ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ | ಯಾಸೀರ್ ಮೋಡಿ: ಪಾಕಿಸ್ತಾನ ತಂಡಕ್ಕೆ ಮುನ್ನಡೆ

ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ನಿರಾಸೆ | ವೇಗಿಗಳಿಗೆ ಬೆದರಿದ ಪಾಕ್
Last Updated 7 ಆಗಸ್ಟ್ 2020, 20:30 IST
ಅಕ್ಷರ ಗಾತ್ರ
ADVERTISEMENT
""

ಮ್ಯಾಂಚೆಸ್ಟರ್: ಲೆಗ್‌ ಸ್ಪಿನ್ನರ್ ಯಾಸೀರ್ ಶಾ ಮಾಡಿದ ಮೋಡಿಯಿಂದಾಗಿ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿದ ಪಾಕಿಸ್ತಾನ ತಂಡ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ವೇಗಿಗಳಿಗೆ ಬೆದರಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಹೀಗಾಗಿ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಕುತೂಹಲ ಕೆರಳಿಸಿದೆ.

ಯಾಸೀರ್ (66ಕ್ಕೆ4) ಅವರ ಶಿಸ್ತಿನ ದಾಳಿಯಿಂದಾಗಿ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 219 ರನ್‌ಗಳಿಗೆ ಪತನ ಕಂಡಿತು. 107 ರನ್‌ಗಳ ಮುನ್ನಡೆ ಗಳಿಸಿದ ಪಾಕಿಸ್ತಾನ ದಿನದಾಟ ಮುಕ್ತಾಯಗೊಂಡಾಗ ಎರಡನೇ ಇನಿಂಗ್ಸ್‌ನಲ್ಲಿ 137 ರನ್ ಗಳಿಸುವಷ್ಟರಲ್ಲಿ ಎಂಟು ವಿಕೆಟ್ ಕಳೆದುಕೊಂಡಿದ್ದು ಒಟ್ಟಾರೆ 244 ರನ್‌ಗಳ ಮುನ್ನಡೆಯನ್ನಷ್ಟೇ ಗಳಿಸಲು ಸಾಧ್ಯವಾಗಿದೆ.

ಪಾಕಿಸ್ತಾನದ ಮೊದಲ ಇನಿಂಗ್ಸ್ ಮೊತ್ತವಾದ 326 ರನ್‌ಗಳಿಗೆ ಉತ್ತರಿಸಿದ ಇಂಗ್ಲೆಂಡ್ ಗುರುವಾರ ದಿನದಾಟದ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 92 ರನ್ ಗಳಿಸಿತ್ತು. ಔಟಾಗದೇ ಉಳಿದಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಓಲಿ ಪೋಪ್ (62; 117 ಎ, 8 ಬೌಂ) ಮತ್ತು ಜೋಸ್ ಬಟ್ಲರ್ (38; 108 ಎ, 5 ಬೌಂ) ಅವರು ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ದೂರ ಮಾಡಿದರು. ಪೋಪ್ ವಿಕೆಟ್ ಕಬಳಿಸಿ ಈ ಜೊತೆಯಾಟವನ್ನು ಮುರಿದ ನಸೀಮ್ ಶಾ ಶುಕ್ರವಾರ ಮೊದಲ ಪೆಟ್ಟು ನೀಡಿದರು. ಬಟ್ಲರ್ ವಿಕೆಟ್ ಯಾಸೀರ್ ಶಾ ಪಾಲಾಯಿತು. ಕ್ರಿಸ್ ವೋಕ್ಸ್‌, ಜೋಫ್ರಾ ಆರ್ಚರ್ ಮತ್ತು ಸ್ಟುವರ್ಟ್ ಬ್ರಾಡ್ (ಔಟಾಗದೆ 29; 25 ಎ, 4 ಬೌಂಡರಿ) ಅವರು ತೋರಿದ ಪ್ರತಿರೋಧದಿಂದಾಗಿ ತಂಡದ ಮೊತ್ತ ಇನ್ನೂರರ ಗಡಿ ದಾಟಿತು.

ಮಿಂಚಿದ ಮೂವರು ವೇಗಿಗಳು: ಎರಡನೇ ಇನಿಂಗ್ಸ್‌ನಲ್ಲಿ ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಮತ್ತು ಬೆನ್ ಸ್ಟೋಕ್ಸ್ ಅವರ ಪರಿಣಾಮಕಾರಿ ದಾಳಿಗೆ ಎದೆಯೊಡ್ಡಿ ನಿಲ್ಲಲು ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಅಬಿದ್ ಅಲಿ, ಆಜಾದ್ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಬಿಟ್ಟರೆ ಉಳಿದವರೆಲ್ಲರೂ ಬೇಗನೇ ಕ್ರೀಸ್ ತೊರೆದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಾಕಿಸ್ತಾನ: 109.3 ಓವರ್‌ಗಳಲ್ಲಿ 326; ಇಂಗ್ಲೆಂಡ್: 70.3 ಓವರ್‌ಗಳಲ್ಲಿ 219 (ಓಲಿ ಪೋಪ್ 62, ಜೋಸ್ ಬಟ್ಲರ್ 38, ಸ್ಟುವರ್ಟ್ ಬ್ರಾಡ್ ಔಟಾಗದೆ 29; ಮೊಹಮ್ಮದ್ ಅಬ್ಬಾಸ್ 33ಕ್ಕೆ2, ಯಾಸೀರ್ ಶಾ 66ಕ್ಕೆ4, ಶಾದಾಬ್ ಖಾನ್ 13ಕ್ಕೆ2), ಎರಡನೇ ಇನಿಂಗ್ಸ್: ಪಾಕಿಸ್ತಾನ: 44 ಓವರ್‌ಗಳಲ್ಲಿ 8 ವಿಕೆಟ್‌ಗೆ 137 (ಅಬಿದ್ ಅಲಿ 20, ಆಜಾದ್ ಶಫೀಕ್ 29, ಮೊಹಮ್ಮದ್ ರಿಜ್ವಾನ್ 27; ಸ್ಟುವರ್ಟ್‌ ಬ್ರಾಡ್ 23ಕ್ಕೆ2, ಕ್ರಿಸ್ ವೋಕ್ಸ್ 11ಕ್ಕೆ2, ಬೆನ್ ಸ್ಟೋಕ್ಸ್ 11ಕ್ಕೆ2) ಮೂರನೇ ದಿನದಾಟದ ಮುಕ್ತಾಯಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT