ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಸ್‌ ಗೆದ್ದ ಭಾರತ, ವಿಂಡೀಸ್‌ಗೆ ಆರಂಭಿಕ ಆಘಾತ ನೀಡಿದ ವಾಷಿಂಗ್ಟನ್‌

ಟಿ–20 ಕ್ರಿಕೆಟ್‌
Last Updated 3 ಆಗಸ್ಟ್ 2019, 14:57 IST
ಅಕ್ಷರ ಗಾತ್ರ

ಫ್ಲಾರಿಡಾ: ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಕದನದಲ್ಲಿ ಸೋತಿದ್ದ ಟೀಂ ಇಂಡಿಯಾ, ವಿಶ್ರಾಂತಿಯ ಬಳಿಕ ವೆಸ್ಟ್ ಇಂಡೀಸ್‌ ತಂಡದ ಎದುರು ಮೊದಲ ಸೆಣಸಾಟ ನಡೆಸುತ್ತಿದೆ. ಇಂದಿನ ಟಿ–20 ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ.

ಆರಂಭದಲ್ಲಿಯೇ ವಾಷಿಂಗ್ಟನ್‌ ಸುಂದರ್‌ ವಿಕೆಟ್‌ ಕಬಳಿಸುವ ಮೂಲಕ ಕೆರೀಬಿಯನ್‌ ಪಡೆಗೆ ಆಘಾತ ನೀಡಿದರು. ವೆಸ್ಟ್‌ ಇಂಡೀಸ್‌ ಆರಂಭಿಕ ಆಟಗಾರ ಜಾನ್‌ ಕ್ಯಾಂಪ್‌ಬೆಲ್‌ಖಾತೆ ತೆರೆಯದೇ ಕ್ಯಾಚ್‌ ನೀಡಿ ಹೊರನಡೆದರು.

ವೆಸ್ಟ್‌ ಇಂಡೀಸ್‌ 5ಓವರ್‌ಗಳಲ್ಲಿ 4ವಿಕೆಟ್‌ ನಷ್ಟಕ್ಕೆ 28ರನ್‌ ಗಳಿಸಿದೆ. ಪೊಲಾರ್ಡ್‌(2) ಮತ್ತು ಪೊವೆಲ್‌ ಕಣದಲ್ಲಿದ್ದಾರೆ.

ಆಘಾತದಿಂದ ಸುಧಾರಿಸಿಕೊಳ್ಳುವ ಮೊದಲೇ ಭುವನೇಶ್ವರ್‌ ಕುಮಾರ್‌ ಎರಡನೇ ಓವರ್‌ನಲ್ಲಿ ಮತ್ತೊಂದು ವಿಕೆಟ್‌ ಉರುಳಿಸುವ ಮೂಲಕ ವೆಸ್ಟ್‌ ಇಂಡೀಸ್‌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಎವಿನ್‌ ಲೆವಿಸ್‌ ಸಹ ಯಾವುದೇ ರನ್‌ ಗಳಿಸದೆಯೇ ಆಟ ಮುಗಿಸಿದರು.

ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ ಆಡುತ್ತಿರುವ ನವದೀಪ್ ಸೈನಿ ತನ್ನ ಮೊದಲ ಓವರ್‌ನಲ್ಲಿಯೇ ಪೂರನ್‌ ಮತ್ತು ಹೆಟ್ಮೆಯರ್‌ವಿಕೆಟ್‌ ಪಡೆಯುವ ಮೂಲಕ ಉತ್ತಮ ಆರಂಭ ಪಡೆದರು. ಒಂದು ಓವರ್‌ನಲ್ಲಿ 6 ರನ್‌ ನೀಡಿ 2 ವಿಕೆಟ್‌ ಪಡೆದರು.

ಭಾರತ ತಂಡದ ಪರ ಕೆ.ಎಲ್‌.ರಾಹುಲ್‌, ರಾಹುಲ್‌ ಚಾಹರ್‌ ಹಾಗೂ ದೀಪಕ್‌ ಚಾಹರ್‌ ಹನ್ನೊಂದರ ಸಾಲಿನಿಂದ ಹೊರಗುಳಿದಿದ್ದು, ನವದೀಪ್ ಸೈನಿಗೆ ಮೊದಲ ಅಂತರರಾಷ್ಚ್ರೀಯ ಪಂದ್ಯ ಆಡುವ ಅವಕಾಶ ದೊರೆತಿದೆ. ವೆಸ್ಟ್ ಇಂಡೀಸ್‌ ತಂಡದಲ್ಲಿ ಜೇಸನ್‌ ಮೊಹಮ್ಮದ್‌, ಕ್ಯಾರಿ ಪಿಯರ್ ಹಾಗೂ ಅಂತೋನಿ ಬ್ರಾಂಬಲ್‌ ಕಣಕ್ಕಿಳಿಯುತ್ತಿಲ್ಲ.

ವೆಸ್ಟ್ ಇಂಡೀಸ್ ಎದುರಿನ ಟಿ–20 ಸರಣಿಯ ಮೊದಲ ಪಂದ್ಯ ಶನಿವಾರ ನಡೆಯುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ಬಳಗದಲ್ಲಿ ಯುವ ಆಟಗಾರರ ದಂಡು ಇದೆ. ಅವರೆಲ್ಲರಿಗೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಸುವರ್ಣ ಅವಕಾಶ ಇದಾಗಿದೆ. ಟಿ–20 ಮತ್ತು ಏಕದಿನ ಕ್ರಿಕೆಟ್ ಸರಣಿಗಳಲ್ಲಿ ವಿಕೆಟ್‌ಕೀಪರ್ ಹೊಣೆಯನ್ನು ಯುವ ಆಟಗಾರ ರಿಷಭ್ ಪಂತ್ ನಿಭಾಯಿಸುತ್ತಿದ್ದಾರೆ.

ಭಾರತದ ಪರ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇನಿಂಗ್ಸ್‌ ಆರಂಭಿಸಲಿದ್ದಾರೆ. ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ವಾಷಿಂಗ್ಟನ್ ಸುಂದರ್ , ಜಡೇಜ, ಕೃಣಾಲ್ ಹಾಗೂ ಸೈನಿ ಒಳಗೊಂಡ ಬೌಲಿಂಗ್‌ ಪಡೆ ಬಲಿಷ್ಠವಾಗಿದೆ.

ನಾಯಕ ಕಾರ್ಲೋಸ್ ಬ್ರಾಥ್‌ವೇಟ್, ಆ್ಯಂಡ್ರೆ ರಸೆಲ್, ಶಿಮ್ರೊನ್ ಹೆಟ್ಮೆಯರ್ ಮತ್ತು ನಿಕೊಲಸ್ ಪೂರನ್ ಅವರು ಸ್ಫೋಟಕ ಬ್ಯಾಟಿಂಗ್ ಮಾಡುವಂತಹ ಸಮರ್ಥರು. ಬೌಲಿಂಗ್‌ನಲ್ಲಿ ‘ಸೆಲ್ಯೂಟ್‌’ ಖ್ಯಾತಿಯ ಶೆಲ್ಡನ್ ಕಾಟ್ರೆಲ್ ಮತ್ತು ಓಷೆನ್ ಥಾಮಸ್ ಅವರನ್ನು ಎದುರಿಸುವುದು ಭಾರತ ಬ್ಯಾಟಿಂಗ್ ಪಡೆಗೆ ಕಷ್ಟವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT