ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಳೆ ಭಾರತಕ್ಕೆ ಮರಳಲಿರುವ ಟೀಮ್ ಇಂಡಿಯಾ ಆಟಗಾರರು: ವಿಜಯೋತ್ಸವಕ್ಕೆ ಸಿದ್ಧತೆ

Published 3 ಜುಲೈ 2024, 5:13 IST
Last Updated 3 ಜುಲೈ 2024, 5:13 IST
ಅಕ್ಷರ ಗಾತ್ರ

ನವದೆಹಲಿ: ಟಿ20 ವಿಶ್ವಕಪ್ ವಿಜೇತ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾವು ನಾಳೆ (ಗುರುವಾರ) ಭಾರತಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.

ಟೀಮ್ ಇಂಡಿಯಾ ಆಟಗಾರರನ್ನು ಹೊತ್ತ ವಿಶೇಷ ವಿಮಾನವು ನಾಳೆ ಬೆಳಿಗ್ಗೆ ದೆಹಲಿಗೆ ಬಂದಿಳಿಯಲಿದೆ. ಬಳಿಕ ಆಟಗಾರರು ವಿಜಯೋತ್ಸವ ಆಚರಿಸಲಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಬಿಸಿಸಿಐ ಉನ್ನತ ಪದಾಧಿಕಾರಿಗಳು ಮತ್ತು ಕ್ರಿಕೆಟಿಗರು ಸೇರಿದಂತೆ ಭಾರತದಿಂದ ತೆರಳಿರುವ ಮಾಧ್ಯಮ ಪ್ರತಿನಿಧಿಗಳನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗುತ್ತಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಕೆರೀಬಿಯನ್ ದ್ವೀಪಗಳಲ್ಲಿ ಸೋಮವಾರ ಬೆಳಗಿನ ಜಾವದಲ್ಲಿ ಕೆಟಗರಿ 4 ಚಂಡಮಾರುತವು ಬೀಸುತ್ತಿರುವುದರಿಂದ ವಿಮಾನಯಾನವೂ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಮುಖ್ಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೂಡ ಮುಚ್ಚಲಾಗಿತ್ತು.

ಬಾರ್ಬಡೋಸ್ ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ಬಿರುಗಾಳಿಯ ತೀವ್ರತೆಯು ಅಪಾಯಕಾರಿ ಮಟ್ಟದಲ್ಲಿತ್ತು. 3 ಲಕ್ಷ ಜನಸಂಖ್ಯೆ ಇರುವ ಈ ದ್ವೀಪ ದೇಶದಲ್ಲಿ ಭಾನುವಾರದಿಂದಲೇ ಲಾಕ್‌ಡೌನ್ ವಿಧಿಸಲಾಗಿತ್ತು.

ಶನಿವಾರ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಜಯಿಸಿ ಟ್ರೋಫಿ ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT