ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇಯಲ್ಲಿ ಅಕ್ಟೋಬರ್ 17ರಿಂದ ಟಿ–20 ವಿಶ್ವಕಪ್: ವರದಿ

Last Updated 26 ಜೂನ್ 2021, 8:40 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ನಡೆಯಬೇಕಿದ್ದ ಟಿ–20 ವಿಶ್ವಕಪ್ ಟೂರ್ನಿ ಅಕ್ಟೋಬರ್‌ 17ರಿಂದ ಯುಎಇಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಕೋವಿಡ್–19 ಸಾಂಕ್ರಾಮಿಕ ಉಲ್ಬಣಿಸಿರುವ ಕಾರಣ ಯುಎಇ ಮತ್ತು ಒಮಾನ್‌ನಲ್ಲಿ ಟೂರ್ನಿ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚಿಸಿದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಟಿ–20 ವಿಶ್ವಕಪ್ ಪಂದ್ಯಗಳು ಅಬುದಾಭಿ, ಶಾರ್ಜಾ ಮತ್ತು ದುಬೈನಲ್ಲಿ ನಡೆಯಲಿದ್ದು, ಕ್ವಾಲಿಫಯರ್ ಸುತ್ತಿನ ಪಂದ್ಯಗಳನ್ನು ಒಮಾನ್ ಆಯೋಜಿಸಲಿದೆ. ಭಾರತದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಾಗದಿದ್ದರೆ ಯುಎಇಯಲ್ಲಿ ನಡೆಸುವುದಾಗಿ ಬಿಸಿಸಿಐ ಈ ಹಿಂದೆಯೇ ತಿಳಿಸಿತ್ತು.

ಟೂರ್ನಿಯ ಆಯೋಜನೆ ಹಕ್ಕುಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಬಿಸಿಸಿಐ ಉತ್ಸುಕವಾಗಿತ್ತು. ಆದರೂ ಸರ್ಕಾರದಿಂದ ತೆರಿಗೆ ವಿನಾಯಿತಿ ದೊರೆಯದಿರುವುದು ಮತ್ತು ಐಪಿಎಲ್ ಬಯೋಬಬಲ್ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇತರ ದೇಶಗಳ ಆಟಗಾರರು ಭಾರತಕ್ಕೆ ಬರಲು ಒಪ್ಪುತ್ತಾರೆಯೇ ಎಂಬುದು ಖಚಿತವಿಲ್ಲದ ಕಾರಣ ಬಿಸಿಸಿಐ ಈ ನಿರ್ಧಾರಕ್ಕೆ ಮುಂದಾಗಿರಬಹುದು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‘ ವರದಿ ಮಾಡಿದೆ. ಯುಎಇಯಲ್ಲಿ ಟೂರ್ನಿ ಆಯೋಜಿಸುವುದರಿಂದ ಒಟ್ಟು ಗಳಿಕೆಯ ಶೇ 41ರಷ್ಟನ್ನು ಉಳಿಸಿಕೊಳ್ಳುವುದು ಬಿಸಿಸಿಐಗೆ ಸಾಧ್ಯವಾಗಲಿದೆ ಎಂದೂ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT