ಮಂಗಳವಾರ, ಫೆಬ್ರವರಿ 7, 2023
27 °C
ಕೆಎಸ್‌ಸಿಎ ಫಸ್ಟ್‌ ಡಿವಿಜನ್‌ ಲೀಗ್‌ ಟೂರ್ನಿ: ಎಸ್‌ಡಿಎಂಸಿಎ ‘ಎ’ ತಂಡಕ್ಕೆ 178 ರನ್‌ ಗೆಲುವು

ಎಸ್‌ಸಿಎ ಫಸ್ಟ್‌ ಡಿವಿಜನ್‌ ಲೀಗ್‌: ಪರೀಕ್ಷಿತ್‌ ಅಮೋಘ ದ್ವಿಶತಕ, ಆದರ್ಶ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: 193 ನಿಮಿಷ... 155 ಎಸೆತ... 23 ಬೌಂಡರಿ... 5 ಸಿಕ್ಸರ್‌... ಒಟ್ಟು 202 ರನ್‌ಗಳು. ಇದು ಪರೀಕ್ಷಿತ್‌ ಒಕ್ಕುಂದ ಸ್ಫೋಟಕ ಆಟದ ಪರಿ.

ಇಂಥದ್ದೊಂದು ಸ್ಫೋಟಕ ಇನಿಂಗ್ಸ್ ಇಲ್ಲಿನ ರೈಲ್ವೆ ಮೈದಾನದಲ್ಲಿ(ಆರ್‌ಐಎಸ್) ಕೆಎಸ್‌ಸಿಎ ಫಸ್ಟ್‌ ಡಿವಿಜನ್‌ ಲೀಗ್‌ ಟೂರ್ನಿಯ ಮಂಗಳವಾರ ನಡೆದ ಪಂದ್ಯದಲ್ಲಿ ಮೂಡಿಬಂತು.

ಆರಂಭಿಕ ಆಟಗಾರರಾದ ಪರೀಕ್ಷಿತ್‌ ಹಾಗೂ ಆದರ್ಶ ಹಿರೇಮಠ(ಅಜೇಯ 132 ರನ್‌, 7 ಬೌ, 3ಸಿ) ಅವರ ಅಬ್ಬರದ ಆಟದ ಬಲದಿಂದ ಎಸ್‌ಡಿಎಂಸಿಎ ‘ಎ’ ತಂಡವು 178 ರನ್‌ಗಳಿಂದ ಎಸ್‌ಡಿಎಂಸಿಎ ‘ಬಿ’ ತಂಡದ ವಿರುದ್ಧ ಗೆಲುವಿನ ನಗೆ ಬೀರಿತು.

ಟಾಸ್‌ ಸೋತು ಬ್ಯಾಟಿಂಗ್‌ ಅವಕಾಶ ಪಡೆದ ಎಸ್‌ಡಿಎಂಸಿಎ ‘ಎ’ ತಂಡವು ನಿಗದಿತ 50 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 352 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.ಎಸ್‌ಡಿಎಂಸಿಎ ‘ಎ’ದ ಬ್ಯಾಟರ್‌ಗಳು ಎಸ್‌ಡಿಎಂಸಿಎ ‘ಬಿ’ ತಂಡದ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರೀಕ್ಷಿತ್‌ ಹಾಗೂ ಆದರ್ಶ ಅವರ ಜೊತೆಯಾಟವನ್ನು ವಿಶಾಲ್‌ ಹುಬ್ಬಳ್ಳಿ ಮುರಿದರು.

ಸವಾಲಿನ ಗುರಿ ಬೆನ್ನಟ್ಟಿದ ಎಸ್‌ಡಿಎಂಸಿಎ ‘ಬಿ’ ತಂಡವು 35.1 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲೌಟ್‌ ಆಯಿತು. ಅಜೇಯ 132 ರನ್‌ಗಳಿಸಿದ್ದ ಆದರ್ಶ ಹಿರೇಮಠ ಐದು ವಿಕೆಟ್‌ ಕಬಳಿಸಿ ಮಿಂಚಿದರು.

ಬಿಡಿಕೆಎಸ್‌ಎಫ್‌ ‘ಎ’ ತಂಡಕ್ಕೆ ಜಯ: ಹುಬ್ಬಳ್ಳಿಯ ರಾಜನಗರ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಮತ್ತೊಂದು
ಪಂದ್ಯದಲ್ಲಿ ಬಿಡಿಕೆಎಸ್‌ಎಫ್‌ ‘ಎ’ ತಂಡವು 69 ರನ್‌ಗಳಿಂದ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ‘ಬಿ’ ತಂಡದ ವಿರುದ್ಧ ಗೆದ್ದಿತು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು