ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಫೈನಲ್: ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

Last Updated 31 ಮೇ 2022, 9:48 IST
ಅಕ್ಷರ ಗಾತ್ರ

ಬೆಂಗಳೂರು: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ ಫೈನಲ್ ಪಂದ್ಯವು ಫಿಕ್ಸ್‌ ಆಗಿತ್ತು ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದು ಪಂದ್ಯ ಮುಗಿದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಆಕ್ರೋಶದ ಪೋಸ್ಟ್‌ಗಳನ್ನು ಹಾಕಲು ಶುರು ಮಾಡಿದ್ದು ಸೋಮವಾರವಿಡೀ ಟ್ರೆಂಡ್ ಆಗಿತ್ತು.

ಗುಜರಾತ್‌ನಲ್ಲಿ ಪಂದ್ಯ ನಡೆದಿದ್ದು ಆ ರಾಜ್ಯದ ಹೆಸರಿನ ತಂಡವೇ ಚಾಂಪಿಯನ್ ಆಗಿದೆ. ಇದರ ಹಿಂದೆ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಪುತ್ರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಕೈವಾಡವಿದೆ ಎಂಬ ಸಂದೇಹ ವ್ಯಕ್ತಪಡಿಸುವ ಸಂದೇಶಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ.

ಅಮಿತ್ ಶಾ ವಿಜಯದ ಸಂಕೇತ ತೋರಿಸುವ ಮತ್ತು ಜಯ್ ಶಾ ಕುಣಿದಾಡುವ ಚಿತ್ರಗಳನ್ನು ಪೋಸ್ಟ್ ಮಾಡಿರುವ ನೆಟ್ಟಿಗರು ಲೀಗ್‌ವೊಂದರ ಗೆಲುವಿನಲ್ಲಿ ಇವರು ವೈಯಕ್ತಿಕವಾಗಿ ಸಂಭ್ರಮಿಸುವಂಥ ಹಿತಾಸಕ್ತಿ ಏನಿದೆ ಎಂದು ಪ್ರಶ್ನಿಸಿದ್ದಾರೆ.

‘ಅಮಿತ್‌ ಶಾ ಗೃಹ ಸಚಿವ, ಜಯ್ ಶಾ ಬಿಸಿಸಿಐ ಕಾರ್ಯದರ್ಶಿ. ಗುಜರಾತ್ ತಂಡ ಆಡಿದ್ದು ಅಹಮದಾಬಾದ್‌ನಲ್ಲಿ. ಪರಿಸ್ಥಿತಿ ಹೀಗಿರುವಾಗ ಆ ತಂಡವಲ್ಲದೆ ಬೇರೆ ಯಾವ ತಂಡ ಗೆಲ್ಲಲು ಸಾಧ್ಯ’ ಎಂದು ಒಬ್ಬರು ಕೇಳಿದ್ದಾರೆ.

ಜಯ್ ಶಾ ಮತ್ತು ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತುಕತೆಯಲ್ಲಿ ತೊಡಗಿರುವ ಚಿತ್ರವನ್ನು ಹಾಕಿ, ‘ಫಿಕ್ಸಿಂಗ್ ಬಗ್ಗೆ ಪಂದ್ಯೋತ್ತರದ ಚರ್ಚೆ’ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. ಅಮಿತ್ ಶಾ ವಿಜಯದ ಸಂಕೇತ ತೋರಿಸುವ ಚಿತ್ರ ಹಾಕಿರುವ ಇನ್ನೊಬ್ಬರು 'ಪಂದ್ಯಕ್ಕೆ ತಿರುವು ಕೊಟ್ಟವರು' ಎಂದು ಬರೆದಿದ್ದಾರೆ.

ಔಟಾಗಿ ಮರಳುವಾಗ ಕೋಪದಲ್ಲಿ ಕ್ಯಾಪ್ ಮತ್ತು ಕೈಗವಸು ಎಸೆದ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಚಿತ್ರವನ್ನು ಪೋಸ್ಟ್ ಮಾಡಿರುವ ಒಬ್ಬರು ‘ತಮ್ಮನ್ನು ತಾವು ಮಾರಿದರೆ ಅಥವಾ ಫಿಕ್ಸ್‌ ಮಾಡಿಕೊಂಡರೆ ಯಾರಿಗೂ ಕೋಪ ಬರುವುದಿಲ್ಲ. ಆದರೆ ಯಾರಿಗೋ ಬೇಕಾಗಿ ವಿಕೆಟ್ ಕಿತ್ತೆಸೆಯುವ ಪರಿಸ್ಥಿತಿ ಒದಗಿದಾಗ ಬೇಸರ ಆಗುವುದು ಸಹಜ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT