ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಶ್ರೇಷ್ಠ, ಆದರೂ.. ರೋಹಿತ್ ಬ್ಯಾಟಿಂಗ್ ನೋಡುವುದೇ ಸೊಗಸು: ಜಹೀರ್ ಅಬ್ಬಾಸ್

Last Updated 14 ಜನವರಿ 2020, 11:07 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಹೀರ್‌ ಅಬ್ಬಾಸ್‌ ಭಾರತ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಕೌಶಲವನ್ನು ಹಾಡಿ ಹೊಗಳಿದ್ದಾರೆ. ನಾಯಕ ವಿರಾಟ್‌ ಕೊಹ್ಲಿಯನ್ನು ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಒಪ್ಪಿಕೊಂಡಿರುವ ಅವರು ರೋಹಿತ್‌ ಬ್ಯಾಟಿಂಗ್‌ ನೋಡುವುದು ತೃಪ್ತಿಕರ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.

‘ವಿರಾಟ್‌ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌. ಆದರೆ, ರೋಹಿತ್‌ ಶರ್ಮಾ ಅವರು ಸೊಗಸಾದ ಬ್ಯಾಟಿಂಗ್‌ ಶೈಲಿಯನ್ನು ನೋಡುವುದು ನನಗೆ ಸಾಕಷ್ಟು ತೃಪ್ತಿ ನೀಡುತ್ತದೆ. ಚೆಂಡನ್ನು ಬಾರಿಸುವ ರೀತಿ ಅವರ ಕಲೆ’ ಎಂದು ಯುಟ್ಯೂಬ್‌ ಚಾನಲ್‌ವೊದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರೋಹಿತ್‌ರ ವಿಶೇಷ ಬ್ಯಾಟಿಂಗ್‌ ಶೈಲಿಯ ಸಲುವಾಗಿಯೇ ಅವರು ಬ್ಯಾಟಿಂಗ್‌ ಮಾಡುವುದನ್ನು ನೋಡುವುದಾಗಿ ಹೇಳಿರುವ ಅಬ್ಬಾಸ್‌, ‘ಆತ (ರೋಹಿತ್‌) ಆಡುವಾಗ ನಾನು ಟಿವಿ ನಿಲ್ಲಿಸುವುದೇ ಇಲ್ಲ. ಸದ್ಯ ಕೊಹ್ಲಿ ಭಾರತ ತಂಡದ ಬೆನ್ನೆಲುಬಾಗಿರಬಹುದು. ಆದರೆ, ರೋಹಿತ್‌ ಬಾರಿಸುವ ಹೊಡೆತಗಳು ನನಗೆ ಸಂತಸ ನೀಡುತ್ತವೆ. ಈ ಇಬ್ಬರೂ ಬ್ಯಾಟಿಂಗ್ ಮಾಡುವುದನ್ನು ನೋಡುವುದೇ ಚೆಂದ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿರ್ದಿಷ್ಟ ಕ್ಷೇತ್ರಗಳನ್ನು ಗಮನದಲ್ಲಿರಿಸಿ ಕೆಲಸ ಮಾಡುವುದು ಮತ್ತು ವಿವೇಕದಿಂದ ಹಣ ವ್ಯಯಿಸುತ್ತಿರುವುದುಇತ್ತೀಚಿನ ದಿನಗಳಲ್ಲಿ ಭಾರತ ತಂಡವು ವಿಶ್ವ ಕ್ರಿಕೆಟ್‌ನಲ್ಲಿ ಪ್ರಭುತ್ವ ಸಾಧಿಸಲು ಕಾರಣ ಎಂದಿದ್ದಾರೆ. ‘ಅವರ (ಭಾರತದ) ಬಳಿ ಸಾಕಷ್ಟು ಹಣವಿದೆ. ಆದರೆ ಅವರು ನಿರ್ದಿಷ್ಟ ಕ್ಷೇತ್ರಗಳನ್ನು ಗಮನದಲ್ಲಿರಿಸಿ ಕ್ರಮ ಕೈಗೊಳ್ಳುತ್ತಾರೆ. ಅವರು ದೇಶೀ ಕ್ರಿಕೆಟ್‌ ವ್ಯವಸ್ಥೆಯಲ್ಲಿ ಅತಿ ಎನಿಸುವಷ್ಟು ಬದಲಾವಣೆಗಳನ್ನು ಮಾಡುವುದಿಲ್ಲ’

‘ಭಾರತದಲ್ಲಿ ಕ್ರಿಕೆಟ್‌ ಜನಪ್ರಿಯವಾಗಿದೆ. ಅಲ್ಲಿ ಯಾವಾಗಲೂ ಶ್ರೇಷ್ಠ ಆಟಗಾರರು ರೂಪುಗೊಳ್ಳುತ್ತಿರುತ್ತಾರೆ. ನಮ್ಮಂತಲ್ಲದ ಅವರು ರಾಜಕೀಯ, ಅಸೂಯೆಯಿಂದ ಸಾಕಷ್ಟು ದೂರ ಉಳಿಯುತ್ತಾರೆ. ಹಿರಿಯ ಶ್ರೇಷ್ಠ ಆಟಗಾರರು ಹಾಗೂ ಅವರ ಸ್ಥಾನ ತುಂಬು ಆಟಗಾರರ ನಡುವೆ ಹೆಚ್ಚು ಅಂತರವಿರುವುದಿಲ್ಲ. ಸುನೀಲ್‌ ಗವಾಸ್ಕರ್‌ಮ ಸಚಿನ್‌ ತೆಂಡೂಲ್ಕರ್‌ ಮತ್ತು ಈಗ ವಿರಾಟ್‌ ಕೊಹ್ಲಿಯನ್ನು ಬಂದಿರುವುದನ್ನುನೀವು ನೋಡಬಹುದು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT