ಕೊಲಂಬೊ: ಭಾರತ ಮಹಿಳಾ ಕ್ರಿಕೆಟ್ ತಂಡವು ಏಪ್ರಿಲ್ 27ರಿಂದ ಮೇ 11ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ತ್ರಿಕೋನ ಸರಣಿಯಲ್ಲಿ ಆಡಲಿದೆ.

ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಮುನ್ನ ಈ ಸರಣಿಯು ಅಭ್ಯಾಸಕ್ಕೆ ಪೂರ್ವವೇದಿಕೆಯಾಗಲಿದೆ. ಸರಣಿಯಲ್ಲಿ ಶ್ರೀಲಂಕಾ, ಭಾರತ ಮತ್ತು ದಕ್ಷಿಣ ಆಫ್ರಿಕಾ ಆಡಲಿವೆ.

‘ಸರಣಿಯಲ್ಲಿ ಪ್ರತಿ ತಂಡವೂ ತಲಾ 4 ಪಂದ್ಯಗಳನ್ನು ಆಡಲಿದೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಫೈನಲ್ ಅಡಲಿವೆ’ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ಸಿ) ತಿಳಿಸಿದೆ.

ವೇಳಾಪಟ್ಟಿ: ಭಾರತ–ಶ್ರೀಲಂಕಾ (ಏ.27), ಭಾರತ–ದಕ್ಷಿಣ ಆಫ್ರಿಕಾ (ಏ.29), ಶ್ರೀಲಂಕಾ–ದಕ್ಷಿಣ ಆಫ್ರಿಕಾ (ಮೇ 1), ಭಾರತ–ಶ್ರೀಲಂಕಾ (ಮೇ 4), ಭಾರತ–ದಕ್ಷಿಣ ಆಫ್ರಿಕಾ (ಮೇ 6), ಶ್ರೀಲಂಕಾ–ದಕ್ಷಿಣ ಆಫ್ರಿಕಾ (ಮೇ 8) ಹಾಗೂ ಫೈನಲ್ (ಮೇ 11)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.