‘ಬಾಂಗ್ಲಾ ತಂಡವನ್ನು ದೇವರೇ ಕಾಪಾಡಿದ’

ಶುಕ್ರವಾರ, ಮಾರ್ಚ್ 22, 2019
21 °C

‘ಬಾಂಗ್ಲಾ ತಂಡವನ್ನು ದೇವರೇ ಕಾಪಾಡಿದ’

Published:
Updated:
Prajavani

ಕ್ರೈಸ್ಟ್ ಚರ್ಚ್‌: ಭಯೋತ್ಪಾದಕರ ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾದ ಬಾಂಗ್ಲಾದೇಶ ಕ್ರಿಕೆಟ್ ತಂಡದೊಂದಿಗೆ ಬೌಲಿಂಗ್ ಕೋಚ್‌, ಕರ್ನಾಟಕದ ಸುನಿಲ್ ಜೋಶಿ ಕೂಡ ಇದ್ದರು. ಘಟನೆಯ ಬಗ್ಗೆ ಮಾತನಾಡಿದ ಅವರು ‘ಅದೊಂದು ಘೋರ ಕೃತ್ಯ. ಇದರಿಂದ ನಮ್ಮ ತಂಡವನ್ನು ದೇವರೇ ಬಚಾವ್ ಮಾಡಿದ, ದೇವರು ದೊಡ್ಡವ’ ಎಂದರು.

ದಾಳಿ ವೇಳೆ ಸುನಿಲ್‌ ಜೋಶಿ ಅವರು ತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿದ್ದರು. ನಾಲ್ಕನೇ ಟೆಸ್ಟ್ ನಡೆಯಲಿದ್ದ ಹೆಗ್ಲಿ ಓವಲ್ ಕ್ರೀಡಾಂಗಣಕ್ಕೆ ತೆರಳಲು ಸಜ್ಜಾಗುತ್ತಿದ್ದರು.

‘ಘಟನೆ ನಡೆದ ಮಸೀದಿ ಕ್ರೀಡಾಂಗಣಕ್ಕೆ ಹತ್ತಿರದಲ್ಲೇ ಇದೆ. ಇದೇ ಮಸೀದಿಗೆ ತಂಡದ ಆಟಗಾರರು ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ತೆರಳಬೇಕಿತ್ತು. ಆಟಗಾರರು ದೇವರ ಕೃಪೆಯಿಂದ ಬಚಾವಾಗಿದ್ದಾರೆ’ ಎಂದು ಜೋಶಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !