಾಟಿಂಗ್ಗೆ ಬಂದ ಫಿನ್ ಅಲೆನ್ ಕೇವಲ 3 ರನ್ ಗಳಿಸಿ ಔಟಾದರು. ಬಳಿಕ ಬಂದ ಮಾರ್ಕ್ ಚಾಪ್ಮನ್ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಈ ಹಂತದಲ್ಲಿ ಜೊತೆಯಾದ ಕಾನ್ವೆ ಹಾಗೂ ಗ್ಲೆನ್ ಫಿಲಿಪ್ಸ್ 3ನೇ ವಿಕೆಟ್ ಪಾಲುದಾರಿಕೆಯಲ್ಲಿ 86 ರನ್ ಕಲೆಹಾಕಿದರು. ಕಾನ್ವೆ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 59 ರನ್ ಕಲೆಹಾಕಿದರೆ, ಬೀಸಾಟವಾಡಿದ ಫಿಲಿಪ್ಸ್ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 53 ರನ್ ಸಿಡಿಸಿದರು. 16.4 ಓವರ್ ಆಗುವಷ್ಟರಲ್ಲಿ ಈ ಇಬ್ಬರೂ ಔಟಾದರು. ಆಗ ತಂಡದ ಮೊತ್ತ 4 ವಿಕೆಟ್ಗೆ 146 ರನ್ ಆಗಿತ್ತು.
ಇದಾದ ಬಳಿಕ ಕಿವೀಸ್ ಕುಸಿತದ ಹಾದಿ ಹಿಡಿಯಿತು. ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಅರ್ಶದೀಪ್ ಸಿಂಗ್ ಈ ಹಂತದಲ್ಲಿ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಹೀಗಾಗಿ, ಆತಿಥೇಯ ತಂಡದ ಕೊನೇ 6 ವಿಕೆಟ್ಗಳು ಕೇವಲ 14 ರನ್ ಅಂತರದಲ್ಲಿ ಪತನಗೊಂಡವು.
ಅರ್ಶದೀಪ್ 4 ಓವರ್ಗಳಲ್ಲಿ 37 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಸಿರಾಜ್ 17 ರನ್ ನೀಡಿ 4 ವಿಕೆಟ್ ಕಬಳಿಸಿದರು. ಹರ್ಷಲ್ ಪಟೇಲ್ ಒಂದು ವಿಕೆಟ್ ಪಡೆದರು.
Innings Break!
A superb show with the ball from #TeamIndia! 💪 💪
4⃣ wickets each for Mohammed Siraj & Arshdeep Singh
1⃣ wicket for Harshal PatelOver to our batters now! 👍 👍
Scorecard ▶️ https://t.co/UtR64C00Rs #TeamIndia | #NZvIND pic.twitter.com/g59Uz7h2eh
— BCCI (@BCCI) November 22, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.