ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WTC Rankings: ಆಸೀಸ್ ವಿರುದ್ಧ ನ್ಯೂಜಿಲೆಂಡ್‌ಗೆ ಸೋಲು; ಅಗ್ರಸ್ಥಾನಕ್ಕೇರಿದ ಭಾರತ

Published 3 ಮಾರ್ಚ್ 2024, 9:17 IST
Last Updated 3 ಮಾರ್ಚ್ 2024, 9:17 IST
ಅಕ್ಷರ ಗಾತ್ರ

ದುಬೈ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವಿಶ್ವ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾನುವಾರ ಪ್ರಕಟಿಸಿರುವ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿದ ಭಾರತ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತವು 3–1ರಿಂದ ಮುನ್ನಡೆ ಸಾಧಿಸಿದೆ. ಶೇಕಡಾವಾರು ಅಂಕಗಳಲ್ಲಿ 64.58ರ ಸಾಧನೆಯನ್ನು ಭಾರತ ಮಾಡಿದೆ.  ಈ ಸಾಲಿನಲ್ಲಿ ಒಟ್ಟು ಎಂಟು ಪಂದ್ಯಗಳಲ್ಲಿ ಭಾರತವು ಐದು ಜಯ, ಎರಡು ಸೋಲು ಮತ್ತು ಒಂದು ಡ್ರಾ ಮಾಡಿಕೊಂಡಿದೆ. ಇದರೊಂದಿಗೆ 62 ಅಂಕಗಳನ್ನು ಗಳಿಸಿದೆ. ನ್ಯೂಜಿಲೆಂಡ್ ತಂಡವು ಐದು ಪಂದ್ಯಗಳಿಂದ (ಮೂರು ಜಯ, ಎರಡು ಸೋಲು) 36 ಅಂಕ ಗಳಿಸಿದೆ. ಶೇ 60ರಷ್ಟು ಪಾಯಿಂಟ್ ಪರ್ಸಂಟೇಜ್ ಹೊಂದಿದೆ.

ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯಕ್ಕೂ ಮುನ್ನ ಕಿವೀಸ್ ಮೊದಲ ಸ್ಥಾನದಲ್ಲಿತ್ತು.  ಆಸ್ಟ್ರೇಲಿಯಾ ಎದುರು 172 ರನ್‌ಗಳಿಂದ ಸೋತಿತ್ತು. ಅದರಿಂದಾಗಿ ಎರಡನೇ ಸ್ಥಾನಕ್ಕಿಳಿಯಿತು. 

ಆಸ್ಟ್ರೆಲಿಯಾ ತಂಡವು ಒಟ್ಟು 11 ಪಂದ್ಯಗಳಿಂದ ( 7 ಜಯ, ಮೂರು ಸೋಲು ಮತ್ತು ಒಂದು ಡ್ರಾ) 78  ಅಂಕ ಕಲೆಹಾಕಿದೆ. 59.09 ಪರ್ಸಂಟೇಜ್ ಹೊಂದಿದೆ.

ಮಾರ್ಚ್ 8ರಿಂದ ಕ್ರೈಸ್ಟ್‌ ಚರ್ಚ್‌ನಲ್ಲಿ  ನಡೆಯುವ   ಟೆಸ್ಸ್‌ನಲ್ಲಿ  –ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.  ಆಸ್ಟ್ರೇಲಿಯಾ ಅದರಲ್ಲಿ ಗೆದ್ದರೆ ಕಿವೀಸ್ ತಂಡವನ್ನು ಹಿಂದಿಕ್ಕುವ ಅವಕಾಶ ಇದೆ. 

ಧರ್ಮಶಾಲಾದಲ್ಲಿ ನಡೆಯಲಿರುವ ಟೆಸ್ಟ್‌ನಲ್ಲಿ ಒಂದೊಮ್ಮೆ ಇಂಗ್ಲೆಂಡ್ ತಂಡವು ಭಾರತದ ಎದುರು ಜಯಿಸಿದರೆ. ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಬಹುದು. 

ಲಯನ್ ಮೋಡಿ, ಆಸೀಸ್‌ಗೆ ಗೆಲುವು...

ನೇಥನ್ ಲಯನ್ (65ಕ್ಕೆ 6 ವಿಕೆಟ್) ಕೈಚಳಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು, ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 172 ರನ್‌ ಅಂತರದ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಗರಿಷ್ಠ 59 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್ ಪಟ್ಟಿ:

  • ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 383ಕ್ಕೆ ಆಲೌಟ್ (ಕ್ಯಾಮರೂನ್ ಗ್ರೀನ್ 174, ಮ್ಯಾಟ್ ಹೆನ್ಲಿ 70/5)

  • ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 179ಕ್ಕೆ ಆಲೌಟ್ (ಗ್ಲೆನ್ ಫಿಲಿಪ್ಸ್ 71, ನೇಥನ್ ಲಯನ್ 43/4)

  • ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್: 164ಕ್ಕೆ ಆಲೌಟ್ (ನೇಥನ್ ಲಯನ್ 41, ಗ್ಲೆನ್ ಫಿಲಿಪ್ಸ್ 45/5)

  • ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್: 196ಕ್ಕೆ ಆಲೌಟ್ (ರಚಿನ್ ರವೀಂದ್ರ 59, ನೇಥನ್ ಲಯನ್ 65/6)

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 172 ರನ್ ಅಂತರದ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT