ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA World Cup: ಡೆನ್ಮಾರ್ಕ್‌ ಕಟ್ಟಿಹಾಕಿದ ಟ್ಯುನೀಷ್ಯಾ

Last Updated 23 ನವೆಂಬರ್ 2022, 2:46 IST
ಅಕ್ಷರ ಗಾತ್ರ

ಅಲ್ ರಯ್ಯಾನ್, ಕತಾರ್‌ : ಅಮೋಘ ಆಟವಾಡಿದ ಟ್ಯುನೀಷ್ಯಾ ತಂಡ ವಿಶ್ವಕಪ್‌ ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಪ್ರಬಲ ಡೆನ್ಮಾರ್ಕ್‌ ತಂಡವನ್ನು ಗೋಲುರಹಿತ ಡ್ರಾದಲ್ಲಿ ಕಟ್ಟಿಹಾಕಿತು.

ಫಿಫಾ ರ‍್ಯಾಂಕಿಂಗ್‌ನಲ್ಲಿ 30ನೇ ಸ್ಥಾನದಲ್ಲಿರುವ ಟ್ಯುನೀಷ್ಯಾ ತನಗಿಂತ 20 ಸ್ಥಾನಗಳಷ್ಟು ಮೇಲೆ ಇರುವ ತಂಡಕ್ಕೆ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾಯಿತು.

ಎಜುಕೇಷನ್‌ ಸಿಟಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಗೋಲು ಗಳಿಸುವ ಹಲವು ಉತ್ತಮ ಆವಕಾಶಗಳನ್ನು ಸೃಷ್ಟಿಸಿದರೂ ‘ಫಿನಿಷಿಂಗ್‌’ನಲ್ಲಿ ನಿಖರತೆ ತೋರಲಿಲ್ಲ.

ಡೆನ್ಕಾರ್ಕ್‌ನ ಆಂಡ್ರೆಸ್‌ ಕಾರ್ನಿಲಸ್‌ ಅವರಿಗೆ ಗೋಲು ಗಳಿಸುವ ಸೊಗಸಾದ ಅವಕಾಶ ಒದಗಿಬಂದಿತ್ತು. ಆದರೆ ಚೆಂಡು ಗೋಲುಕಂಬಕ್ಕೆ ಬಡಿಯಿತು. ಪಂದ್ಯ ಕೊನೆಗೊಳ್ಳಲು ಕೆಲವೇ ನಿಮಿಷಗಳು ಇದ್ದಾಗ ಡೆನ್ಮಾರ್ಕ್‌ ಆಟಗಾರರು ‘ಹ್ಯಾಂಡ್‌ಬಾಲ್‌’ ಕಾರಣ ಮುಂದಿಟ್ಟು ಪೆನಾಲ್ಟಿ ಕಿಕ್‌ಗೆ ಮನವಿ ಮಾಡಿದರು. ಆದರೆ ರೀಪ್ಲೆ ವೀಕ್ಷಿಸಿದ ರೆಫರಿ ಸೆಸಾರ್ ರಾಮೋಸ್‌ ಅವರು ಮನವಿಯನ್ನು ತಿರಸ್ಕರಿಸಿದರು.

ಟ್ಯುನೀಷ್ಯಾ ತಂಡ ತನಗೆ ದೊರೆತ ಎರಡು ಉತ್ತಮ ಅವಕಾಶಗಳನ್ನು ಬಳಸಿಕೊಂಡಿದ್ದರೆ, ಅಚ್ಚರಿಯ ಫಲಿತಾಂಶ ಮೂಡಿಬರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT