ಬುಧವಾರ, ಮೇ 25, 2022
31 °C

20ನೇ ಓವರ್ ಮೇಡನ್, 4 ವಿಕೆಟ್; ಉಮ್ರಾನ್ ಮಲಿಕ್ ಜಾದೂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಇತಿಹಾಸದಲ್ಲೇ 20ನೇ ಓವರ್ ಮೇಡನ್ ಎಸೆದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಲಗೈ ವೇಗದ ಬೌಲರ್ ಉಮ್ರಾನ್ ಮಲಿಕ್ ಪಾತ್ರರಾಗಿದ್ದಾರೆ.

ಈ ಮೂಲಕ ಲಸಿತ್ ಮಾಲಿಂಗ, ಇರ್ಫಾನ್ ಪಠಾಣ್ ಹಾಗೂ ಜೈದೇವ್ ಉನಾದ್ಕಟ್ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ: 

ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಉಮ್ರಾನ್ ಮಲಿಕ್, ವೇಗದ ಎಸೆತಗಳಿಂದ ಬ್ಯಾಟರ್‌ಗಳಿಗೆ ಸಂಕಷ್ಟವನ್ನು ಸೃಷ್ಟಿ ಮಾಡಿದರು.

ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ರನೌಟ್ ಸೇರಿದಂತೆ ನಾಲ್ಕು ವಿಕೆಟ್‌ಗಳು ಪತನಗೊಂಡವು. ಪರಿಣಾಮ ಪಂಜಾಬ್ ಕೇವಲ 151 ರನ್ನಿಗೆ ಆಲೌಟ್ ಆಯಿತು.

 

 

 

ಕೊನೆಯ ಓವರ್‌ನಲ್ಲಿ ಉಮ್ರಾನ್ ಮಲಿಕ್‌ಗೆ ಹ್ಯಾಟ್ರಿಕ್ ಮಿಸ್ ಆದರೂ ಮೂರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

 

ಒಟ್ಟಾರೆಯಾಗಿ ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್ ಸಹಿತ 28 ರನ್ ಬಿಟ್ಟುಕೊಟ್ಟು ನಾಲ್ಕು ವಿಕೆಟ್ ಕಬಳಿಸಿದರು. ಜಿತೇಶ್ ಶರ್ಮಾ, ಒಡೀನ್ ಸ್ಮಿತ್, ರಾಹುಲ್ ಚಾಹರ್ ಹಾಗೂ ವೈಭವ್ ಅರೋರಾ ವಿಕೆಟ್‌ಗಳು ಉಮ್ರಾನ್ ಪಾಲಾಯಿತು.

ಜಮ್ಮು ಮತ್ತು ಕಾಶ್ಮೀರದ 22 ವರ್ಷದ ಈ ಯುವ ಬೌಲರ್, ಗಂಟೆಗೆ ಸರಾಸರಿ 145ರಿಂದ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಮೋಡಿಗೊಳಿಸಿದ್ದಾರೆ. ಅಲ್ಲದೆ ಕ್ರಿಕೆಟ್ ತಜ್ಞರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಐಪಿಎಲ್‌ನಲ್ಲಿ 20ನೇ ಓವರ್ ಮೇಡನ್ ಸಾಧನೆ:
ಇರ್ಫಾನ್ ಪಠಾಣ್ (2008)
ಲಸಿತ್ ಮಾಲಿಂಗ (2009)
ಜೈದೇವ್ ಉನಾದ್ಕಟ್ (2017)
ಉಮ್ರಾನ್ ಮಲಿಕ್ (2022)

 

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು