ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SL vs IND, 3rd ODI: ಮಳೆ ಅಡಚಣೆ ಬಳಿಕ ಕುಸಿದ ಭಾರತ, 225ಕ್ಕೆ ಆಲೌಟ್‌

Last Updated 23 ಜುಲೈ 2021, 15:03 IST
ಅಕ್ಷರ ಗಾತ್ರ

ಕೊಲಂಬೊ: ಇಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಮಳೆ ಅಡ್ಡಿ ಪಡಿಸಿದ್ದ 50 ಸೀಮಿತ ಓವರ್‌ಗಳನ್ನು47ಕ್ಕೆ ಇಳಿಸಲಾಗಿದೆ.ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಬ್ಯಾಟಿಂಗ್‌ ಮಾಡಿದ ಭಾರತ 225 ರನ್‌ಗಳಿಗೆ ಆಲೌಟ್‌ ಆಗಿದೆ.

ಭಾರತ 3 ವಿಕೆಟ್‌ಗೆ 147 ರನ್‌ ಗಳಿಸಿದ್ದಾಗ ಮಳೆಯ ಅಡಚಣೆಯಿಂದ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ನಂತರ ಬ್ಯಾಟಿಂಗ್‌ ಮುಂದುವರಿಸಿದ ಭಾರತ ಅಲ್ಪ ಮೊತ್ತಕ್ಕೆ ಒಂದೊಂದಾಗಿ ವಿಕೆಟ್‌ ಚೆಲ್ಲಿದೆ. 43.1 ಓವರ್‌ ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡ ಟೀಮ್‌ ಇಂಡಿಯಾ 226 ರನ್‌ಗಳ ಗುರಿಯನ್ನು ಶ್ರೀಲಂಕಾಗೆ ನೀಡಿದೆ.

ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಈಗಾಗಲೇ ಜಯಿಸುವ ಮೂಲಕ ಭಾರತವು ಸರಣಿ ತನ್ನದಾಗಿಸಿಕೊಂಡಿದೆ.

ಸರಣಿಯ ಮೊದಲ ಪಂದ್ಯದಲ್ಲಿ ನಾಯಕ ಶಿಖರ್ ಧವನ್ ಆಕರ್ಷಕ ಅರ್ಧ ಶತಕ ಸಿಡಿಸಿದ್ದರೆ, ಎರಡನೇ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ದೀಪಕ್ ಚಾಹರ್ (ಅಜೇಯ 69 ರನ್ ಹಾಗೂ 2 ವಿಕೆಟ್) ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಸಂಕ್ಷಿಪ್ತ ಸ್ಕೋರ್‌
ಭಾರತ: 225 (43.1 ಓವರ್‌)

ಪೃಥ್ವಿ ಶಾ 49, ಶಿಖರ್‌ ದವನ್‌ 13, ಸಂಜು ಸ್ಯಾಮ್ಸನ್‌ 46, ಮನೀಶ್‌ ಪಾಂಡೆ 11, ಹಾರ್ದಿಕ್ ಪಾಂಡ್ಯ 19, ಸೂರ್ಯಕುಮಾರ್‌ ಯಾದವ್‌ 40,ನಿತೀಶ್‌ ರಾಣಾ 7,ಕೃಷ್ಣಪ್ಪ ಗೌತಮ್‌ 2,ರಾಹುಲ್‌ ಚಹಾರ್‌ 13, ನವದೀಪ್‌ ಸೈನಿ 15ರನ್‌

ಇತರೆ: 10

ಶ್ರೀಲಂಕಾ:
ಪ್ರವೀಣ್‌ ಜಯವಿಕ್ರಮ 3, ಅಖಿಲ ಧನಂಜಯ 3, ದುಶ್ಮಂತ ಚಮೀರ 2, ದಾಸುನ್‌ ಶನಕ 1, ಕರುಣರತ್ನೆ 1ವಿಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT