ಶನಿವಾರ, ಜನವರಿ 18, 2020
18 °C

‘ದನ ಕಾಯೋನು’ ನಟಿ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ: ಶುಭ ಕೋರಿದ ಕೊಹ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕನ್ನಡದ ‘ದನ ಕಾಯೋನು’ ಸಿನಿಮಾದಲ್ಲಿ ನಟಿಸಿದ್ದ ನತಾಶಾ ಸ್ಟ್ಯಾಂಕೊವಿಕ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಶುಭ ಕೋರಿದ್ದಾರೆ.

ನಟಿ ಹಾಗೂ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಪಾಂಡ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್‌, ‘ಎಂತಹ ಹಿತವಾದ ಅಚ್ಚರಿ ನೀಡಿದ್ದೀಯ. ನಿಮಗೆ ಶುಭವಾಗಲೆಂದು ಕೋರುತ್ತೇನೆ. ದೇವರ ದಯೆ ಇರಲಿ’ ಎಂದು ಹಾರೈಸಿದ್ದಾರೆ.

‘ಹಾರ್ದಿಕ್‌ ಪಾಂಡ್ಯ ಮತ್ತು ನತಾಶಾಗೆ ದೊಡ್ಡ ಅಭಿನಂದನೆಗಳು. ನೀವಿಬ್ಬರು ನಮ್ಮ ಕ್ರೇಜಿ ಕುಟುಂಬದ ಜೊತೆಯಾಗಲಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ವೆಲ್‌ಕಮ್‌ ಟು ಮ್ಯಾಡ್‌ನೆಸ್‌’ ಎಂದು ಸಹೋದರ ಕೃಣಾಲ್‌ ಪಾಂಡ್ಯ ಬರೆದುಕೊಂಡಿದ್ದಾರೆ.

ಬೆನ್ನುನೋವಿನ ಕಾರಣ ಭಾರತ ತಂಡದಿಂದ ಹೊರಗುಳಿದು ವಿಶ್ರಾಂತಿಯಲ್ಲಿರುವ ಹಾರ್ದಿಕ್‌, ಮುಂಬರುವ ನ್ಯೂಜಿಲೆಂಡ್‌ ಪ್ರವಾಸಕ್ಕೆ ಭಾರತ ‘ಎ’ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆ ಮೂಲಕ ಕ್ರಿಕೆಟ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.

ಹಿಂದಿಯ ರಿಯಾಲಿಟಿ ಶೊ ‘ಬಿಗ್‌ಬಾಸ್‌’ನಲ್ಲಿ ಕಾಣಿಸಿಕೊಂಡಿದ್ದ ನತಾಶಾ ಸರ್ಬಿಯ ಮೂಲದವರು. ಕನ್ನಡದ ‘ದನ ಕಾಯೋನು’ ಸಿನಿಮಾದಲ್ಲೂ ನಟಿಸಿದ್ದಾರೆ.

 
 
 
 

 
 
 
 
 
 
 
 
 

Mai tera, Tu meri jaane, saara Hindustan. 👫💍 01.01.2020 ❤️ #engaged

A post shared by Hardik Pandya (@hardikpandya93) on

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು