ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gill 200: ಏಕದಿನದಲ್ಲಿ ದ್ವಿಶತಕ ಗಳಿಸಿದ ಆಟಗಾರರ ಪಟ್ಟಿ

Last Updated 18 ಜನವರಿ 2023, 14:09 IST
ಅಕ್ಷರ ಗಾತ್ರ

ಹೈದರಾಬಾದ್: ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಸಾಧನೆ ಮಾಡಿದ್ದಾರೆ.

ಹೈದರಾಬಾದ್‌ನಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ದ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಗಿಲ್ ಅಮೋಘ ದ್ವಿಶತಕ ಗಳಿಸಿದರು.

5ನೇ ಭಾರತೀಯ...
ಶುಭಮನ್ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಭಾರತದ ಐದನೇ ಬ್ಯಾಟರ್ ಎನಿಸಿದ್ದಾರೆ.

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮೊತ್ತ ಮೊದಲ ದ್ವಿಶತಕ ಗಳಿಸಿದ ಕೀರ್ತಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಾಧನೆ ಮಾಡಿದ್ದರು.

ಟೀಮ್ ಇಂಡಿಯಾದ ಈಗಿನ ನಾಯಕ ರೋಹಿತ್ ಶರ್ಮಾ, ಏಕದಿನದಲ್ಲಿ ಅತಿ ಹೆಚ್ಚು ಅಂದರೆ ಮೂರು ಬಾರಿ ದ್ವಿಶತಕ ಗಳಿಸಿದ್ದಾರೆ.

ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ದ್ವಿಶತಕ ಸಾಧನೆ...
ಗಿಲ್ ದ್ವಿಶತಕ 145 ಎಸೆತಗಳಲ್ಲಿ ದಾಖಲಾಯಿತು. 48ನೇ ಓವರ್‌ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸುವ ಮೂಲಕ 200ರ ಗಡಿ ದಾಟಿದರು. 149 ಎಸೆತಗಳನ್ನು ಎದುರಿಸಿದ ಗಿಲ್ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಹಾಗೂ ಒಂಬತ್ತು ಸಿಕ್ಸರ್‌ಗಳು ಸೇರಿದ್ದವು.

1,000 ರನ್ ಮೈಲಿಗಲ್ಲು...
ಏಕದಿನ ಕ್ರಿಕೆಟ್‌ನಲ್ಲಿ ವೇಗದಲ್ಲಿ ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟರ್ (19 ಇನ್ನಿಂಗ್ಸ್) ಎಂಬ ಹೆಗ್ಗಳಿಕೆಗೂ ಗಿಲ್ ಭಾಜನರಾದರು.

ಏಕದಿನದಲ್ಲಿ ದ್ವಿಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿ ಇಂತಿದೆ:
1.ರೋಹಿತ್ ಶರ್ಮಾ: 264 (ಶ್ರೀಲಂಕಾ ವಿರುದ್ಧ, 2014)
2. ಮಾರ್ಟಿನ್ ಗಪ್ಟಿಲ್: 237* (ವೆಸ್ಟ್‌ಇಂಡೀಸ್ ವಿರುದ್ಧ, 2015)
3. ವೀರೇಂದ್ರ ಸೆಹ್ವಾಗ್: 219 (ವೆಸ್ಟ್‌ಇಂಡೀಸ್ ವಿರುದ್ಧ, 2011)
4. ಕ್ರಿಸ್ ಗೇಲ್: 215 (ಜಿಂಬಾಬ್ವೆ ವಿರುದ್ಧ, 2015)
5. ಫಖರ್ ಜಮಾನ್: 210* (ಜಿಂಬಾಬ್ವೆ ವಿರುದ್ಧ, 2018)
6. ಇಶಾನ್ ಕಿಶನ್: 210 (ಬಾಂಗ್ಲಾದೇಶ ವಿರುದ್ಧ, 2022)
7. ರೋಹಿತ್ ಶರ್ಮಾ: 209 (ಆಸ್ಟ್ರೇಲಿಯಾ ವಿರುದ್ಧ, 2013)
8. ರೋಹಿತ್ ಶರ್ಮಾ: 208* (ಶ್ರೀಲಂಕಾ ವಿರುದ್ಧ, 2017)
9. ಶುಭಮನ್ ಗಿಲ್: 208 (ನ್ಯೂಜಿಲೆಂಡ್ ವಿರುದ್ಧ, 2023)
10. ಸಚಿನ್ ತೆಂಡೂಲ್ಕರ್: 200* (ದಕ್ಷಿಣ ಆಫ್ರಿಕಾ ವಿರುದ್ಧ, 2010)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT