ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪ್ಸ್ ಫೌಂಡೇಷನ್‌ನಿಂದ ಹಾಕಿ ಪಟು ಎಂ.ಪಿ.ಸಿಂಗ್‌ ಚಿಕಿತ್ಸೆಗೆ ನೆರವು

Last Updated 20 ನವೆಂಬರ್ 2020, 6:34 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಕ್ರಿಕೆಟಿಗ ಸುನಿಲ್‌ ಗಾವಸ್ಕರ್ ಅವರ ‘ದ ಚಾಂಪ್ಸ್ ಫೌಂಡೇಷನ್‘ ಸಂಸ್ಥೆಯು, ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹಾಕಿ ಆಟಗಾರ ಮೋಹಿಂದರ್ ಪಾಲ್‌ ಸಿಂಗ್ ಅವರ ನೆರವಿಗೆ ಧಾವಿಸಿದೆ. ಆರ್ಥಿಕ ತೊಂದರೆಯಿಂದ ನಲುಗುತ್ತಿರುವ ಕ್ರೀಡಾಪಟುಗಳಿಗೆ ಸಹಾಯಹಸ್ತ ಚಾಚುವ ಕಾರ್ಯವನ್ನು ಚಾಂಪ್ಸ್ ಫೌಂಡೇಷನ್‌ ಮಾಡುತ್ತ ಬಂದಿದೆ.

ಎಂ.ಪಿ. ಸಿಂಗ್ ಎಂದೇ ಹೆಸರಾಗಿರುವ58 ವರ್ಷದ ಮೊಹಿಂದರ್ ಪಾಲ್ ಸಿಂಗ್, ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದು, ಡಯಾಲಿಸಿಸ್‌ ಮಾಡಿಸಿಕೊಂಡಿದ್ದಾರೆ. ಕಸಿಗಾಗಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ನಮ್ಮ ದೇಶದ ಒಲಿಂಪಿಕ್ಸ್ ಅಥ್ಲೀಟ್‌ ಎಂ.ಪಿ.ಸಿಂಗ್‌ ಕಷ್ಟದಲ್ಲಿದ್ದಾರೆ ಎಂದು ಮಾಧ್ಯಮದ ಮೂಲಕ ತಿಳಿದುಬಂತು. ಶಿಕ್ಷಣ, ಆರೋಗ್ಯ, ಮಕ್ಕಳು ಹಾಗೂ ಹಿರಿಯ ನಾಗರಿಕರಿಗಾಗಿ ಹಲವು ಫೌಂಡೇಷನ್‌ಗಳು ಕಾರ್ಯನಿರ್ವಹಿಸುತ್ತಿವೆ. ಮಾಜಿ ಕ್ರೀಡಾಪಟುಗಳ ನೆರವಿಗಾಗಿ ನಾನು ಈ ಸಂಸ್ಥೆಯನ್ನು ಸ್ಥಾಪಿಸಿ ಸಹಾಯ ಒದಗಿಸುತ್ತಿದ್ದೇನೆ‘ ಎಂದು ಗಾವಸ್ಕರ್‌ ಹೇಳಿದ್ದಾರೆ.

1988ರಲ್ಲಿ ಸೋಲ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಸಿಂಗ್ ಅವರು ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದರು. ಮೊಹಮ್ಮದ್‌ ಶಾಹೀದ್‌, ಎಂ.ಎಂ.ಸೋಮಯ್ಯ, ಜ್ಯೂಡ್ ಫೆಲಿಕ್ಸ್ ಹಾಗೂ ಪರ್ಗತ್‌ ಸಿಂಗ್‌ ಅವರೊಂದಿಗೆ ಆಡಿದ್ದರು.

ಚಾಂಪ್ಸ್‌ ಫೌಂಡೇಷನ್‌ ಇದುವರೆಗೆ 21 ಅಥ್ಲೀಟ್‌ಗಳಿಗೆ ಪ್ರತಿ ತಿಂಗಳಿಗೆ ಇಂತಿಷ್ಟು ಎಂದು ಧನಸಹಾಯ ಒದಗಿಸುತ್ತಿದೆ. ಅವರ ಔಷಧಿ ಮತ್ತಿತರ ವೆಚ್ಚಗಳನ್ನು ಭರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT