ಬುಧವಾರ, ಜೂನ್ 29, 2022
24 °C

ಆರ್‌ಸಿಬಿ ಸ್ಟಾರ್ ಗ್ಲೆನ್ ಮ್ಯಾಕ್ಸ್‌ವೆಲ್-ವಿನಿ ರಾಮನ್ ಮದುವೆ ವಿಡಿಯೊ ವೈರಲ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಚೆನ್ನೈ: ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ತಮಿಳುನಾಡು ಮೂಲದ ವಿನಿ ರಾಮನ್ ನಡುವಣ ವಿವಾಹ ಸಮಾರಂಭ ನೆರವೇರಿದೆ.

ತಮಿಳು ಸಂಪ್ರದಾಯದಲ್ಲೂ ವಿವಾಹ ಸಮಾರಂಭ ನಡೆದಿದೆ. ಇದೀಗ ಮದುವೆ ವಿಡಿಯೊ ವೈರಲ್ ಆಗಿದೆ.

ವಧು-ವರ ಪರಸ್ಪರ ಹೂವಿನ ಹಾರ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: 

 

 

ಎರಡೂ ಕುಟುಂಬಗಳ ಸಂಪ್ರದಾಯವನ್ನು ಗೌರವಿಸುವ ಸಲುವಾಗಿ ಆಸ್ಟ್ರೇಲಿಯಾ ಹಾಗೂ ಭಾರತದ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮ್ಯಾಕ್ಸ್‌ವೆಲ್ ಪ್ರತಿನಿಧಿಸುತ್ತಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು