ಭಾನುವಾರ, 27 ಜುಲೈ 2025
×
ADVERTISEMENT
ADVERTISEMENT

ಕೊಹ್ಲಿ–ರೋಹಿತ್‌ಗೆ 2027ರ ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಸುಲಭವಿಲ್ಲ: ಗಂಗೂಲಿ

Published : 22 ಜೂನ್ 2025, 11:25 IST
Last Updated : 22 ಜೂನ್ 2025, 11:26 IST
ಫಾಲೋ ಮಾಡಿ
0
ಕೊಹ್ಲಿ–ರೋಹಿತ್‌ಗೆ 2027ರ ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಸುಲಭವಿಲ್ಲ: ಗಂಗೂಲಿ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

–ಪಿಟಿಐ ಚಿತ್ರ

ಕೋಲ್ಕತ್ತ: 2027ರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಭಾಗವಾಗಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸ್ಥಾನ ಪಡೆಯುವುದು ಸುಲಭವಿಲ್ಲ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT
ADVERTISEMENT

‘ಎಲ್ಲರಂತೆ ಆಟವು ಅವರಿಂದ (ವಿರಾಟ್–ರೋಹಿತ್) ದೂರವಾಗುತ್ತದೆ ಮತ್ತು ಆಟದಿಂದ ಅವರು ಕೂಡ ದೂರ ಉಳಿಯುತ್ತಾರೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು’ ಎಂದು ‘ಪಿಟಿಐ’ ಸಂದರ್ಶನದಲ್ಲಿ ಗಂಗೂಲಿ ಹೇಳಿದ್ದಾರೆ.

‘2027ರ ಏಕದಿನ ವಿಶ್ವಕಪ್ ಟೂರ್ನಿಯು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಿಗದಿಯಾಗಿದೆ. ಪ್ರತಿಷ್ಠಿತ ಐಸಿಸಿ ಟೂರ್ನಿ ನಡೆಯುವ ಹೊತ್ತಿಗೆ ವಿರಾಟ್ ಕೊಹ್ಲಿಗೆ 38 ವರ್ಷ ಮತ್ತು ರೋಹಿತ್ ಶರ್ಮಾಗೆ 40 ವರ್ಷ ವಯಸ್ಸಾಗಿರುತ್ತದೆ. ಅಲ್ಲಿಯವರೆಗೆ ಭಾರತ ಒಂಬತ್ತು ದ್ವಿಪಕ್ಷೀಯ ಸರಣಿಗಳಲ್ಲಿ 27 ಏಕದಿನ ಪಂದ್ಯಗಳನ್ನು ಆಡಬೇಕಾಗಿದೆ. ಅಂದರೆ ಕೊಹ್ಲಿ ಮತ್ತು ರೋಹಿತ್ ವರ್ಷಕ್ಕೆ 15 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಸಾಧ್ಯತೆ ಕಡಿಮೆ’ ಎಂದು ಗಂಗೂಲಿ ತಿಳಿಸಿದ್ದಾರೆ.

ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಕೊಹ್ಲಿ ಮತ್ತು ರೋಹಿತ್ ಇಬ್ಬರೂ 50 ಓವರ್‌ಗಳ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕೊಹ್ಲಿ–ರೋಹಿತ್‌ ಅವರಿಗೆ ಏನಾದರೂ ಸಲಹೆ ನೀಡಲು ಬಯಸುವೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ‘ನಾನು ಯಾವುದೇ ಸಲಹೆ ನೀಡುವುದಿಲ್ಲ. ಅವರು ಕೂಡ ಆಟವನ್ನು ನನ್ನಷ್ಟೇ ತಿಳಿದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.

ADVERTISEMENT

ವಿರಾಟ್ ಒಬ್ಬ ಶ್ರೇಷ್ಠ ಆಟಗಾರ. ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಹುಡುಕುವುದು ಸುಲಭವಲ್ಲ, ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಕೊಹ್ಲಿ–ರೋಹಿತ್‌ ಅವರಂತಹ ದಿಗ್ಗಜ ಆಟಗಾರರ ನಿವೃತ್ತಿಯ ನಂತರವೂ ಟೀಮ್ ಇಂಡಿಯಾ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ ಎಂದಿದ್ದಾರೆ.

ಇದೇ ವೇಳೆ ಯುವರಾಜ್ ಸಿಂಗ್ ಬಗ್ಗೆ ಮಾತನಾಡಿದ ಗಂಗೂಲಿ, ‘ನಾನು ನೈರೋಬಿದಲ್ಲಿ ಮೊದಲ ಬಾರಿಗೆ ಯುವರಾಜ್ ಅವರನ್ನು ನೋಡಿದಾಗ ಅವರು ‘ವಿಶೇಷ ವ್ಯಕ್ತಿ’ ಎಂದು ಅನ್ನಿಸಿತ್ತು. ಆ ನಂತರ ಅವರು ಭಾರತಕ್ಕಾಗಿ ಏಕದಿನ ಕ್ರಿಕೆಟ್‌ನಲ್ಲಿ ಏನು ಮಾಡಿದರು ಎಂಬುದು ಅವಾಸ್ತವಿಕ. ಯುವರಾಜ್ 2007ರ ಟಿ20 ವಿಶ್ವಕಪ್‌ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರ, 2011ರ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ದುರದೃಷ್ಟವಶಾತ್ ಯುವರಾಜ್‌ಗೆ ಟೆಸ್ಟ್ ಪಂದ್ಯಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಸಿಗಲಿಲ್ಲ ಎಂದು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0