ಮಂಗಳವಾರ, ಜೂನ್ 28, 2022
26 °C

ಐಪಿಎಲ್‌ನಲ್ಲಿ ಸತತ 5ನೇ ಆವೃತ್ತಿಯಲ್ಲಿ ರಾಹುಲ್ 500 ರನ್ ಸಾಧನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್, ಸತತ ಐದನೇ ಆವೃತ್ತಿಯಲ್ಲೂ 500ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: 

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ನೂತನ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್, ಬುಧವಾರ ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ (68*) ಗಳಿಸಿದ್ದರು.

ಅಲ್ಲದೆ ಕ್ವಿಂಟನ್ ಡಿ ಕಾಕ್ ಜೊತೆ ಮುರಿಯದ ಮೊದಲ ವಿಕೆಟ್‌ಗೆ ದಾಖಲೆಯ ದ್ವಿಶತಕದ (210) ಜೊತೆಯಾಟದಲ್ಲಿ ಭಾಗಿಯಾಗಿದ್ದರು.

 

 

 

2018ರಲ್ಲಿ ಪಂಜಾಬ್ ಕಿಂಗ್ಸ್ ಪರ ರಾಹುಲ್ 659 ರನ್ ಗಳಿಸಿದ್ದರು. 2019ರಲ್ಲಿ 593 ರನ್ ಪೇರಿಸಿದ್ದರು.

 

2020ರಲ್ಲಿ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದರು. 2021ರಲ್ಲೂ 616 ರನ್ ಕಲೆ ಹಾಕಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದಾರೆ.

ಕೆ.ಎಲ್. ರಾಹುಲ್ ಐಪಿಎಲ್ ಸಾಧನೆ:
ಪಂದ್ಯ: 108
ಇನ್ನಿಂಗ್ಸ್: 99
ಅಜೇಯ: 19
ರನ್: 3810
ಗರಿಷ್ಠ: 132
ಸರಾಸರಿ: 47.62
ಸ್ಟ್ರೈಕ್‌ರೇಟ್: 136.22
ಶತಕ: 4
ಅರ್ಧಶತಕ: 30
ಬೌಂಡರಿ: 324
ಸಿಕ್ಸರ್: 159

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು