ಸತತ 20 ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದ್ದ ಭಾರತ ತಂಡವು ವಿಶಾಖಪಟ್ಟಣಂನಲ್ಲಿ ಕೊನೆಗೂ ಟಾಸ್ ಗೆದ್ದಿದೆ.
ಹಂಗಾಮಿ ನಾಯಕ ಕೆ.ಎಲ್. ರಾಹುಲ್ ಎಡಗೈಯಿಂದ ನಾಣ್ಯ ಚಿಮ್ಮಿಸಿ ಹೆಡ್ ಎಂದು ಹೇಳಿದರು. ಹೆಡ್ ಬಿದ್ದ ಕೂಡಲೇ ನಗೆ ಬೀರಿ, ಬೌಲಿಂಗ್ ಆಯ್ದುಕೊಂಡರು.
ವಾಂಖೆಡೆ ಕ್ರೀಡಾಂಗಣದಲ್ಲಿ 2023ರ ನ.15ರಂದು ಭಾರತ ಕೊನೆಯ ಬಾರಿ ಟಾಸ್ ಗೆದ್ದಿತ್ತು. ಯಾವುದೇ ತಂಡ ಸತತ 20 ಪಂದ್ಯಗಳಲ್ಲಿ ಟಾಸ್ ಸೋತಿಲ್ಲ.