ಬೆಂಗಳೂರು: 'ಯೂನಿವರ್ಸಲ್ ಬಾಸ್' ಎಂದು ಕರೆಸಿಕೊಳ್ಳುವ ಕ್ರಿಸ್ ಗೇಲ್ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಪಂಜಾಬ್ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದರು. ಅಬ್ಬರದ ಬ್ಯಾಟಿಂಗ್ ಮಾಡುವ ಕ್ರಿಸ್ ಗೇಲ್ ಅವರಿಗೆ ಬೌಲಿಂಗ್ ಮಾಡುವ ಮುನ್ನ ಎರಡೂ ಕಾಲುಗಳನ್ನು ಕಟ್ಟಿ ಹಾಕಬೇಕು ಎಂದು ಸ್ಪಿನ್ನರ್ ಆರ್.ಅಶ್ವಿನ್ ಟ್ವೀಟಿಸಿದ್ದಾರೆ.

ಕಿಂಗ್ಸ್ ಇಲವೆನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಡೆಲ್ಲಿ 5 ವಿಕೆಟ್‌ಗಳ ಸೋಲು ಅನುಭವಿಸಿತು. ಶಿಖರ್ ಧವನ್ ಏಕಾಂಗಿ ಶತಕದ ಹೋರಾಟದಿಂದ ಡೆಲ್ಲಿ 165 ಗುರಿ ನೀಡಿತು. ಆದರೆ, ಗೇಲ್, ನಿಕೊಲಸ್ ಪೂರನ್ ಆಟದಿಂದಾಗಿ ಒಂದು ಓವರ್ ಬಾಕಿ ಉಳಿದಿರುವಂತೆಯೇ ಕಿಂಗ್ಸ್ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಗೇಲ್ 13 ಎಸೆತಗಳಲ್ಲಿ 29 ರನ್‌ಗಳನ್ನು ಕಲೆ ಹಾಕಿ, ಪಂದ್ಯದ 6ನೇ ಓವರ್‌ನಲ್ಲಿ ಆರ್.ಅಶ್ವಿನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಕ್ರಿಸ್ ಗೇಲ್ ಅವರ ಶೂಲೇಸ್ ಕಟ್ಟುತ್ತಿರುವ ಫೋಟೊ ಪ್ರಕಟಿಸಿರುವ ಅಶ್ವಿನ್, 'ದೈತ್ಯ ಸದಾ ವಿಸ್ತಾರವಾದ ಆಟವಾಡುತ್ತಾರೆ. ಅವರಿಗೆ ಬೌಲಿಂಗ್ ಮಾಡುವುದಕ್ಕೂ ಮುನ್ನ ಅವರ ಎರಡೂ ಕಾಲುಗಳನ್ನು ಒಟ್ಟಿಗೆ ಕಟ್ಟಿ ಬಿಡಬೇಕು' ಎಂದಿದ್ದಾರೆ.

ನಮಗೆ ಇದೊಂದು ಕಠಿಣ ದಿನವಾಗಿ, ನಾವು ಮತ್ತೆ ಮೇಲೆದ್ದು ಬರುವೆವು ಎಂದು ಅಶ್ವಿನ್ ಟ್ವೀಟಿಸಿದ್ದಾರೆ. ಪಂಜಾಬ್ ಎದುರಿನ ಪಂದ್ಯದಲ್ಲಿ ಅಶ್ವಿನ್ 4 ಓವರ್‌ಗಳಲ್ಲಿ 27 ರನ್ ನೀಡಿ ಒಂದು ವಿಕೆಟ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.