ಶುಕ್ರವಾರ, ಮೇ 7, 2021
26 °C

IPL 2021: ಪಂದ್ಯದ ನಡುವೆ ಧವನ್ ಹಾಗೂ ಕಾರ್ತಿಕ್ ನಡುವೆ ಆಗಿದ್ದೇನು?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗ ತೀವ್ರವಾಗಿ ವ್ಯಾಪಿಸಿರುವ ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಸಂತೋಷ ನೀಡಲು ಸಿಗುವ ಯಾವುದೇ ಅವಕಾಶವನ್ನು ಶಿಖರ್ ಧವನ್ ವ್ಯರ್ಥ ಮಾಡುತ್ತಿಲ್ಲ.

ಅಮೋಘ ಬ್ಯಾಟಿಂಗ್ ಮೂಲಕ ಮನರಂಜಿಸಿರುವ ಧವನ್ ಈಗ, ಮೈದಾನದಲ್ಲಿ ತಮ್ಮ ವಿಶೇಷ ಹಾವ-ಭಾವದ ಮೂಲಕ ಗಮನ ಸೆಳೆದಿದ್ದಾರೆ.

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶಿಖರ್ ಧವನ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನಡುವೆ ಈ ಪ್ರಸಂಗ ನಡೆದಿತ್ತು.

ಇದನ್ನೂ ಓದಿ: 

ಅತ್ಯುತ್ತಮವಾಗಿ ಆಡುತ್ತಿದ್ದ ಧವನ್ ಅವರನ್ನು ಕಾರ್ತಿಕ್ ಸ್ಟಂಪ್ ಮಾಡಿದರು. ಆದರೆ ಕ್ರೀಸಿನಿಂದ ಕಾಲು ಕದಲಲಿಲ್ಲ. ಇದರಿಂದ ಸಿಟ್ಟುಗೊಂಡಂತೆ ನಟಿಸಿದ ಕಾರ್ತಿಕ್, ಧವನ್‌ರತ್ತ ದಿಟ್ಟಿಸಿ ನೋಡುತ್ತಾ ಕೈೃಸನ್ನೆ ಮಾಡಿದರು.

 

 

 

ಈ ವೇಳೆ ಕೈಯಲ್ಲಿದ್ದ ಬ್ಯಾಟ್ ತೊರೆದ ಧವನ್, ಏಕಾಏಕಿ ನೆಲಕ್ಕೆ ಬಿದ್ದೇ ಬಿಟ್ಟರು. ಬಳಿಕ ಇಬ್ಬರು ಪರಸ್ಪರ ಮುಗುಳ್ನಗೆ ಬೀರುತ್ತಾರೆ. ಇದು ಪಂದ್ಯದ ರೋಚಕ ಸನ್ನಿವೇಶದಲ್ಲಿ ಮನರಂಜನೆ ನೀಡಲು ಯಶಸ್ವಿಯಾಯಿತು.

 

ಅಂದ ಹಾಗೆ ಕಾರ್ತಿಕ್ ಹಾಗೂ ಧವನ್ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದಾರೆ. ಇಬ್ಬರು ವಿಭಿನ್ನ ತಂಡಗಳನ್ನು ಪ್ರತಿನಿಧಿಸುತ್ತಿದ್ದರೂ ಗೆಳೆತನಕ್ಕೆ ಯಾವುದೇ ಘಾಸಿ ಉಂಟಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು