ಮುಂಬೈ:ಕೊರೊನಾ ವೈರಸ್ ಭೀತಿಯಿಂದಾಗಿ ವಿದೇಶಿಯರಿಗೆ ವೀಸಾ ನಿರ್ಬಂಧಿರುವುದಿರಂದ, ಐಪಿಎಲ್–2020 ಟೂರ್ನಿಯಲ್ಲಿ ಆಡಲಿರುವ ವಿದೇಶಿ ಆಟಗಾರರು ಏಪ್ರಿಲ್ 15ರ ವರೆಗೆ ಲಭ್ಯರಿರುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದು ಈ ಬಾರಿಯು ಐಪಿಎಲ್ ಟೂರ್ನಿ ಆಯೋಜನೆ ಬಗ್ಗೆಯೇ ಅನುಮಾನಗಳನ್ನು ಮೂಡಿಸಿದೆ.

ಐಪಿಎಲ್–2020 ಟೂರ್ನಿಯು ಮಾರ್ಚ್29ರಿಂದ ಆರಂಭವಾಗಲಿದ್ದು, ಮೇ 17ರವರೆಗೆ ನಡೆಯಲಿದೆ.

‘ಐಪಿಎಲ್‌ನಲ್ಲಿ ವಿವಿಧ ಪ್ರಾಂಚೈಸ್ ಪರ ಆಡುವ ವಿದೇಶಿ ಆಟಗಾರರು ಬ್ಯುಸಿನೆಸ್ ವೀಸಾ ಕೆಟಗರಿಗೆ ಒಳಪಟ್ಟಿದ್ದಾರೆ. ಸರ್ಕಾರದ ನಿರ್ದೇಶನದಂತೆ ಅವರು ಏಪ್ರಿಲ್ 15ರ ವರೆಗೆ ದೇಶಕ್ಕೆ ಆಗಮಿಸಲು ಸಾಧ್ಯವಿಲ್ಲ’ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶ್ವದಾದ್ಯಂತ 4 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಸೋಂಕು, ದೇಶದ ಸುಮಾರು 70ಕ್ಕೂ ಹೆಚ್ಚುಜನರಿಗೆ ತಗುಲಿರುವುದುದೃಢಪಟ್ಟಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜತಾಂತ್ರಿಕ ಮತ್ತು ಔದ್ಯೋಗಿಕ ಸೇರಿ ಕೆಲವೇಕೆಲವು ವರ್ಗದ ವೀಸಾ ಹೊರತುಪಡಿಸಿ ಉಳಿದೆಲ್ಲವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

ಮಾರ್ಚ್ 14ರಂದು (ಶನಿವಾರ) ಮುಂಬೈನಲ್ಲಿಐಪಿಎಲ್ ಆಡಳಿತ ಮಂಡಳಿ ಸಭೆನಡೆಯಲಿದ್ದು, ಅದರಲ್ಲಿ ಟೂರ್ನಿಯಹಣೆಬರಹ ನಿರ್ಧಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.