ಮೆಲ್ಬರ್ನ್: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಅಮೋಘ ಪ್ರದರ್ಶನ ತೋರುವ ಮೂಲಕ ವಿಶ್ವ ಕ್ರಿಕೆಟ್ ಅನ್ನು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ ವಿರಾಟ್ ಕೊಹ್ಲಿ, ಇದೀಗ ಪಂದ್ಯದ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್ಕ್ರಿಕೆಟ್ ಟೂರ್ನಿಯ 'ಸೂಪರ್ 12' ಹಂತದ ಪಂದ್ಯದಲ್ಲಿಇಂದು (ಅಕ್ಟೋಬರ್ 23) ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ.

ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ (4) ಹಾಗೂ ಉಪನಾಯಕ ಕೆ.ಎಲ್.ರಾಹುಲ್ (4) ತಂಡದ ಮೊತ್ತ 10 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು.

ಇದನ್ನೂ ಓದಿ:T20 World Cup | ಅಮೋಘ ಬ್ಯಾಟಿಂಗ್ ಮೂಲಕ ಪಾಕ್ ಎದುರು ಗೆಲುವು ತಂದುಕೊಟ್ಟ ಕೊಹ್ಲಿ

ಬಳಿಕ ಬಂದ ಸೂರ್ಯಕುಮಾರ್ ಯಾದವ್ (15) ಮತ್ತು ಅಕ್ಷರ್ ಪಟೇಲ್ (2) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಕೇವಲ 31 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ (40) ಜೊತೆಗೂಡಿ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ಕೊಹ್ಲಿ, ರಕ್ಷಣಾತ್ಮಕವಾಗಿ ಅಡುತ್ತಲೇ ರನ್ ಗತಿ ಹೆಚ್ಚಿಸಿದರು. ಈ ಜೋಡಿ5ನೇ ವಿಕೆಟ್ ಪಾಲುದಾರಿಕೆಯಲ್ಲಿ 113 ರನ್ ಕಲೆಹಾಕಿತ್ತು. ಪಾಂಡ್ಯ ಔಟಾದ ನಂತರವೂ ಸೊಗಸಾಗಿ ಬ್ಯಾಟ್ ಬೀಸಿದ ಕೊಹ್ಲಿ, ಕೇವಲ 53 ಎಸೆತಗಳಲ್ಲಿ 82 ರನ್ ಬಾರಿಸಿ ಅಜೇಯವಾಗಿ ಉಳಿದರು. ಅವರ ಆಟದ ಬಲದಿಂದಾಗಿ ಭಾರತಕ್ಕೆ 4 ವಿಕೆಟ್ ಅಂತರದ ಜಯ ಒಲಿಯಿತು.

ಪಂದ್ಯದ ಬಳಿಕ ಮಾತನಾಡಿರುವ ಕೊಹ್ಲಿ, ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನಲ್ಲಿ ಮಾತುಗಳೇ ಇಲ್ಲ. ಇದೆಲ್ಲ ಹೇಗಾಯಿತು ಎಂಬುದೂ ಗೊತ್ತಾಗುತ್ತಿಲ್ಲ.ಜೊತೆಯಾಟದ ವೇಳೆ ಪಾಂಡ್ಯ, ಕೊನೆವರೆಗೂ ನಾವು ಆಡುತ್ತೇವೆ ಎಂಬ ನಂಬಿಕೆ ಇರಲಿ ಎಂದು ಹೇಳುತ್ತಲೇ ಇದ್ದ ಎಂದಿದ್ದಾರೆ.

ಪಾಕ್ ಬೌಲರ್ಗಳ150 ಕಿ.ಮೀ ವೇಗದಲ್ಲಿ ಬರುತ್ತಿದ್ದ ಎಸೆತವನ್ನು ನಿರಾಯಾಸವಾಗಿ ಎದುರಿಸಿದ ಕೊಹ್ಲಿಯ ಇನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳಿದ್ದವು.

ಇದನ್ನೂ ಓದಿ:ಪಾಕ್ ಎದುರು ಜಯ ತಂದುಕೊಟ್ಟ ಪತಿ ವಿರಾಟ್ ಕುರಿತು ಭಾವುಕ ಸಂದೇಶ ಹಂಚಿಕೊಂಡ ಅನುಷ್ಕಾ

ರನ್ ಗತಿ ಹೆಚ್ಚಿಸಲು ನಿರ್ಧರಿಸಿದ್ದು ಯಾವಾಗ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಹುಶಃ ಶಾಹೀನ್ ಅಫ್ರಿದಿ (17ನೇ ಓವರ್) ಬೌಲಿಂಗ್ ಮಾಡಲು ಬಂದಾಗ ಮೇಲುಗೈ ಸಾಧಿಸಬೇಕು ಎಂದು ಪಾಂಡ್ಯಗೆ ಹೇಳಿದೆ. ನಮ್ಮ ಲೆಕ್ಕಾಚಾರ ತುಂಬಾ ಸರಳವಾಗಿತ್ತು. ಮೊಹಮದ್ ನವಾಜ್ಗೆ ಒಂದು ಓವರ್ ಬಾಕಿ ಇದೆ. ಹಾಗಾಗಿ, ಹ್ಯಾರಿಸ್ರೌಫ್ ಬೌಲಿಂಗ್ನಲ್ಲಿ ರನ್ ಗಳಿಸಿಕೊಂಡರೆ, ಅವರು ಗೊಂದಲಕ್ಕೀಡಾಗುತ್ತಾರೆ ಎಂದು ಮಾತನಾಡಿಕೊಂಡೆವು.ಅದರಂತೆ ಆಡಿದೆವು, ಎಂಟು ಎಸೆತಗಳಲ್ಲಿ 28 ರನ್ ಬೇಕಿದ್ದಾಗ ಎರಡು ಸಿಕ್ಸರ್ ಬಾರಿಸಿದೆ. ಹಾಗಾಗಿ ಕೊನೆಯ ಆರು ಎಸೆತಗಳಲ್ಲಿ 16 ರನ್ ಬೇಕಾಯಿತು. ಇದನ್ನೆಲ್ಲ ವಿವರಿಸಲು ನನ್ನ ಬಳಿ ಪದಗಳೇ ಇಲ್ಲ ಎಂದು ಹೇಳಿದ್ದಾರೆ.

ಹ್ಯಾರಿಸ್ ಬೌಲಿಂಗ್ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿದ್ದು ಹೇಗೆ ಎಂದು ಕೇಳಿದ್ದಕ್ಕೆ, 'ಸಾಕಷ್ಟು ಹಿಂದೆ ಬಿದ್ದ ನಿಧಾನಗತಿ ಎಸೆತವನ್ನು ಲಾಂಗ್ ಆನ್ನತ್ತ ಬಾರಿಸಿದಮೊದಲ ಸಿಕ್ಸರ್ ಅನಿರೀಕ್ಷಿವಾಗಿತ್ತು. ಫೈನ್ ಲೆಗ್ನಲ್ಲಿ ಬಾರಿಸಿದ ಇನ್ನೊಂದು ಸಿಕ್ಸರ್ಬ್ಯಾಟನ್ನು ಸುಮ್ಮನೆ ಅತ್ತ ತಿರುಗಿಸಿದೆ ಅಷ್ಟೇ' ಎಂದಿದ್ದಾರೆ.

ಪಾಕ್ ವಿರುದ್ಧದ ಆಟವು ತಮ್ಮ ವೃತ್ತಿ ಬದುಕಿನ ಅತ್ಯುತ್ತಮ ಇನಿಂಗ್ಸ್ ಎಂದೂ ಹೇಳಿಕೊಂಡಿದ್ದಾರೆ.

'ಮೊಹಾಲಿಯಲ್ಲಿ (2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ) ಆಡಿದ್ದ ಇನಿಂಗ್ಸ್ಇದುವರೆಗೆ ನನ್ನ ಅತ್ಯುತ್ತಮ ಟಿ20ಇನಿಂಗ್ಸ್ ಎಂದು ಹೇಳುತ್ತಿದ್ದೆ. ಆಗ ನಾನು 51 ಎಸೆತಗಳಲ್ಲಿ 82 ರನ್ ಗಳಿಸಿದ್ದೆ. ಇಂದು 53 ಎಸೆತಗಳಲ್ಲಿ 82 ರನ್ ಬಾರಿಸಿದ್ದೇನೆ. ಈ ಎರಡೂ ಇನಿಂಗ್ಸ್ಗಳು ವಿಶೇಷವಾದವು.ಪಂದ್ಯದ ಸನ್ನಿವೇಶ ಮತ್ತು ನಾವಿದ್ದ ಪರಿಸ್ಥಿತಿಯನ್ನು ಪರಿಗಣಿಸಿ ಇಂದಿನ ಇನಿಂಗ್ಸ್ ಸಹ ಅತ್ಯುತ್ತಮವಾದದ್ದು ಎಂದು ಪರಿಗಣಿಸುತ್ತೇನೆ' ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:ಪಾಕ್ ಎದುರು ಭಾರತಕ್ಕೆ ರೋಚಕ ಜಯ: ಕೊಹ್ಲಿಯನ್ನು ಹೊತ್ತು ಕುಣಿದ ರೋಹಿತ್ ಶರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.