ಬೆಂಗಳೂರು: ಇಂದು ಅಹಮದಾಬಾದ್ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಮ್ಮ ಚೊಚ್ಚಲ ಕಪ್ಗಾಗಿ ಸೆಣಸಾಡಲಿವೆ. ಈ ನಡುವೆ ಯಾವ ತಂಡ ಕಪ್ ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಿದೆ.

ಐಪಿಎಲ್ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿ(2009, 2011 ಮತ್ತು 2016) ಸೋತಿದ್ದ ಆರ್ಸಿಬಿಗೆ ಇದು ನಿರ್ಣಾಯಕ ಪಂದ್ಯವಾಗಿದೆ. ಅತ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಅದು, ಆಟದುದ್ದಕ್ಕೂ ಇಡೀ ತಂಡವಾಗಿ ಹೋರಾಡಿದೆ. ಟ್ರೋಫಿ ಗೆಲ್ಲಲು ಇನ್ನೊಂದೆ ಹೆಜ್ಜೆ ಬಾಕಿಯಿದ್ದು, ಗೆಲ್ಲುವ ಅಗಾಧ ವಿಶ್ವಾಸವನ್ನೂ ಹೊಂದಿದೆ.

ಮುಂದುವರಿದು, 11 ವರ್ಷಗಳ ಬಳಿಕ ಫೈನಲ್ ಮೆಟ್ಟಿಲೇರಿರುವ ಪಂಜಾಬ್ ಕಿಂಗ್ಸ್ ತಂಡವೂ ಟ್ರೋಫಿ ಗೆಲ್ಲುವ ವಿಶ್ವಾಸ ಹೊಂದಿದೆ. ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರ ಮೇಲೆ ಅಚಲ ನಂಬಿಕೆ ಇಟ್ಟಿರುವ ತಂಡ ಕಪ್ ಗೆದ್ದೆ ತೀರುವುದಾಗಿ ತಿಳಿಸಿದೆ. ಅಲ್ಲದೇ ಆರ್ಸಿಬಿಯನ್ನು ಫೈನಲ್ನಲ್ಲಿ ಬಗ್ಗುಬಡಿಯುವುದು ಅದರ ಪ್ರಮುಖ ಗುರಿಯಾಗಿದೆ.

ಇನ್ನು, ಕಪ್ ಯಾರು ಗೆಲ್ಲಬಹುದೆಂಬ ಪ್ರಶ್ನೆಯನ್ನು ಚಾಟ್ಜಿಪಿಟಿ, ಜೆಮಿನಿ ಮತ್ತು ಗ್ರೋಕ್ನಂತಹ ಜನಪ್ರಿಯ ಕೃತಕ ಬುದ್ದಿಮತ್ತೆ(ಎಐ) ಪ್ಲಾರ್ಟ್ಫಾರ್ಮ್ಗಳಿಗೆ ಕೇಳಿದಾಗ ಅವುಗಳು ನೀಡಿದ ಉತ್ತರ ಎಲ್ಲರಲ್ಲಿಯೂ ಅಚ್ಚರಿ ಉಂಟುಮಾಡಿವೆ. ಅವುಗಳೆಲ್ಲವೂ ಆರ್ಸಿಬಿಯನ್ನೇ ಆಯ್ಕೆ ಮಾಡಿರುವುದು ಇದಕ್ಕೆ ಕಾರಣ.

ಕಪ್ ಯಾರು ಗೆಲ್ಲುತ್ತಾರೆಂಬ ಪ್ರಶ್ನೆಗೆ ಎಐಗಳು ನೀಡಿದ ಉತ್ತರಗಳು ಕೆಳಗಿನಂತಿವೆ....

ಎಕ್ಸ್ ಗ್ರೋಕ್ (X GROK)

ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಹೇಳುವುದಾದರೆ ಆರ್ಸಿಬಿ ಕಪ್ ಗೆಲ್ಲುವ ಸಾಧ್ಯತೆಯಿದೆ. ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅವರು ಫೈನಲ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. 101 ರನ್ಗಳಿಗೆ ಪಂಜಾಬ್ ತಂಡವನ್ನು ಆಲೌಟ್ ಮಾಡಿದ್ದ ಆರ್ಸಿಬಿ, ಪಂಜಾಬ್ ನೀಡಿದ್ದ ಗುರಿಯನ್ನು 60 ಎಸೆತಗಳು ಬಾಕಿ ಇರುವಾಗಲೇ ಮುಟ್ಟಿತ್ತು.

ಆರ್ಸಿಬಿಯ ಬೌಲಿಂಗ್ ಉತ್ತಮವಾಗಿದ್ದು, ವಿಕೆಟ್ ಕೀಳುವುದರಲ್ಲಿ ಜೋಶ್ ಹ್ಯಾಜಲ್ವುಡ್ (11 ಪಂದ್ಯಗಳಲ್ಲಿ 21 ವಿಕೆಟ್ಗಳು) ಮತ್ತು ಸುಯಾಶ್ ಶರ್ಮಾ ಮುಂದಿದ್ದಾರೆ. ಬ್ಯಾಟಿಂಗ್ ಕೂಡ ಉತ್ತಮ ಸ್ಥಿತಿಯಲ್ಲಿದ್ದು, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಉತ್ತಮ ಫಾರ್ಮ್ನಲ್ಲಿದ್ದಾರೆ.

ಅದಾಗ್ಯೂ, ಕ್ವಾಲಿಫೈಯರ್ 2ರಲ್ಲಿ ಪಂಜಾಬ್ ತಂಡವು ಪ್ರಬಲ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ. ಶ್ರೇಯಸ್ ಅಯ್ಯರ್, ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ಜಿತೇಶ್ ಶರ್ಮಾ ಉತ್ತಮ ಫಾರ್ಮ್ನಲ್ಲಿದ್ದಾರೆ. ಕೈಲ್ ಜೇಮಿಸನ್, ಯಜುವೇಂದ್ರ ಚಾಹಲ್ ಬೌಲಿಂಗ್ ಸಾಮರ್ಥ್ಯವನ್ನು ಕಡೆಗಣಿಸುವಂತಿಲ್ಲ. ಆದರೆ, ಕ್ವಾಲಿಫೈಯರ್–1ರಲ್ಲಿ ಆರ್ಸಿಬಿ ಎದುರು ಸೋತಿರುವುದು ಅವರ ಸಾಮರ್ಥ್ಯವನ್ನು ಅಲ್ಪ ತಗ್ಗಿಸಿದಂತೆ ಕಾಣಿಸುತ್ತಿದೆ.

ಆರ್ಸಿಬಿಯ ಫಾರ್ಮ್, ಉತ್ಸಾಹ ಮತ್ತು ತಂಡದ ಒಗ್ಗಟ್ಟನ್ನು ಗಮನಿಸಿದರೆ, ಫೈನಲ್ನಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ನನಗನಿಸುತ್ತದೆ. ಮಳೆ ಬಂದರೆ ಈ ಅದೃಷ್ಟ ಪಂಜಾಬ್ ಪಾಲಾಗುವ ಸಾಧ್ಯತೆಯಿದೆ.

ಜೆಮಿನಿ (Gemini)

ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿಯಲು ಉತ್ಸುಕರಾಗಿರುವ ಎರಡು ತಂಡಗಳ ನಡುವಿನ ಬಹುನಿರೀಕ್ಷಿತ ಫೈನಲ್ ಇದಾಗಿದೆ. ಈ ಋತುವಿನ ಇತ್ತೀಚಿನ ಪಂದ್ಯಗಳು ಮತ್ತು ಅರ್ಹತಾ ಸುತ್ತಿನ ಪ್ರದರ್ಶನದ ಆಧಾರದ ಮೇಲೆ ಆರ್ಸಿಬಿ ಸ್ವಲ್ಪ ಮುನ್ನಡೆ ಸಾಧಿಸಬಹುದಾದರೂ, ಪಂಜಾಬ್ ಕಿಂಗ್ಸ್ ತಂಡವನ್ನು ಅನ್ನು ಕಡೆಗಣಿಸುವಂತಿಲ್ಲ.

ಹಿಂದಿನ ಪಂದ್ಯಗಳನ್ನು ಗಮನಿಸಿ ಇವತ್ತಿನ ಫಲಿತಾಂಶವನ್ನು ಹೇಳಲು ಆಗುವುದಿಲ್ಲ. ಏಕೆಂದರೆ ಫಲಿತಾಂಶವು ಆ ದಿನದ ಆಟದ ಮೇಲೆ ನಿರ್ಧಾರವಾಗುತ್ತದೆ. ಟಾಸ್ ಮತ್ತು ಮಳೆ ಇಲ್ಲಿ ನಿರ್ಣಾಯಕವಾಗಿದೆ.

ಈ ತಂಡವೇ ಟ್ರೋಫಿ ಗೆಲ್ಲುತ್ತದೆ ಎಂದು ನಿರ್ಧಿಷ್ಟವಾಗಿ ಊಹೆ ಮಾಡುವುದು ನನಗೆ ಕಷ್ಟವಾಗಿದೆ. ಏಕೆಂದರೆ ಎರಡು ತಂಡಗಳು ಚೊಚ್ಚಲ ಕಪ್ ಗೆಲ್ಲಲು ಬಲವಾದ ಕಾರಣಗಳನ್ನು ಹೊಂದಿವೆ. ಆದಾಗ್ಯೂ, ಆಯ್ಕೆ ಮಾಡಲೇಬೇಕೆಂದರೆ ನಾನು ಆರ್ಸಿಬಿ ಹೆಸರನ್ನು ಸೂಚಿಸುತ್ತೇನೆ.

ಚಾಟ್ಜಿಪಿಟಿ(ChatGPT)

ಆರ್ಸಿಬಿಯ ಸ್ಥಿರ ಫಾರ್ಮ್ ಮತ್ತು ಪಂಜಾಬ್ ವಿರುದ್ಧ ಕ್ವಾಲಿಫೈಯರ್ 1 ರಲ್ಲಿನ ನಿರ್ಣಾಯಕ ಗೆಲುವು ಅವರನ್ನು ಫೈನಲ್ಗೆ ನೆಚ್ಚಿನ ತಂಡವೆಂದು ಪರಿಗಣಿಸಲಾಗಿದೆ. ಆದಾಗ್ಯೂ,ಪಂಜಾಬ್ನ ಇತ್ತೀಚಿನ ಪ್ರದರ್ಶನ ಮತ್ತು ಶ್ರೇಯಸ್ ಅಯ್ಯರ್ ಅವರ ನಾಯಕತ್ವವು ಗಮನಾರ್ಹ ಸವಾಲನ್ನು ಒಡ್ಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.