ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅನನ್ಯಾ ಪಾಂಡೆ ಹಾಟ್','ಸಾರಾ ಅಲಿ ಖಾನ್‌ ಹಾಟ್'; ರಿಯಾನ್ ಪರಾಗ್ ಸರ್ಚ್ ಹಿಸ್ಟರಿ?

Published 28 ಮೇ 2024, 13:44 IST
Last Updated 28 ಮೇ 2024, 13:44 IST
ಅಕ್ಷರ ಗಾತ್ರ

ಬೆಂಗಳೂರು: 2024ನೇ ಸಾಲಿನ ಐಪಿಎಲ್ ಟೂರ್ನಿ ಮುಕ್ತಾಯಗೊಂಡರೂ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ರಿಯಾನ್ ಪರಾಗ್ ಮತ್ತೆ ಸುದ್ದಿಯಲ್ಲಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ 22 ವರ್ಷದ ರಿಯಾನ್ ಪರಾಗ್ ಯೂಟ್ಯೂಬ್ ಸರ್ಚ್ ಹಿಸ್ಟರಿ ಹರಿದಾಡುತ್ತಿದೆ. ಇದರಲ್ಲಿ 'ಅನನ್ಯಾ ಪಾಂಡೆ ಹಾಟ್', 'ಸಾರಾ ಅಲಿ ಖಾನ್ ಹಾಟ್' ಎಂದು ಕಂಡುಬಂದಿದೆ.

ರಿಯಾನ್ ಪರಾಗ್, ಲೈವ್ ಸ್ಟ್ರಿಮಿಂಗ್ ವೇಳೆ ಹಾಡನ್ನು ಹುಡುಕುವ ಸಂದರ್ಭದಲ್ಲಿ ಸರ್ಚ್‌ನಲ್ಲಿ ಟೈಪ್ ಮಾಡುತ್ತಿರುವ ವೇಳೆ ಹಳೆಯ ಸರ್ಚ್ ಹಿಸ್ಟರಿ ಪ್ರತ್ಯಕ್ಷವಾಗಿದೆ. ಇದರ ಸ್ಕ್ರಿನ್‌ಶಾಟ್ ತೆಗೆದಿರುವ ಫ್ಯಾನ್ಸ್, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ.

ಈ ಕುರಿತು ಕ್ರಿಕೆಟಿಗ ರಿಯಾನ್ ಪರಾಗ್ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ ವಿಡಿಯೊದ ನೈಜತೆ ಇನ್ನಷ್ಟೇ ದೃಢೀಕರಣಗೊಳ್ಳಬೇಕಿದೆ.

ಅಂದ ಹಾಗೆ ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಪುನರಾಗಮನ ಮಾಡಿದ್ದ ಪರಾಗ್, ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟರ್ ಎನಿಸಿದ್ದರು. ರಾಜಸ್ಥಾನದ ಪರ 16 ಪಂದ್ಯಗಳಲ್ಲಿ 52.09ರ ಸರಾಸರಿಯಲ್ಲಿ 573 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಆ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT